ತೆಲುಗಿನಲ್ಲಿ ಹೆಚ್ಚುತ್ತಿವೆ ಆಫರ್; ಬಾಲಿವುಡ್ ಬಿಟ್ಟು ಟಾಲಿವುಡ್‌ನಲ್ಲೇ ನೆಲೆಯೂರುತ್ತಾರಾ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್?
Devara Movie: ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ದೇವರ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವುದು ತಿಳಿದ ವಿಚಾರ. ಕೆಲವು ದಿನಗಳಿಂದ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ದೇವರ ಚಿತ್ರದ ಬಗ್ಗೆ ಜಾನ್ವಿಗೆ ಬಹಳ ಭರವಸೆ ಇದೆಯಂತೆ.
(1 / 7)
2018 ರಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಜಾನ್ವಿ ಕಪೂರ್‌ಗೆ ಇದುವರೆಗೆ ಉತ್ತಮ ಹಿಟ್ ಸಿಕ್ಕಿಲ್ಲ. ಒಂದೆಡೆ ದೊಡ್ಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಲೇ ನಾಯಕಿ ಪ್ರಧಾನ ಚಿತ್ರಗಳನ್ನೂ ಜಾನ್ವಿ ಮಾಡಿದ್ದಾರೆ. ಆ ಸಿನಿಮಾಗಳು ನಟನೆಯ ವಿಷಯದಲ್ಲಿ ಪ್ರಶಂಸೆ ಪಡೆದರೂ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡಲಿಲ್ಲ. ಹಾಗಾಗಿ ಇಂದಿಗೂ ಜಾನ್ವಿ ಹೆಸರು ನೆನಪಾಗುವ ಕಮರ್ಷಿಯಲ್ ಚಿತ್ರ ಬಂದಿಲ್ಲ.
(2 / 7)
ಜಾನ್ವಿ ಕಪೂರ್‌ಗೆ ಬಹಳ ಮುನ್ನವೇ ತೆಲುಗು ಸಿನಿಮಾದಿಂದ ಆಫರ್ ಬಂದಿತ್ತು. ಆದರೆ ಈ ಚೆಲುವೆಗೆ ಅಮ್ಮನಂತೆ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ಇಷ್ಟವಿರಲಿಲ್ಲ. ಆದರೆ ಟಾಲಿವುಡ್‌ನಿಂದ ಪ್ಯಾನ್ ಇಂಡಿಯಾ ಚಿತ್ರಗಳು ಸೂಪರ್ ಹಿಟ್ ಆದಾಗ ಜಾನ್ವಿ ಮನಸ್ಸು ಬದಲಾಯಿಸಿದರು. ಜಾನ್ವಿ ಜೊತೆಗೆ ಬಾಲಿವುಡ್‌ನ ಹಲವು ನಟರು ಈಗ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
(3 / 7)
ಕೊರಟಾಲ ಶಿವ ನಿರ್ದೇಶನದ ದೇವರ ಭಾಗ-1 ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್‌ಗೆ ನಾಯಕಿಯಾಗುವ ಮೂಲಕ ಕೊನೆಗೂ ಶ್ರೀದೇವಿ ಪುತ್ರಿ ದಕ್ಷಿಣಕ್ಕೆ ಬಂದಿದ್ದಾರೆ. ಈ ಸಿನಿಮಾದಲ್ಲಿ ಜಾನ್ವಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 27 ರಂದು ಥಿಯೇಟರ್‌ಗೆ ಬರಲಿದೆ. ದೇವರ ಭಾಗ-2 ಮುಂದಿನ ವರ್ಷ ತೆರೆ ಕಾಣಲಿದೆ.
(4 / 7)
ದೇವರ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿದೆ ಅನ್ನೋದು ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟ್ರೈಲರ್‌ನಿಂದ ಸಾಬೀತಾಗಿದೆ. ಸಿನಿಮಾ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
(5 / 7)
ದೇವರ ಮಾತ್ರವಲ್ಲ, ಜಾನ್ವಿ ಕಪೂರ್, ರಾಮ್ ಚರಣ್ ಮತ್ತು ಬುಚ್ಚಿ ಬಾಬು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾದಲ್ಲಿ ಕೂಡಾ ನಟಿಸಲಿದ್ದಾರೆ. ಇದು ರಾಮ್‌ಚರಣ್ 1ನೇ ಸಿನಿಮಾ. ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರಕ್ಕೆ ಕ್ಲಾಪ್ ಮಾಡಿದರು. ಈ ಸಿನಿಮಾಗಳ ಜೊತೆಗೆ ಜಾನ್ವಿಗೆ ತೆಲುಗಿನಲ್ಲಿ ಇನ್ನಷ್ಟು ಆಫರ್‌ಗಳು ಬರುತ್ತಿವೆಯಂತೆ. ಈ ಚೆಲುವೆ ತೆಲುಗಿನಲ್ಲಿ ನೆಲೆಯೂರುವ ಸಾಧ್ಯತೆ ಇದೆ.
(6 / 7)
ಜಾನ್ವಿ ಕಪೂರ್ ಸಿನಿಮಾಗಳಲ್ಲಿ ಹೇಳಿಕೊಳ್ಳುವಂತ ಹಿಟ್ ಸಿಗದಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿರುವ ಈ ಬ್ಯೂಟಿ, ಆಗಾಗ್ಗೆ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 25.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಇತರ ಗ್ಯಾಲರಿಗಳು