ವಾವ್.. ಕಲ್ಕಿ ಕಣ್ತುಂಬಿಕೊಂಡೆ; ಕಲ್ಕಿ 2898 AD ಸಿನಿಮಾ ನೋಡಿದ ಬಳಿಕ ಹೊಸ ಬೇಡಿಕೆ ಇಟ್ಟ ತಲೈವಾ ರಜನಿಕಾಂತ್
- ಕಲ್ಕಿ ಭಾರತೀಯ ಚಿತ್ರರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ ಎಂದು ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
- ಕಲ್ಕಿ ಭಾರತೀಯ ಚಿತ್ರರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ ಎಂದು ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
(1 / 6)
ಭಾರತೀಯ ಚಿತ್ರರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಕಲ್ಕಿ ತಂಡವನ್ನು ಶ್ಲಾಘಿಸಿದ್ದಾರೆ. ಎರಡನೇ ಭಾಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
(2 / 6)
ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅಭಿನಯದ 'ಕಲ್ಕಿ 2898 AD' ಚಿತ್ರ ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಪಾಸಿಟಿವ್ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.
(3 / 6)
.ಮೊದಲ ದಿನವೇ 191 ಕೋಟಿಯ ದೊಡ್ಡ ಮೊತ್ತವನ್ನು ಕಲೆಹಾಕುವ ಮೂಲಕ ಹೊಸ ದಾಖಲೆ ಬರೆದಿದೆ ಕಲ್ಕಿ. ಈ ಮೂಲಕ ಬಾಹುಬಲಿ ಬಳಿಕ ಪ್ರಭಾಸ್ ವೃತ್ತಿಜೀವನದ ಎರಡನೇ ಅತಿದೊಡ್ಡ ಓಪನಿಂಗ್ ಪಡೆಯಿತು.
(HT_PRINT)(4 / 6)
ನಿರ್ದೇಶಕ ನಾಗ್ ಅಶ್ವಿನ್ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ವಿಶಿಷ್ಟ ಸೆಟ್‌ಗಳು ಮತ್ತು ವಿಎಫ್‌ಎಕ್ಸ್‌ನಿಂದಲೇ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ.
(HT_PRINT)(5 / 6)
ಪ್ರಭಾಸ್ ಅಭಿನಯದ 'ಕಲ್ಕಿ' ಸಿನಿಮಾ ಒಟ್ಟು 8500 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಕಲ್ಕಿ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಬರೋಬ್ಬರಿ 600 ಕೋಟಿ ಖರ್ಚು ಮಾಡಲಾಗಿದೆ.
(6 / 6)
ಕಲ್ಕಿ 2898 AD ಚಿತ್ರದ ತಾರಾಬಳಗವೇ ತುಂಬಾ ಬಲಿಷ್ಠವಾಗಿದೆ. ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಜೊತೆಗೆ, ಕಮಲ್ ಹಾಸನ್, ದಿಶಾ ಪಟಾನಿ, ಶಾಶ್ವತ್ ಚಟರ್ಜಿ ಮತ್ತು ಕೀರ್ತಿ ಸುರೇಶ್ ಕೂಡ ನಟಿಸಿದ್ದಾರೆ. ಮೃಣಾಲ್ ಠಾಕೂರ್, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಮ್ ಗೋಪಾಲ್ ವರ್ಮಾ ಮತ್ತು ಎಸ್ಎಸ್ ರಾಜಮೌಳಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು