ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Trisha Birthday: ಈ ವಿಚಾರದಲ್ಲಿ ಲೇಡಿ ಸೂಪರ್‌ಸ್ಟಾರ್‌ ನಯನತಾರಾ, ಸಮಂತಾರನ್ನೇ ಹಿಂದಿಕ್ಕಿದ ತ್ರಿಷಾ ಕೃಷ್ಣನ್‌!

Trisha Birthday: ಈ ವಿಚಾರದಲ್ಲಿ ಲೇಡಿ ಸೂಪರ್‌ಸ್ಟಾರ್‌ ನಯನತಾರಾ, ಸಮಂತಾರನ್ನೇ ಹಿಂದಿಕ್ಕಿದ ತ್ರಿಷಾ ಕೃಷ್ಣನ್‌!

ಟಾಲಿವುಡ್‌ ನಟ ಚಿರಂಜೀವಿ ಅವರ ವಿಶ್ವಂಭರ ಚಿತ್ರದ ಮೂಲಕ ಸುಮಾರು ಎಂಟು ವರ್ಷಗಳ ನಂತರ ಟಾಲಿವುಡ್‌ಗೆ  ಮರಳುತ್ತಿದ್ದಾರೆ ನಟಿ ತ್ರಿಷಾ ಕೃಷ್ಣನ್. ವಸಿಷ್ಠ ಮಲ್ಲಿದಿ ನಿರ್ದೇಶನದ ಈ ಚಿತ್ರವು ಫ್ಯಾಂಟಸಿ ಎಂಟರ್ಟೈನರ್ ಆಗಿದ್ದು, 2025ರ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ದಾಖಲೆಯ ಸಂಭಾವನೆಯನ್ನೂ ಪಡೆದಿದ್ದಾರೆ ತ್ರಿಷಾ.

'ವಿಶ್ವಂಭರ' ತೆಲುಗಿನಲ್ಲಿ ಚಿರಂಜೀವಿ ಮತ್ತು ತ್ರಿಷಾ ಜೋಡಿಯಾಗಿ ನಟಿಸುತ್ತಿರುವ ಎರಡನೇ ಚಿತ್ರ. ಈ ಹಿಂದೆ ಸ್ಟಾಲಿನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿತ್ತು ಈ ಜೋಡಿ. ವಿಶ್ವಂಭರ ಚಿತ್ರದ ಮೂಲಕ ಸುಮಾರು 18 ವರ್ಷಗಳ ಸುದೀರ್ಘ ಅಂತರದ ನಂತರ ಚಿರಂಜೀವಿ ಮತ್ತು ತ್ರಿಷಾ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. 
icon

(1 / 5)

ವಿಶ್ವಂಭರ ಚಿತ್ರಕ್ಕಾಗಿ ತ್ರಿಷಾ ಸುಮಾರು 12 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರ ಸಾಲಿಗೂ ಸೇರಿದ್ದಾರೆ ತ್ರಿಷಾ. ನಯನತಾರಾ, ಸಮಂತಾ ಅವರನ್ನೂ ಹಿಂದಿಕ್ಕಿದ್ದಾರೆ ಈ ನಟಿ. 
icon

(2 / 5)

ಕಳೆದ ಕೆಲವು ವರ್ಷಗಳಿಂದ ಸೋಲುಗಳಿಂದಾಗಿ ಅವಕಾಶಗಳ ಓಟದಲ್ಲಿ ಹಿಂದುಳಿದಿರುವ ತ್ರಿಷಾ, ವಿಜಯ್ ಅವರ ಲಿಯೋ ಸಿನಿಮಾ ಮೂಲಕ ಗೆಲುವಿನ ಕಂಬ್ಯಾಕ್‌ ಮಾಡಿದ್ದರು.  ಆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 590 ಕೋಟಿ ರೂ. ಗಳಿಸಿತ್ತು.  
icon

(3 / 5)

ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನಲ್ಲಿ ನಿರ್ಮಾಣವಾಗುತ್ತಿರುವ ಥಗ್ ಲೈಫ್ ಚಿತ್ರದಲ್ಲಿಯೂ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಜಿತ್ ಜತೆಗೆ ವಿಧಾ ಮುಯಾರ್ಚಿ ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ. 
icon

(4 / 5)

ಮಲಯಾಳಂನಲ್ಲಿ ಐಡೆಂಟಿಟಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಸದ್ಯದ ಅವರ ಸಿನಿಮಾಗಳ ಲಿಸ್ಟ್‌ ನೋಡಿದರೆ, ಈ ವರ್ಷ ಅವರ ಎರಡು ಸಿನಿಮಾಗಳು ತೆರೆಗೆ ಬರಲಿವೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು