ಐಪಿಎಲ್‌ನಲ್ಲಿ ಭಾರತೀಯ ಕ್ರಿಕೆಟಿಗರ ವೇಗದ ಶತಕ; ಕೊಹ್ಲಿ, ವಿಜಯ್, ರಜತ್ ಹಿಂದಿಕ್ಕಿದ ಇಶಾನ್ ಕಿಶನ್
- Fastest Century: ಐಪಿಎಲ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಟಾಪ್ -5 ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ಅವರನ್ನು ಹಿಂದಿಕ್ಕುವ ಮೂಲಕ ಇಶಾನ್ ಕಿಶನ್ ದಾಖಲೆ ನಿರ್ಮಿಸಿದ್ದಾರೆ.
- Fastest Century: ಐಪಿಎಲ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಟಾಪ್ -5 ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ಅವರನ್ನು ಹಿಂದಿಕ್ಕುವ ಮೂಲಕ ಇಶಾನ್ ಕಿಶನ್ ದಾಖಲೆ ನಿರ್ಮಿಸಿದ್ದಾರೆ.
(1 / 11)
ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಭಾಗವಾಗಿರುವ ಇಶಾನ್ ಕಿಶನ್, ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ್ದಾರೆ. 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್‌ಗಳ ಸಹಿತ ಅಜೇಯ 106 ರನ್ ಗಳಿಸಿದರು.
(SunRisers Hyderabad-X)(2 / 11)
ಇದು ಇಶಾನ್ ಅವರ ಚೊಚ್ಚಲ ಐಪಿಎಲ್ ಶತಕ. 45 ಎಸೆತಗಳಲ್ಲಿ ಶತಕ ಪೂರೈಸಿದ ಕಿಶನ್, ಮುಂಬೈ ಇಂಡಿಯನ್ಸ್ ಪರ 89 ಪಂದ್ಯಗಳಲ್ಲಿ ಕಣಕ್ಕಿಳಿದ್ದರೂ ಒಂದು ಶತಕವನ್ನೂ ಗಳಿಸಿರಲಿಲ್ಲ. ಹೈದರಾಬಾದ್ ಪರ ಆಡಿದ ಮೊದಲ ಪಂದ್ಯದಲ್ಲೇ ಮೂರಂಕಿ ದಾಟಿದ್ದಾರೆ.
(AP)(3 / 11)
ಈ ಶತಕದೊಂದಿಗೆ ಐಪಿಎಲ್‌ನಲ್ಲಿ ಅತಿ ವೇಗವಾಗಿ ಸೆಂಚುರಿ ಬಾರಿಸಿದ ಜಂಟಿ 2ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಶಾನ್ ಕಿಶನ್ರಷ್ಟೇ 45 ಎಸೆತಗಳಲ್ಲಿ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದ್ದಾರೆ. 2020ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧವೇ ಈ ಶತಕ ಬಂದಿತ್ತು. ಅಂದು ಪಂಜಾಬ್ ಭಾಗವಾಗಿದ್ದರು.
(Surjeet Yadav)(4 / 11)
ಆದರೆ ವಿರಾಟ್ ಕೊಹ್ಲಿ, ಮುರಳಿ ವಿಜಯ್ ಮತ್ತು ಮುರಳಿ ವಿಜಯ್ ಅವರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಈ ಮೂವರು ಸಹ ತಮ್ಮ ಶತಕ ಸಿಡಿಸಿಲು 45ಕ್ಕಿಂತ ಹೆಚ್ಚು ಎಸೆತಗಳನ್ನು ತೆಗೆದುಕೊಂಡಿದ್ದಾರೆ.
(AP)(5 / 11)
ಐಪಿಎಲ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಆಟಗಾರ ಯೂಸುಫ್ ಪಠಾಣ್. 2010ರಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ಅವರು 37 ಎಸೆತಗಳಲ್ಲಿ ಶತಕ ಗಳಿಸಿದ್ದರು. ಅಂದು ಅವರು ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದರು.
(X)(6 / 11)
ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಅಮೋಘ 106 ರನ್ ಗಳಿಸಿದ್ದರು. ಅದು ಕೂಡ 45 ಎಸೆತಗಳಲ್ಲಿ. ಇದೀಗ ಈ ಜಂಟಿ 2ನೇ ಸ್ಥಾನದಲ್ಲೇ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ.
(7 / 11)
ಮುರಳಿ ವಿಜಯ್ 3ನೇ ಸ್ಥಾನದಲ್ಲಿದ್ದಾರೆ. 2010ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಮುರಳಿ 46 ಎಸೆತಗಳಲ್ಲಿ ಶತಕ ಗಳಿಸಿದ್ದರು.
(X)(8 / 11)
ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 2016ರ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆರ್‌ಸಿಬಿ ಸ್ಟಾರ್ ಕೊಹ್ಲಿ 47 ಎಸೆತಗಳಲ್ಲಿ ಶತಕ ಗಳಿಸಿದ್ದರು.
(X)(9 / 11)
ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಐದನೇ ಸ್ಥಾನದಲ್ಲಿದ್ದಾರೆ. 2011 ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಡೆಲ್ಲಿ ಡೇರ್‌ಡೆವಿಲ್ಸ್ ಪರ ಸೆಹ್ವಾಗ್ 48 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
(AFP)(10 / 11)
ವೃದ್ಧಿಮಾನ್ ಸಹಾ 6ನೇ ಸ್ಥಾನದಲ್ಲಿದ್ದಾರೆ. 2014ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 49 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ಇತರ ಗ್ಯಾಲರಿಗಳು