Sreeleela Movies: ಸೋಲಿನ ಬಳಿಕ ಪುಟಿದೆದ್ದ ಶ್ರೀಲೀಲಾ! ಬತ್ತಳಿಕೆಯಲ್ಲಿ ಒಂದಲ್ಲ ಎರಡಲ್ಲ 5 ಸಿನಿಮಾಗಳ ಲೈನಪ್
Sreeleela Movies: 2024ರಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ ಕೇವಲ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿತ್ತು. ಮಹೇಶ್ ಬಾಬು ಜತೆಗಿನ ಗುಂಟೂರು ಖಾರಂನಲ್ಲಿ ನಟಿಸಿದರೂ, ಗೆಲುವು ದಕ್ಕಲಿಲ್ಲ. ಅಲ್ಲಿಂದಾಚೆಗೆ ಅವರ ಬೇರಾವ ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಈಗ ಸೋಲಿನ ಸುಳಿಯಿಂದ ಹೊರಬಂದಿದ ಶ್ರೀಲೀಲಾ, ಒಂದಲ್ಲ ಎರಡಲ್ಲ ಐದು ಸಿನಿಮಾಗಳು ಇವರ ಬತ್ತಳಿಕೆಯಲ್ಲಿವೆ.
(1 / 5)
ತೆಲುಗಿನ ಎಕ್ಸ್ಟ್ರಾ-ಆರ್ಡಿನರಿ ನಂತರ ನಿತಿನ್ ಮತ್ತು ಶ್ರೀಲೀಲಾ, ರಾಬಿನ್ ಹುಡ್ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ವೆಂಕಿ ಕುಡುಮುಲಾ ನಿರ್ದೇಶನದ ಈ ಆಕ್ಷನ್ ಕಾಮಿಡಿ ಸಿನಿಮಾ ಮಾರ್ಚ್ 28ರಂದು ಬಿಡುಗಡೆಯಾಗಲಿದೆ.
(2 / 5)
ತೆಲುಗು ನಟ ರವಿತೇಜ ಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಸ್ ಜಾತಾರಾ ಚಿತ್ರದಲ್ಲಿ ಶ್ರೀಲೀಲಾ ನಾಯಕಿ. ಧಮಾಕಾ ನಂತರ ಶ್ರೀಲೀಲಾ ಎರಡನೇ ಬಾರಿಗೆ ರವಿ ತೇಜ ಅವರೊಂದಿಗೆ ಕೈಜೋಡಿಸಿದ್ದಾರೆ.
(3 / 5)
ಈ ಎರಡು ಚಿತ್ರಗಳಲ್ಲದೆ, ತೆಲುಗಿನಲ್ಲಿ ಮತ್ತೊಂದು ಚಿತ್ರಕ್ಕೂ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ಜೋಡಿಯಾಗಿದ್ದಾರೆ.
(4 / 5)
ಶಿವಕಾರ್ತಿಕೇಯನ್ ಅವರ ಪರಾಶಕ್ತಿ ಚಿತ್ರದ ಮೂಲಕ ಶ್ರೀಲೀಲಾ ತಮಿಳಿಗೂ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀಲೀಲಾಗೆ ಸವಾಲಿನ ಪಾತ್ರ ಸಿಕ್ಕಿದೆ.
ಇತರ ಗ್ಯಾಲರಿಗಳು