ಬಾಲಿವುಡ್ ಆಫರ್ ಸಿಗ್ತಿದ್ದಂತೆ ದುಪ್ಪಟ್ಟು ಸಂಭಾವನೆಗೆ ಕೀರ್ತಿ ಸುರೇಶ್ ಡಿಮ್ಯಾಂಡ್! ಎಷ್ಟು ಕೋಟಿಯಿಂದ ಎಷ್ಟು ಕೋಟಿಗೆ?
- ಸೌತ್ ನಟಿ ಕೀರ್ತಿ ಸುರೇಶ್ ಟಾಲಿವುಡ್ ಮತ್ತು ಕಾಲಿವುಡ್ ಸ್ಟಾರ್ ನಾಯಕಿಯರಲ್ಲಿ ಒಬ್ಬರು. ಇದೀಗ ಇದೇ ನಟಿ ತಮಿಳಿನ ತೇರಿ ಸಿನಿಮಾದ ರಿಮೇಕ್ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ 'ಬೇಬಿ ಜಾನ್' ಎಂದು ಹೆಸರಿಡಲಾಗಿದ್ದು, ಈ ಚಿತ್ರಕ್ಕಾಗಿ ಸಂಭಾವನೆಯನ್ನೂ ಡಬಲ್ ಮಾಡಿಕೊಂಡಿದ್ದಾರೆ ಕೀರ್ತಿ ಸುರೇಶ್.

(1 / 5)
ತಮಿಳಿನ ತೇರಿ ಸಿನಿಮಾ, ಬೇಬಿ ಜಾನ್ ಹೆಸರಿನಲ್ಲಿ ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದೆ. ವರುಣ್ ಧವನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ನಿರ್ದೇಶಕ ಅಟ್ಲೀ ನಿರ್ಮಿಸುತ್ತಿದ್ದಾರೆ. ಕಲೀಸ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
(2 / 5)
ಬೇಬಿ ಜಾನ್ ಚಿತ್ರದಲ್ಲಿ ಕೀರ್ತಿ ಸುರೇಶ್ ಅವರೊಂದಿಗೆ ವಮಿಕಾ ಗಬ್ಬಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಕೀರ್ತಿಗೆ ನಾಯಕಿಯಾಗಿ ಇದು ಮೊದಲ ಬಾಲಿವುಡ್ ಚಿತ್ರವಾಗಿದೆ.
(3 / 5)
ಈ ಬಾಲಿವುಡ್ ಚೊಚ್ಚಲ ಚಿತ್ರಕ್ಕಾಗಿ ಕೀರ್ತಿ ಸುರೇಶ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ. ಬೇಬಿ ಜಾನ್ ಚಿತ್ರಕ್ಕಾಗಿ ಕೀರ್ತಿ ಸುರೇಶ್ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
(4 / 5)
ಸದ್ಯ ಕೀರ್ತಿ ಸುರೇಶ್ ತಮಿಳಿನ ಪ್ರತಿ ಚಿತ್ರಕ್ಕೂ 2 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ಬಾಲಿವುಡ್ ಚಿತ್ರಕ್ಕಾಗಿ ಸಂಭಾವನೆಯನ್ನು ದ್ವಿಗುಣಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇತರ ಗ್ಯಾಲರಿಗಳು