ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅತ್ಯಧಿಕ ಸಂಭಾವನೆ ಪಡೆದ ಚಿತ್ರಗಳಿವು; ಪುಷ್ಪಾ-2 ಚಿತ್ರಕ್ಕೆ ಪುಷ್ಪರಾಜ್ ಜೇಬಿಗಿಳಿಸಿಕೊಂಡಿದ್ದೆಷ್ಟು?
- ಪುಷ್ಪಾ ಸಿನಿಮಾದ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸ್ಟಾರ್ ಡಮ್ ಬದಲಾಗಿದೆ. ಇವರ ಸಿನಿಮಾಗಳು ಒಂದರ ನಂತರ ಒಂದು ಸೂಪರ್ ಹಿಟ್ ಆಗುತ್ತಿದ್ದು, ಇವರ ಸಂಭಾವನೆ ಕೂಡ ಹೆಚ್ಚಾಗಿದೆ. ಅಲ್ಲು ಅರ್ಜುನ್ ಅತಿ ಹೆಚ್ಚು ಸಂಭಾವನೆ ಪಡೆದ 10 ಚಿತ್ರಗಳು ಯಾವುವು ನೋಡಿ.
- ಪುಷ್ಪಾ ಸಿನಿಮಾದ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸ್ಟಾರ್ ಡಮ್ ಬದಲಾಗಿದೆ. ಇವರ ಸಿನಿಮಾಗಳು ಒಂದರ ನಂತರ ಒಂದು ಸೂಪರ್ ಹಿಟ್ ಆಗುತ್ತಿದ್ದು, ಇವರ ಸಂಭಾವನೆ ಕೂಡ ಹೆಚ್ಚಾಗಿದೆ. ಅಲ್ಲು ಅರ್ಜುನ್ ಅತಿ ಹೆಚ್ಚು ಸಂಭಾವನೆ ಪಡೆದ 10 ಚಿತ್ರಗಳು ಯಾವುವು ನೋಡಿ.
(1 / 11)
ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಕ್ರೇಜ್ ಎಷ್ಟಿದೆಯೆಂದರೆ, ಅವರು ಎಲ್ಲಿಗೆ ಹೋದರೂ ಅವರನ್ನು ನೋಡಲು ಅಭಿಮಾನಿಗಳ ದೊಡ್ಡ ಗುಂಪು ಸೇರುತ್ತದೆ. ಅಲ್ಲು ಅರ್ಜುನ್ ಅವರ ಕ್ರೇಜ್ ಎಷ್ಟಿದೆ ಎಂಬುದನ್ನು ಅವರ ಕೊನೆಯ ಕೆಲವು ಚಿತ್ರಗಳ ಕಲೆಕ್ಷನ್ ನೋಡಿದರೆ ತಿಳಿಯಬಹುದು. ಕಳೆದ ಕೆಲವು ವರ್ಷಗಳಲ್ಲಿ ಅಲ್ಲು ಅರ್ಜುನ್ ವೃತ್ತಿಜೀವನದ ಗ್ರಾಫ್ ಬಹಳ ವೇಗವಾಗಿ ಏರಿಕೆ ಕಂಡಿದೆ. ಅವರು ಅತ್ಯಂತ ದುಬಾರಿ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಚಿತ್ರಗಳ ಬಗ್ಗೆ ನೋಡೋಣ.
(2 / 11)
ಪುಷ್ಪ 2 - ದಿ ರೂಲ್: ಅಲ್ಲು ಅರ್ಜುನ್ ಹೆಚ್ಚು ಸಂಭಾವನೆ ಪಡೆದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಪುಷ್ಪ 2– ದಿ ರೂಲ್ ಚಿತ್ರ. ಈ ಚಿತ್ರಕ್ಕೆ ಅಲ್ಲು 300 ಕೋಟಿ ಸಂಭಾವನೆ ಪಡೆದಿದ್ದಾರಂತೆ. 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಚಿತ್ರದ ಒಟ್ಟು ಕಲೆಕ್ಷನ್ ಸುಮಾರು 1,800 ಕೋಟಿ.
(3 / 11)
ಅಲ್ಲು ಅರ್ಜುನ್ ಅತಿ ಹೆಚ್ಚು ಸಂಭಾವನೆ ಪಡೆದ ಚಿತ್ರಗಳಲ್ಲಿ ಅವರ ಮುಂಬರುವ ಚಿತ್ರವೂ ಸೇರಿದೆ. ಅಟ್ಲೀ ನಿರ್ದೇಶನದ ಅಲ್ಲು ಅವರ ಮುಂದಿನ ಚಿತ್ರಕ್ಕೆ, ಅವರು 175 ಕೋಟಿ ರೂಪಾಯಿಗಳ ಸಂಭಾವನೆ ಮತ್ತು ಲಾಭದಲ್ಲಿ ಶೇ 15 ಪಾಲನ್ನು ಕೇಳಿದ್ದಾರೆ. ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಗಾಸಿಪ್‌ಗಳು ಹರಡುತ್ತಿದ್ದು, ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ತಜ್ಞರ ಪ್ರಕಾರ, ಬಿಡುಗಡೆಯಾದ ನಂತರ ಅಲ್ಲು ಅರ್ಜುನ್ ಅವರ ಒಟ್ಟು ಸಂಭಾವನೆ 300 ಕೋಟಿಯನ್ನೂ ಮೀರಲಿದೆ.
(4 / 11)
ಪುಷ್ಪಾ– ದಿ ರೂಲ್: ಪುಷ್ಪಾ ಸರಣಿ ಬಿಡುಗಡೆಯಾದ ನಂತರ ಉತ್ತರ ಭಾರತದಲ್ಲೂ ಅಲ್ಲು ಅರ್ಜುನ್ ಕ್ರೇಜ್ ಹೆಚ್ಚಾಯಿತು. ಬ್ಲಾಕ್ ಬಸ್ಟರ್ ಹಿಟ್ ‘ಪುಷ್ಪ ಭಾಗ 1ಕ್ಕೆ ಅಲ್ಲು ಅರ್ಜುನ್ 45 ರಿಂದ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.
(5 / 11)
ಅಲಾ ವೈಕುಂಠಪುರಮುಲು: 2020 ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಅಲ್ಲು ಅರ್ಜುನ್ 35 ಕೋಟಿ ಸಂಭಾವನೆ ಪಡೆದರು. ಈ ಚಿತ್ರ ಇಂದಿಗೂ ಸೂಪರ್‌ಹಿಟ್ ಆಗಿದ್ದು, ಟಿವಿಯಲ್ಲಿಯೂ ಹೆಚ್ಚಾಗಿ ಪ್ರಸಾರವಾಗುತ್ತದೆ.
(6 / 11)
ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ: 2018ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ 25 ಕೋಟಿ ಸಂಭಾವನೆ ಪಡೆದಿದ್ದರು ಅಲ್ಲು ಅರ್ಜುನ್. ಆದರೆ ಈ ಚಿತ್ರ ಹೇಳಿಕೊಳ್ಳುವ ಯಶಸ್ಸು ಕಂಡಿರಲಿಲ್ಲ.
(7 / 11)
ದುವ್ವಾಡ ಜಗನ್ನಾಥಂ: ಅಲ್ಲು ಅರ್ಜುನ್ ಅತಿ ಹೆಚ್ಚು ಸಂಭಾವನೆ ಪಡೆದ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರದ ಹೆಸರೂ ಸೇರಿದೆ. ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಅಲ್ಲು 20 ಕೋಟಿ ರೂ.ಗಳನ್ನು ಪಡೆದಿದ್ದಾರೆ.
(8 / 11)
ಸರೈನೋಡು: ನೀವು ಅಲ್ಲು ಅರ್ಜುನ್ ಅಭಿಮಾನಿಯಾಗಿದ್ದರೆ ಈ ಸಿನಿಮಾವನ್ನು ನೋಡಲೇಬೇಕು. ಇದು ಯುಟ್ಯೂಬ್‌ನಲ್ಲೂ ಲಭ್ಯವಿದೆ. ಈ ಚಿತ್ರಕ್ಕೆ ಅಲ್ಲು ಅರ್ಜುನ್ 18 ಕೋಟಿ ಸಂಭಾವನೆ ಪಡೆದಿದ್ದರು.
(9 / 11)
ರೇಸ್ ಗುರ್ರಂ: 2014 ರಲ್ಲಿ ಬಿಡುಗಡೆಯಾದ ‘ರೇಸ್ ಗುರ್ರಂ‘ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಸುಮಾರು 15 ಕೋಟಿ ಸಂಭಾವನೆ ಪಡೆದರು. ಆ ಸಮಯದಲ್ಲಿ ಇದು ತುಂಬಾ ದುಬಾರಿ ಸಂಭಾವನೆಯಾಗಿತ್ತು, ಆದರೆ ಚಿತ್ರದಲ್ಲಿ ಅಲ್ಲು ಅರ್ಜುನ್ ಕಾರಣದಿಂದಾಗಿ ನಿರ್ಮಾಪಕರಿಗೆ ಸಾಕಷ್ಟು ಲಾಭವಾಗಿತ್ತು.
(10 / 11)
ಇದ್ದರಮ್ಮಾಯಿಲತೋ: ಅಲ್ಲು ಅರ್ಜುನ್ ಅವರ ಈ ಚಿತ್ರ 2013 ರಲ್ಲಿ ಬಿಡುಗಡೆಯಾಯಿತು ಮತ್ತು ಇದಕ್ಕಾಗಿ ಅವರು 12 ಕೋಟಿ ಸಂಭಾವನೆ ಪಡೆದಿದ್ದರು. ಈ ಚಿತ್ರ ಅಭಿಮಾನಿಗಳಿಗೆ ಇಷ್ಟವಾಗಿತ್ತು.
ಇತರ ಗ್ಯಾಲರಿಗಳು