ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Family Star ಸಿನಿಮಾ ಒಟಿಟಿಗೆ ಎಂಟ್ರಿ; ವಿಜಯ್‌ ದೇವರಕೊಂಡ ಚಿತ್ರವನ್ನು ಎಲ್ಲಿ, ಯಾವಾಗ ನೋಡಬಹುದು?

Family Star ಸಿನಿಮಾ ಒಟಿಟಿಗೆ ಎಂಟ್ರಿ; ವಿಜಯ್‌ ದೇವರಕೊಂಡ ಚಿತ್ರವನ್ನು ಎಲ್ಲಿ, ಯಾವಾಗ ನೋಡಬಹುದು?

ವಿಜಯ್‌ ದೇವರಕೊಂಡ ಮತ್ತು ಮೃಣಾಲ್‌ ಠಾಕೂರ್‌ ಜೋಡಿಯ 'ಫ್ಯಾಮಿಲಿ ಸ್ಟಾರ್' ಚಿತ್ರದ ಒಟಿಟಿ ಬಿಡುಗಡೆಯ ದಿನಾಂಕ ಫಿಕ್ಸ್‌ ಆಗಿದೆ. ಚಿತ್ರಮಂದಿರಗಳಲ್ಲಿ ತೆರೆಕಂಡ ಕೇವಲ ಮೂರೇ ವಾರಕ್ಕೆ ಒಟಿಟಿ ಅಂಗಳ ಪ್ರವೇಶಿಸಿದೆ ಈ ಸಿನಿಮಾ. ಹಾಗಾದರೆ ಈ ಸಿನಿಮಾ ವೀಕ್ಷಣೆ ಎಲ್ಲಿ, ಯಾವಾಗಿನಿಂದ? ಇಲ್ಲಿದೆ ಮಾಹಿತಿ

'ಫ್ಯಾಮಿಲಿ ಸ್ಟಾರ್' ಏಪ್ರಿಲ್ 5 ರಂದು ಚಿತ್ರಮಂದಿರಗಳಲ್ಲಿ ದೊಡ್ಡ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ವಿಜಯ್ ದೇವರಕೊಂಡ ಮತ್ತು ಸೀತಾ ರಾಮಂ ನಟಿ ಮೃಣಾಲ್ ಠಾಕೂರ್ ನಟಿಸಿದ ಈ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಲಿಲ್ಲ. ಸೋಲಿನ ಸುಳಿಗೆ ಸಿಲುಕಿ ಇದೀಗ ಒಟಿಟಿ ಕಡೆ ವಾಲಿದೆ.
icon

(1 / 5)

ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅಭಿನಯದ 'ಫ್ಯಾಮಿಲಿ ಸ್ಟಾರ್'  ಸಿನಿಮಾ ಏಪ್ರಿಲ್ 26ರಂದು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. 
icon

(2 / 5)

'ದಿ ಫ್ಯಾಮಿಲಿ ಸ್ಟಾರ್' ಏಪ್ರಿಲ್ 26 ರಂದು ಪ್ರೈಮ್ ವಿಡಿಯೋದಲ್ಲಿ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ, ಆದರೆ, ಕನ್ನಡ ಅವತರಣಿಕೆ ಬಿಡುಗಡೆ ಆಗುತ್ತಿಲ್ಲ. 
icon

(3 / 5)

'ಫ್ಯಾಮಿಲಿ ಸ್ಟಾರ್' ಚಿತ್ರವನ್ನು ಪರಶುರಾಮ್ ನಿರ್ದೇಶಿಸಿದ್ದಾರೆ. ವಿಜಯ್ ದೇವರಕೊಂಡ ಅವರ ಈ ಹಿಂದಿನ 'ಗೀತಾ ಗೋವಿಂದಂ' ಸಿನಿಮಾ ನಿರ್ದೇಶಿಸಿದ್ದು ಇದೇ ಪರಶುರಾಮ್.‌ ಆದರೆ, ಫ್ಯಾಮಿಲಿ ಸ್ಟಾರ್‌ ಅವರ ಕೈ ಹಿಡಿಯಲಿಲ್ಲ. 50 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ ಈ ಸಿನಿಮಾ 35 ಕೋಟಿಗಿಂತಲೂ ಕಡಿಮೆ ಕಲೆಕ್ಷನ್‌ ಮಾಡಿದೆ. 
icon

(4 / 5)

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ದಿವ್ಯಾಂಶಾ ಕೌಶಿಕ್, ಜಗಪತಿ ಬಾಬು, ವೆನೆಲ್ಲಾ ಕಿಶೋರ್, ರವಿ ಪ್ರಕಾಶ್, ರಾಜಾ ಚೆಂಬೋಲು ಮತ್ತು ವಾಸುಕಿ ಆನಂದ್ ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಗೋಪಿ ಸುಂದರ್ ಸಂಯೋಜಿಸಿದ್ದಾರೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು