Mahesh Babu: ಮಹೇಶ್ ಬಾಬು ಸ್ಟೈಲಿಶ್ ಅವತಾರಕ್ಕೆ ಫ್ಯಾನ್ಸ್ ಫಿದಾ; ವಯಸ್ಸೇ ಆಗ್ತಿಲ್ವಲ್ಲ ಗುರೂ ನಿಮಗೆ ಎಂದ ಅಭಿಮಾನಿಗಳು
Mahesh Babu: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಕರ್ಲಿ ಹೇರ್ ಸ್ಟೈಲ್‌ನಲ್ಲಿ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಗೊಂಚಲೊಂದನ್ನು ಶೇರ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.
(1 / 5)
ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು ಅವರ ಹೊಸ ಲುಕ್ ವೈರಲ್ ಆಗಿದೆ. ರಿಂಗ್ ಹೇರ್ ಸ್ಟೈಲ್‌ನೊಂದಿಗೆ ಮಹೇಶ್ ಸ್ಟೈಲಿಶ್ ಆಗಿ ಎದುರಾಗಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.(Photo: Instagram/urstrulymahesh)
(2 / 5)
ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಭಿಮಾನಿಗಳು ಈ ಸ್ಟೈಲಿಶ್ ಲುಕ್ ಅನ್ನು ಕೊಂಡಾಡುತ್ತಿದ್ದಾರೆ. ಮಹೇಶ್ ಬಾಬು ಅವರ ನಿಜವಾದ ವಯಸ್ಸು ಎಷ್ಟಿರಬಹುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಹೇಶ್‌ಗೆ ಹೋಲಿಸಿದರೆ ಹಾಲಿವುಡ್ ತಾರೆಗಳೂ ಏನೂ ಅಲ್ಲ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.(Instagram/urstrulymahesh)
(3 / 5)
ಇದು ಸಿನಿಮಾ ಲುಕ್ ಇರಬಹುದಾ ಅಥವಾ ಜಾಹೀರಾತಿನದ್ದಾ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. (Photo: Instagram/urstrulymahesh)
(4 / 5)
ಡೆನಿಮ್ ಬ್ಲೂ ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿ ಮಹೇಶ್ ಸೂಪರ್ ಆಗಿ ಪೋಸ್ ನೀಡಿದ್ದಾರೆ. ‘ನೀನು ಇಷ್ಟು ಚಂದ ಇರಬಾರದು.. ಇದು ಅಪರಾಧ’ ಎಂದು ಅಭಿಮಾನಿಯೊಬ್ಬ ಮಹೇಶ್ ಅವರನ್ನು ತಮಾಷೆಯಾಗಿ ಹೊಗಳಿದ್ದಾರೆ.(Photo: Instagram/urstrulymahesh)
ಇತರ ಗ್ಯಾಲರಿಗಳು