2 ವರ್ಷಗಳ ನಂತರ ಮತ್ತೆ, ಸಿನಿಮಾಗೆ ಬಣ್ಣ ಹಚ್ಚಿದ ಸುಮಾ ಕನಕಾಲ; ಪ್ರೇಮಂಟೇ ಸಿನಿಮಾ ಮುಹೂರ್ತದ ಫೋಟೋಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2 ವರ್ಷಗಳ ನಂತರ ಮತ್ತೆ, ಸಿನಿಮಾಗೆ ಬಣ್ಣ ಹಚ್ಚಿದ ಸುಮಾ ಕನಕಾಲ; ಪ್ರೇಮಂಟೇ ಸಿನಿಮಾ ಮುಹೂರ್ತದ ಫೋಟೋಗಳು

2 ವರ್ಷಗಳ ನಂತರ ಮತ್ತೆ, ಸಿನಿಮಾಗೆ ಬಣ್ಣ ಹಚ್ಚಿದ ಸುಮಾ ಕನಕಾಲ; ಪ್ರೇಮಂಟೇ ಸಿನಿಮಾ ಮುಹೂರ್ತದ ಫೋಟೋಗಳು

  • ತೆಲುಗು ಖ್ಯಾತ ನಿರೂಪಕಿ ಸುಮಾ ಕನಕಾಲ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೇಮಂಟೇ ಚಿತ್ರದ ಮುಹೂರ್ತ ಭಾನುವಾರ ಹೈದರಾಬಾದ್‌ನಲ್ಲಿ ನೆರವೇರಿತು.

ಸುಮಾ ಬಹುತೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 2022ರಲ್ಲಿ ತೆರೆ ಕಂಡ ಜಯಮ್ಮ ಪಂಚಾಯ್ತಿ ಸಿನಿಮಾ ನಂತರ ಸುಮಾ, ಹೊಸ ಸಿನಿಮಾಗಳಲ್ಲಿ ನಟಿಸಲಿಲ್ಲ. ಇದೀಗ ಮತ್ತೆ ಪ್ರೇಮಂಟೇ ಚಿತ್ರದ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
icon

(1 / 8)

ಪ್ರೇಮಂಟೇ ಚಿತ್ರದಲ್ಲಿ ಪ್ರಿಯದರ್ಶಿ ನಾಯಕನಾಗಿ, ಆನಂದಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸುಮಾ, ಚಿತ್ರದ ಕಲಾವಿದರು, ನಿರ್ಮಾಪಕ, ನಿರ್ದೇಶಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
icon

(2 / 8)

ಪ್ರೇಮಂಟೇ ಚಿತ್ರವನ್ನು ಖ್ಯಾತ ನಟ ರಾನಾ ದಗ್ಬುಬಾಟಿ ಅರ್ಪಿಸುತ್ತಿದ್ದಾರೆ. ಈ ಥ್ರಿಲ್ಲರ್‌ ರೊಮ್ಯಾಂಟಿಕ್‌ ಸಿನಿಮಾಗೆ ನವನೀತ್‌ ಶ್ರೀರಾಮ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾ. ಮುಹೂರ್ತ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ, ರಾನಾ ಕೂಡಾ ಆಗಮಿಸಿದ್ದರು. 
icon

(3 / 8)

ಮುಹೂರ್ತ ಕಾರ್ಯಕ್ರಮದಲ್ಲಿ ನಟ ರಾನಾ ದಗ್ಗುಬಾಟಿ ಕ್ಲಾಪ್‌ ಮಾಡಿದರೆ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ, ಕ್ಯಾಮರಾ ಸ್ವಿಚ್‌ ಆನ್‌ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
icon

(4 / 8)

ಪ್ರೇಮಂಟೇ ಚಿತ್ರವನ್ನು ಶ್ರೀ ವೆಂಕಟೇಶ್ವರ ಸಿನಿಮಾಸ್‌ ಎಲ್‌ಎಲ್‌ಪಿ, ಸ್ಪಿರಿಟ್‌ ಮೀಡಿಯಾ ಬ್ಯಾನರ್‌ ಜೊತೆ ಸೇರಿ ನಿರ್ಮಾಣ ಮಾಡುತ್ತಿದೆ, ಚಿತ್ರದ ಹಾಡುಗಳಿಗೆ ಲಿಯೋನ್‌ ಜೇಮ್ಸ್‌  ಸಂಗೀತ ನೀಡುತ್ತಿದ್ದಾರೆ. ಶ್ರೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. 
icon

(5 / 8)

ಸುಮಾ ಮೂಲತ: ಮಲಯಾಳಿ. ತೆಲುಗು ನಟ ರಾಜೀವ್‌ನನ್ನು ಪ್ರೀತಿಸಿ ಮದುವೆ ಆಗಿ ಸೆಟಲ್‌ ಆದ ಸುಮಾ ನಂತರ ತೆಲುಗು ಕಲಿತು ನಿರೂಪಣೆ ಆರಂಭಿಸಿದರು. ಈಗ ತೆಲುಗಿನಲ್ಲಿ ಆಕೆ ನಂಬರ್‌ ಒನ್‌ ನಿರೂಪಕಿ. 
icon

(6 / 8)

ಸುಮಾ ಕನಕಾಲ ಹೊಸ ಚಿತ್ರಕ್ಕೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ
icon

(7 / 8)

ಸುಮಾ ಕನಕಾಲ ಹೊಸ ಚಿತ್ರಕ್ಕೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ

ಸುಮಾ ಪತಿ ರಾಜೀವ್‌ ಕನಕಾಲ ತೆಲುಗು ಚಿತ್ರರಂಗದಲ್ಲಿ ಉತ್ತಮ ನಟನಾಗಿ ಹೆಸರು ಮಾಡಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು