Indian Spoken Languages: ಭಾರತದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಅಗ್ರ 10 ಭಾಷೆಗಳಿವು; ಕನ್ನಡಕ್ಕೆ ಎಷ್ಟನೇ ಸ್ಥಾನ
- ಭಾರತ ಭಾಷಾವಾರು ವೈವಿಧ್ಯಮಯ ದೇಶವಾಗಿದ್ದು, ನೂರಾರು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಜನರು ಯಾವ ಭಾಷೆಯನ್ನು ಮಾತನಾಡುತ್ತಾರೆ. ಯಾವ ಭಾಷೆಗೆ ಯಾವ ಸ್ಥಾನ ನೀಡಲಾಗಿದೆ ಅನ್ನೋದನ್ನ ತಿಳಿಯೋಣ.
- ಭಾರತ ಭಾಷಾವಾರು ವೈವಿಧ್ಯಮಯ ದೇಶವಾಗಿದ್ದು, ನೂರಾರು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. 2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಜನರು ಯಾವ ಭಾಷೆಯನ್ನು ಮಾತನಾಡುತ್ತಾರೆ. ಯಾವ ಭಾಷೆಗೆ ಯಾವ ಸ್ಥಾನ ನೀಡಲಾಗಿದೆ ಅನ್ನೋದನ್ನ ತಿಳಿಯೋಣ.
(1 / 6)
ಹಿಂದಿ ಭಾರತದಲ್ಲಿ ಹೆಚ್ಚು ಮಂದಿ ಮಾತನಾಡುವ ಭಾಷೆಯಾಗಿದೆ. ದೇಶದ ಅನೇಕ ಭಾಗಗಳಲ್ಲಿ ಹಿಂದಿ ಮಾತನಾಡುವವರನ್ನು ಕಾಣುತ್ತೇವೆ. ವಿಶೇಷವಾಗಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಹೆಚ್ಚಾಗಿ ಹಿಂದಿ ಭಾಷಿಕರಿದ್ದಾರೆ. ಇದು ಭಾರತ ಸರ್ಕಾರದ ಅಧಿಕೃತ ಭಾಷೆಯಾಗಿದೆ.
(2 / 6)
ಮೂಲಗಳ ಪ್ರಕಾರ ಭಾರತದಲ್ಲಿ 52.83 ಕೋಟಿ ಜನರು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಆ ಮೂಲಕ ಹೆಚ್ಚು ಜನರು ಮಾತನಾಡುವ ಭಾಷೆಗಳ ಪೈಕಿ ಭಾರತದಲ್ಲಿ ಹಿಂದಿನ ಅಗ್ರ ಸ್ಥಾನದಲ್ಲಿದೆ.
(3 / 6)
ಹಿಂದಿ ನಂತರ ಬೆಂಗಾಲಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಬೆಂಗಾಲಿಯನ್ನು 9.72 ಕೋಟಿ ಜನರು ಮಾತನಾಡುತ್ತಾರೆ. ಮರಾಠಿ ಮೂರನೇ ಸ್ಥಾನದಲ್ಲಿದೆ. ಈ ಭಾಷೆಯನ್ನು 8.30 ಕೋಟಿ ಜನರು ಮಾತನಾಡುತ್ತಾರೆ.
(4 / 6)
ಇನ್ನ ನೆರೆಯ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಪ್ರಮುಖ ಭಾಷೆಯಾಗಿರುವ ತೆಲುಗುವನ್ನು 8.11 ಕೋಟಿ ಜನರು ಮಾತನಾಡುತ್ತಾರೆ. ಭಾರತದಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಗಳ ಪೈಕಿ ತೆಲುಗು 4ನೇ ಸ್ಥಾನದಲ್ಲಿದೆ.
(5 / 6)
ಭಾರತದಲ್ಲಿ 6.90 ಕೋಟಿ ಜನರು ತಮಿಳು ಭಾಷೆಯನ್ನು ಮಾತನಾಡುತ್ತಾರೆ. ಭಾರತದ ಅಗ್ರ ಭಾಷೆಗಳ ಪಟ್ಟಿಯಲ್ಲಿ ತಮಿಳು 5ನೇ ಸ್ಥಾನದಲ್ಲಿದೆ. ಇನ್ನ 5.54 ಕೋಟಿ ಜನರು ಮಾತನಾಡುವ ಗುಜರಾತಿ 6ನೇ ಸ್ಥಾನದಲ್ಲಿದ್ದರೇ, 5.07 ಕೋಟಿ ಜನರು ಮಾತನಾಡುವ ಉರ್ದುಗೆ 7ನೇ ಸ್ಥಾನವಿದೆ, 4.37 ಕೋಟಿ ಜನರು ಕನ್ನಡ ಮಾತನಾಡುತ್ತಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ.
3.57 ಕೋಟಿ ಜನರು ಮಾತನಾಡುವ ಒಡಿಯಾ 9ನೇ ಸ್ಥಾನದಲ್ಲಿ, 3.40 ಕೋಟಿ ಜನರು ಮಾತನಾಡುವ ಮಲಯಾಳಂ 10ನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು