ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rashmika Mandanna: ‘ಮಾಸ್ಟರ್‌’ ಚಿತ್ರದಿಂದ ‘ಗೇಮ್‌ ಚೇಂಜರ್‌’ವರೆಗೆ; ರಶ್ಮಿಕಾ ಮಂದಣ್ಣ ರಿಜೆಕ್ಟ್‌ ಮಾಡಿದ ಬಿಗ್‌ ಬಜೆಟ್‌ ಸಿನಿಮಾಗಳಿವು

Rashmika Mandanna: ‘ಮಾಸ್ಟರ್‌’ ಚಿತ್ರದಿಂದ ‘ಗೇಮ್‌ ಚೇಂಜರ್‌’ವರೆಗೆ; ರಶ್ಮಿಕಾ ಮಂದಣ್ಣ ರಿಜೆಕ್ಟ್‌ ಮಾಡಿದ ಬಿಗ್‌ ಬಜೆಟ್‌ ಸಿನಿಮಾಗಳಿವು

 ಕನ್ನಡತಿ, ಸೌತ್‌ ಸುಂದರಿ ರಶ್ಮಿಕಾ ಮಂದಣ್ಣ, ಸದ್ಯ ದಕ್ಷಿಣದ ಸಿನಿಮಾಗಳು ಮತ್ತು ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಒಪ್ಪಿಕೊಂಡು ಬಿಜಿಯಾಗಿದ್ದಾರೆ. ನಿಮಗೆ ಗೊತ್ತಿರಲಿ, ಇದೇ ರಶ್ಮಿಕಾ ಮಂದಣ್ಣ ಈ ಮೊದಲು ಬಿಗ್‌ ಬಜೆಟ್‌ನ ಹಲವು ಸಿನಿಮಾಗಳನ್ನು ರಿಜೆಕ್ಟ್‌ ಮಾಡಿದ್ದಾರೆ. ಆ ಸಿನಿಮಾಗಳು ಯಾವವು? ಹೀಗಿದೆ ಮಾಹಿತಿ.  

ರಾಮ್ ಚರಣ್ ಮತ್ತು ಶಂಕರ್ ಕಾಂಬಿನೇಷನ್‌ ಗೇಮ್ ಚೇಂಜರ್ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಅನಿಮಲ್ ಮತ್ತು ಪುಷ್ಪ 2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರಿಂದ ರಶ್ಮಿಕಾಗೆ ಗೇಮ್ ಚೇಂಜರ್ ಚಿತ್ರಕ್ಕೆ ಡೇಟ್ಸ್‌ ಹೊಂದಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಈ ದೊಡ್ಡ ಬಜೆಟ್ ಸಿನಿಮಾ ಕೈ ಬಿಡಬೇಕಾಯ್ತು.
icon

(1 / 5)

ರಾಮ್ ಚರಣ್ ಮತ್ತು ಶಂಕರ್ ಕಾಂಬಿನೇಷನ್‌ ಗೇಮ್ ಚೇಂಜರ್ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಅನಿಮಲ್ ಮತ್ತು ಪುಷ್ಪ 2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರಿಂದ ರಶ್ಮಿಕಾಗೆ ಗೇಮ್ ಚೇಂಜರ್ ಚಿತ್ರಕ್ಕೆ ಡೇಟ್ಸ್‌ ಹೊಂದಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಈ ದೊಡ್ಡ ಬಜೆಟ್ ಸಿನಿಮಾ ಕೈ ಬಿಡಬೇಕಾಯ್ತು.(Instagram/ Rashmika Mandanna)

ರಶ್ಮಿಕಾ ಮಂದಣ್ಣ ತಮಿಳಿನ ಮಾಸ್ಟರ್ ಚಿತ್ರದಲ್ಲಿ ದಳಪತಿ ವಿಜಯ್ ಜತೆಗೆ ರೊಮ್ಯಾನ್ಸ್ ಮಾಡಬೇಕಿತ್ತು. ಆದರೆ ನಾಯಕಿಯ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದ ಕಾರಣ ರಶ್ಮಿಕಾ ಈ ಚಿತ್ರವನ್ನು ತಿರಸ್ಕರಿಸಿದರು. ಮಾಸ್ಟರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬದಲಿಗೆ ಮಾಳವಿಕಾ ಮೋಹನನ್ ನಾಯಕಿಯಾಗಿ ನಟಿಸಿದ್ದಾರೆ. 
icon

(2 / 5)

ಜರ್ಸಿ ಚಿತ್ರದ ಹಿಂದಿ ರಿಮೇಕ್‌ನಲ್ಲಿ ರಶ್ಮಿಕಾಗೆ ಅವಕಾಶ ಸಿಕ್ಕಿತು. ಮಗುವಿನ ತಾಯಿಯಾಗಿ ತನ್ನ ಇಮೇಜ್‌ಗೆ ಸರಿಹೊಂದದ ಪಾತ್ರವಾದ್ದರಿಂದ ರಶ್ಮಿಕಾ ಈ ಸಿನಿಮಾ ಕೈಬಿಟ್ಟಿದ್ದರು.  
icon

(3 / 5)

ಜರ್ಸಿ ಚಿತ್ರದ ಹಿಂದಿ ರಿಮೇಕ್‌ನಲ್ಲಿ ರಶ್ಮಿಕಾಗೆ ಅವಕಾಶ ಸಿಕ್ಕಿತು. ಮಗುವಿನ ತಾಯಿಯಾಗಿ ತನ್ನ ಇಮೇಜ್‌ಗೆ ಸರಿಹೊಂದದ ಪಾತ್ರವಾದ್ದರಿಂದ ರಶ್ಮಿಕಾ ಈ ಸಿನಿಮಾ ಕೈಬಿಟ್ಟಿದ್ದರು.  

ವಿಜಯ್ ಬೀಸ್ಟ್ ಚಿತ್ರದಲ್ಲಿ ಪೂಜಾ ಹೆಗ್ಡೆಗಿಂತ ಮೊದಲು ರಶ್ಮಿಕಾ ಮಂದಣ್ಣ ಅವರ ಹೆಸರನ್ನು ನಾಯಕಿಯಾಗಿ ನಿಗದಿಪಡಿಸಲಾಗಿತ್ತು, ಆದರೆ ಕಥೆ, ಚಿತ್ರದಲ್ಲಿನ ಅವರ ಪಾತ್ರ ಹಿಡಿಸದ ಹಿನ್ನೆಲೆಯಲ್ಲಿ ಆ ಸಿನಿಮಾದಿಂದಲೂ ಹೊರಬಂದಿದ್ದರು ರಶ್ಮಿಕಾ.
icon

(4 / 5)

ವಿಜಯ್ ಬೀಸ್ಟ್ ಚಿತ್ರದಲ್ಲಿ ಪೂಜಾ ಹೆಗ್ಡೆಗಿಂತ ಮೊದಲು ರಶ್ಮಿಕಾ ಮಂದಣ್ಣ ಅವರ ಹೆಸರನ್ನು ನಾಯಕಿಯಾಗಿ ನಿಗದಿಪಡಿಸಲಾಗಿತ್ತು, ಆದರೆ ಕಥೆ, ಚಿತ್ರದಲ್ಲಿನ ಅವರ ಪಾತ್ರ ಹಿಡಿಸದ ಹಿನ್ನೆಲೆಯಲ್ಲಿ ಆ ಸಿನಿಮಾದಿಂದಲೂ ಹೊರಬಂದಿದ್ದರು ರಶ್ಮಿಕಾ.

ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಹಿಂದಿಯಲ್ಲಿ ಚಿತ್ರ ಮಾಡುವ ಅವಕಾಶ ರಶ್ಮಿಕಾಗೆ ಸಿಕ್ಕಿತು, ಆದರೆ ಅನಿವಾರ್ಯ ಕಾರಣಗಳಿಂದಾಗಿ ಅವರು ಈ ಅವಕಾಶವನ್ನು ಕೈಬಿಟ್ಟರು. 
icon

(5 / 5)

ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಹಿಂದಿಯಲ್ಲಿ ಚಿತ್ರ ಮಾಡುವ ಅವಕಾಶ ರಶ್ಮಿಕಾಗೆ ಸಿಕ್ಕಿತು, ಆದರೆ ಅನಿವಾರ್ಯ ಕಾರಣಗಳಿಂದಾಗಿ ಅವರು ಈ ಅವಕಾಶವನ್ನು ಕೈಬಿಟ್ಟರು. 

IPL_Entry_Point

ಇತರ ಗ್ಯಾಲರಿಗಳು