Pushpa 2 The Rule: ಪುಷ್ಪ 1 ಚಿತ್ರಕ್ಕಿಂತ ರನ್ ಟೈಮ್ ಅವಧಿಯಲ್ಲಿ ಪುಷ್ಪ 2 ಎಷ್ಟು ನಿಮಿಷ ದೊಡ್ಡದು?
- Pushpa 2 The Rule Runtime: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 – ದಿ ರೂಲ್’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಡಿಸೆಂಬರ್ 05ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರವು ಗುರುವಾರ ಸಂಜೆ ಸೆನ್ಸಾರ್ ಆಗಿದೆ. ಜತೆಗೆ ಈ ಚಿತ್ರದ ರನ್ ಟೈಮ್ ಸಹ ಹೊರಬಿದ್ದಿದೆ.
- Pushpa 2 The Rule Runtime: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 – ದಿ ರೂಲ್’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಿತ್ರವು ಡಿಸೆಂಬರ್ 05ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರವು ಗುರುವಾರ ಸಂಜೆ ಸೆನ್ಸಾರ್ ಆಗಿದೆ. ಜತೆಗೆ ಈ ಚಿತ್ರದ ರನ್ ಟೈಮ್ ಸಹ ಹೊರಬಿದ್ದಿದೆ.
(1 / 6)
‘ಪುಷ್ಪ 2’ ಚಿತ್ರದ ತೆಲುಗು ಅವತರಣಿಕೆಯು ಗುರುವಾರ ಸೆನ್ಸಾರ್ ಆಗಿದ್ದು, ಚಿತ್ರವು ಮೂರು ತಾಸು 20ನಿಮಿಷ ಮತ್ತು 38 ಸಕೆಂಡ್‍ಗಳ (200.38 ನಿಮಿಷ) ಅವಧಿಯದ್ದಾಗಿದೆ ಎಂದು ಹೇಳಲಾಗಿದೆ. ಚಿತ್ರದ ಅವಧಿಯು ಮೂರು ತಾಸಿಗಳಿಗೂ ಹೆಚ್ಚು ಇರಲಿದೆ ಎಂಬ ಸುದ್ದಿ ಮೊದಲೇ ಕೇಳಿಬಂದಿತ್ತು. ಅದೀಗ ನಿಜವಾಗಿದೆ.
(2 / 6)
2021ರಲ್ಲಿ ಬಿಡುಗಡೆಯಾದ ‘ಪುಷ್ಪ 1’ ಚಿತ್ರವು 179 ನಿಮಿಷಗಳ ಅವಧಿಯದ್ದಾಗಿತ್ತು. ಅದಕ್ಕೆ ಹೋಲಿಸಿದರೆ, ಈಗ ಎರಡನೆಯ ಭಾಗವು 21 ನಿಮಿಷಗಳನ್ನು ದೊಡ್ಡದಾಗಿದೆ ಎಂಬ ಮಾಹಿತಿ ಇದೆ.
(3 / 6)
ಇನ್ನು, ‘ಪುಷ್ಪ 2’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣಪತ್ರವನ್ನು ನೀಡಿದೆಯಯಂತೆ. ಕೆಲವು ಪದಗಳನ್ನು ಮ್ಯೂಟ್ ಮಾಡುವುದರ ಜೊತೆಗೆ, ಒಂದು ದೃಶ್ಯವನ್ನು ಕತ್ತರಿಸುವುದಕ್ಕೆ ಹೇಳಲಾಗಿದೆಯಂತೆ. ಚಿತ್ರದಲ್ಲಿ ಕ್ರೌರ್ಯ ಸ್ವಲ್ಪ ಜಾಸ್ತಿಯೇ ಇದೆ ಎಂದು ಹೇಳಲಾಗಿದ್ದು, ಮಂಡಳಿ ಸೂಚಿಸಿದ ಬದಲಾವಣೆಗಳನ್ನು ಮಾಡಿದ ನಂತರ ಚಿತ್ರಕ್ಕೆ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಹೇಳಲಾಗತ್ತಿದೆ.
(4 / 6)
ಹೆಚ್ಚು ಅವಧಿಯ ಚಿತ್ರಗಳು ಹೊಸದೇನಲ್ಲ. ಕೆಲವು ವರ್ಷಗಳ ಹಿಂದೆ ಮೂರು ತಾಸಿಗೂ ಹೆಚ್ಚು ಅವಧಿಯ ಚಿತ್ರಗಳು ಸಾಕಷ್ಟು ಬಂದಿದ್ದವು. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ಚಿತ್ರ ಎಷ್ಟು ಚಿಕ್ಕದಾಗಿರುತ್ತದೋ ಮತ್ತು ನೋಡಿಸಿಕೊಂಡು ಹೋಗುತ್ತದೋ, ಅಂಥ ಚಿತ್ರಗಳಿಗೆ ಪ್ರೇಕ್ಷಕರು ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದಾರೆ.
(5 / 6)
ಆದರೂ, ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಮೂರು ತಾಸು ಅವಧಿಯ ‘RRR’ ಮತ್ತು ‘ಅನಿಮಲ್’ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾಗಿದ್ದಿದೆ. ಈಗ ‘ಪುಷ್ಪ 2’ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.
(6 / 6)
‘ಪುಷ್ಪ – ದಿ ರೂಲ್’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟಿಸಿದ್ದು, ಮಿಕ್ಕಂತೆ ಧನಂಜಯ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ಸುಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. (ವರದಿ: ಚೇತನ್ ನಾಡಿಗೇರ್)
ಇತರ ಗ್ಯಾಲರಿಗಳು