Kajal Aggarwal Birthday: ಬರ್ತ್ಡೇ ಸಂಭ್ರಮದಲ್ಲಿ ಕಾಜಲ್ ಅಗರ್ವಾಲ್; ಪತಿ, ಮಗುವಿಗಾಗಿ ಸಿನಿಮಾ ತೊರೆಯಲು ಮಗಧೀರ ಸುಂದರಿಯ ನಿರ್ಧಾರ?
ಟಾಲಿವುಡ್ ಬ್ಯೂಟಿ, ಮಗಧೀರ ಚೆಲುವೆ ಕಾಜಲ್ ಅಗರ್ವಾಲ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮದುವೆ ನಂತರ ಕಾಜಲ್ ಎ ಕಿಚ್ಲು ಎಂದು ಹೆಸರು ಬದಲಿಸಿಕೊಂಡಿರುವ ಈ ಸುಂದರಿ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
(1 / 13)
ಹುಟ್ಟುಹಬ್ಬ ಆಚರಿಸಿಕೊಳ್ಳುತಿರುವ ಮೆಚ್ಚಿನ ನಟಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. (PC: Kajal Aggarwal Facebook)
(2 / 13)
ಮದುವೆ, ಮಗು ಆದ ನಂತರ ಕೆಲವು ದಿನಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಕಾಜಲ್ ಅಗರ್ವಾಲ್ ಈಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಮೊದಲಿನಂತೆ ಅವಕಾಶ ಗಳಿಸುತ್ತಿದ್ದಾರೆ.
(3 / 13)
ಮಗು ಆದ ನಂತರ ಬಹಳ ದಪ್ಪ ಇದ್ದ ಕಾಜಲ್ ನೋಡಿ, ಇನ್ನು ಮತ್ತೆ ಈಕೆ ಸಿನಿಮಾಗೆ ಬರುವುದಿಲ್ಲ. ಕಾಜಲ್ ಸಿನಿಕರಿಯರ್ ಮುಗಿಯಿತು ಎಂದು ಕಾಲೆಳೆದವರೇ ಹೆಚ್ಚು. ಆದರೆ ಕಾಜಲ್ ವರ್ಕೌಟ್ ಮಾಡಿ ಮತ್ತೆ ಮೊದಲಿನಂತೆ ಆಗಿದ್ದಾರೆ.
(4 / 13)
ಕಾಜಲ್ ಮೂಲತ: ಮಹಾರಾಷ್ಟ್ರದ ಮುಂಬೈನವರು. 2004ರಲ್ಲಿ ಹಿಂದಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಕಾಜಲ್ 2007ರಲ್ಲಿ ಲಕ್ಷ್ಮಿ ಕಲ್ಯಾಣಂ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದರು.
(5 / 13)
ಮಹಾರಾಷ್ಟ್ರಕ್ಕೆ ಸೇರಿದವರಾದರೂ ಕಾಜಲ್ ಹೆಸರು ಮಾಡಿದ್ದು ಮಾತ್ರ ಟಾಲಿವುಡ್ನಲ್ಲಿ. ಈ ಚೆಲುವೆ ಈಗ ತೆಲುಗು ಹುಡುಗಿಯೇ ಆಗಿ ಹೋಗಿದ್ದಾರೆ. ತೆಲುಗಿನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟಿಯರಲ್ಲಿ ಕಾಜಲ್ ಕೂಡಾ ಒಬ್ಬರು.
(6 / 13)
ಚಂದಮಾಮ, ಸರೋಜಾ, ಆಟಾಡಿಸ್ತಾ, ಮಗಧೀರ, ಆರ್ಯ 2, ಡಾರ್ಲಿಂಗ್, ಬೃಂದಾವನಂ, ಮಿಸ್ಟರ್ ಪರ್ಫೆಕ್ಟ್, ಸಿಂಗಂ, ಬ್ಯುಸ್ನೆಸ್ಮ್ಯಾನ್, ತುಪಾಕಿ, ನಾಯಕ್, ಟೆಂಪರ್, ಮಾರಿ, ಸೈಜ್ ಝೀರೋ, ಎಂಎಲ್ಎ, ಕವಚಂ, ಸೀತಾ ಸೇರಿ ಅನೇಕ ತೆಲುಗು ಸಿನಿಮಾಗಳಲ್ಲಿ ಕಾಜಲ್ ನಟಿಸಿದ್ದಾರೆ.
(7 / 13)
ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಕಾಜಲ್ ಅಗರ್ವಾಲ್ 2020 ರಲ್ಲಿ ತಮ್ಮ ಧೀರ್ಘಕಾಲದ ಸ್ನೇಹಿತ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಪ್ರಾಜೆಕ್ಟ್ಗಳನ್ನು ಮುಗಿಸಿ ಫ್ಯಾಮಿಲಿ ಕಡೆಗೆ ಗಮನ ನೀಡಿದರು.
(8 / 13)
ಏಪ್ರಿಲ್ 2022ರಲ್ಲಿ ಕಾಜಲ್ ಅಗರ್ವಾಲ್ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ನೀಲ್ ಕಿಚ್ಲು ಎಂದು ಹೆಸರಿಟ್ಟಿದ್ದಾರೆ.
(9 / 13)
3 ವರ್ಷಗಳ ಗ್ಯಾಪ್ ಬಳಿಕ ಕಾಜಲ್ ಮತ್ತೆ ಮೊದಲಿನಂತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಗರ್ಭಿಣಿ ಆಗಿದ್ದಾಗ ದಪ್ಪ ಇದ್ದ ಕಾಜಲ್ ಈಗ ಮತ್ತೆ ಸ್ಲಿಮ್ ಆಗಿದ್ದಾರೆ.
(11 / 13)
ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಪತಿ ಹಾಗೂ ಮಗುವಿನ ಕಡೆಗೆ ಸರಿಯಾಗಿ ಗಮನ ನೀಡಲಾಗುತ್ತಿಲ್ಲ. ಆದ್ದರಿಂದ ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿ ಕಾಜಲ್ ನಟನೆಗೆ ಶಾಶ್ವತವಾಗಿ ಗುಡ್ ಬೈ ಹೇಳಲಿದ್ದಾರೆ ಎಂದು ಟಾಲಿವುಡ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
(12 / 13)
ಕಾಜಲ್ ನಿರ್ಧಾರ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ನಿರ್ಧಾರ ಬದಲಿಸಿ, ಚಿತ್ರರಂಗ ತೊರೆಯುವ ಯೋಚನೆ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು