Family Star Flop: ‘ಫ್ಯಾಮಿಲಿ ಸ್ಟಾರ್’ ಚಿತ್ರದ ಹೀನಾಯ ಸೋಲು; ಸಂಭಾವನೆ ಮರಳಿಸಲು ಮುಂದಾದ ವಿಜಯ್ ದೇವರಕೊಂಡ!?
ಇತ್ತೀಚೆಗಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ವಿಜಯ ದೇವರಕೊಂಡ ನಟನೆಯ ಫ್ಯಾಮಿಲಿಸ್ಟಾರ್ ಸಿನಿಮಾ ಹೀನಾಯ ಸೋಲು ಕಂಡಿತ್ತು. ನಿರ್ಮಾಪಕರು, ವಿತರಕರು ಕೈ ಸುಟ್ಟುಕೊಂಡಿದ್ದರು. ಈ ನಡುವೆ ಸೋಲಿನ ಹೊಣೆ ಹೊತ್ತು ಸಂಭಾವನೆಯ ಹಿಂದಿರುಗಿಸಲಿದ್ದಾರಂತೆ ವಿಜಯ್ ದೇವರಕೊಂಡ.
(1 / 6)
ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಮೊದಲ ಬಾರಿಗೆ ಜೋಡಿಯಾಗಿ ಕಾಣಿಡಿಕೊಂಡಿದ್ದಾರೆ. ಈ ಹಿಂದೆ ಗೀತಾ ಗೋವಿಂದಂ ಸಿನಿಮಾ ಮಾಡಿದ್ದ ಪರಶುರಾಮ್, ಈ ಸಿನಿಮಾ ನಿರ್ದೇಶಿಸಿದರೆ, ದಿಲ್ ರಾಜು ನಿರ್ಮಾಣ ಮಾಡಿದ್ದಾರೆ.
(2 / 6)
ಸಾಕಷ್ಟು ನಿರೀಕ್ಷೆಗಳೊಂದಿಗೆ ಏಪ್ರಿಲ್ 5 ರಂದು ಬಿಡುಗಡೆಯಾದ ಫ್ಯಾಮಿಲಿ ಸ್ಟಾರ್ ಸಿನಿಮಾ, ನಿರೀಕ್ಷಿತ ಪ್ರಮಾಣದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಲಿಲ್ಲ.
(3 / 6)
ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಆದರೆ, ಕಲೆಕ್ಷನ್ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ಚಿತ್ರದ ನಿರ್ಮಾಪಕರು ಹೇಳಿಕೊಂಡಿದ್ದಾರೆ.
(4 / 6)
ಈ ನಡುವೆ ದೊಡ್ಡ ಮೊತ್ತಕ್ಕೆ ಈ ಸಿನಿಮಾವನ್ನು ವಿತರಣೆ ಮಾಡಿದ ವಿತರಕರೀಗ ಈ ಚಿತ್ರದಿಂದ ಲಾಸ್ ಆಗಿದ್ದಾರೆ ಎಂಬ ಮಾತೂ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
(5 / 6)
ಈ ನಡುವೆ ನಷ್ಟ ಅನುಭವಿಸಿದ ವಿತರಕರು, ನಿರ್ಮಾಪಕ ದಿಲ್ ರಾಜು ಅವರನ್ನು ಭೇಟಿ ಮಾಡಿದ್ದು, ಪರಿಹಾರ ಕೇಳಿದ್ದಾರೆ. ವಿತರಕರ ನಷ್ಟವನ್ನು ಭರಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಇತರ ಗ್ಯಾಲರಿಗಳು