ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ಟಾಪ್-5 ನಾಯಕರು; ಐದು ಟ್ರೋಫಿ ಗೆದ್ದರೂ ಧೋನಿಯದ್ದೇ ಕೆಟ್ಟ ದಾಖಲೆ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತಿರುವ ಟಾಪ್-5 ನಾಯಕರ ಪಟ್ಟಿಯನ್ನು ಮುಂದೆ ನೋಡೋಣ. ಎಂಎಸ್ ಧೋನಿಯೂ ಈ ಪಟ್ಟಿಯಲ್ಲಿದ್ದಾರೆ.
(1 / 6)
ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಪಂದ್ಯ ಸೋತಿರುವ ಕಳಂಕವನ್ನು ಎಂಎಸ್ ಧೋನಿ ಹೊತ್ತಿದ್ದಾರೆ. ಈವರೆಗೂ ಶ್ರೀಮಂತ ಲೀಗ್ನಲ್ಲಿ 234 ಪಂದ್ಯಗಳನ್ನು ಮುನ್ನಡೆಸಿರುವ ಮಾಹಿ, 97ರಲ್ಲಿ ಸೋತಿದ್ದಾರೆ. ಅತಿ ಹೆಚ್ಚು ಪಂದ್ಯ ದಾಖಲೆಯೂ ಅವರ ಹೆಸರಿನಲ್ಲಿದೆ.
(ANI)(2 / 6)
ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲದೇ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನೂ ಮುನ್ನಡೆಸಿರುವ ಧೋನಿ, 2024ರ ಐಪಿಎಲ್ಗೂ ಮುನ್ನ ನಾಯಕತ್ವ ತೊರೆದರು. ಆ ಬಳಿಕ ಋತುರಾಜ್ ಗಾಯಕ್ವಾಡ್ ತಂಡದ ಜವಾಬ್ದಾರಿ ಹೊತ್ತರು. ಆದರೆ ಪ್ರಸಕ್ತ ಆವೃತ್ತಿಯಲ್ಲಿ ಗಾಯಕ್ವಾಡ್ ಗಾಯಗೊಂಡ ಹಿನ್ನೆಲೆ ಧೋನಿ ಮತ್ತೆ ನಾಯಕನಾದರು.
(AFP)(3 / 6)
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವ ವಹಿಸಿದ್ದಾಗ 143 ಪಂದ್ಯಗಳನ್ನು ಮುನ್ನಡೆಸಿದ್ದು, 70 ಪಂದ್ಯಗಳಲ್ಲಿ ಆರ್ಸಿಬಿ ಸೋತಿದೆ. 2008ರಲ್ಲಿ ಐಪಿಎಲ್ನಲ್ಲಿ ಪ್ರಾರಂಭವಾದಾಗಿನಿಂದ ಆರ್ಸಿಬಿಯ ಭಾಗವಾಗಿರುವ ಕೊಹ್ಲಿ, 2021ರ ನಂತರ ಆರ್ಸಿಬಿ ನಾಯಕ ಸ್ಥಾನದಿಂದ ಕೆಳಗಿಳಿದರು.
(PTI)(4 / 6)
ಹಿಟ್ಮ್ಯಾನ್ ಎಂದೇ ಕರೆಯಲ್ಪಡುವ ರೋಹಿತ್ ಶರ್ಮಾ ಐಪಿಎಲ್ನಲ್ಲಿ ನಾಯಕನಾಗಿ 158 ಪಂದ್ಯಗಳನ್ನು ಮುನ್ನಡೆಸಿದ್ದು, 67 ಸೋಲುಗಳನ್ನು ಎದುರಿಸಿದ್ದಾರೆ. ಅವರು 2013 ರಿಂದ 2023 ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ರೋಹಿತ್ ನಾಯಕತ್ವದಲ್ಲಿ ಮುಂಬೈ ಐದು ಐಪಿಎಲ್ ಟ್ರೋಫಿಗಳನ್ನು ಜಯಿಸಿದೆ.
(REUTERS)(5 / 6)
ಗೌತಮ್ ಗಂಭೀರ್ 4ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ 129 ಪಂದ್ಯ ಮುನ್ನಡೆಸಿದ ನಂತರ ಗಂಭೀರ್ 57 ಪಂದ್ಯಗಳಲ್ಲಿ ಸೋತಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಫ್ರಾಂಚೈಸಿಯನ್ನು ಮುನ್ನಡೆಸಿದ್ದಾರೆ. ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ 2 ಪ್ರಶಸ್ತಿ ಗೆದ್ದಿದೆ.
(X)(6 / 6)
ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ 83 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡ ನಂತರ ಅವರು 41 ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ವಾರ್ನರ್ ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಹೈದರಾಬಾದ್ 2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿತ್ತು.
(X)ಇತರ ಗ್ಯಾಲರಿಗಳು