ರೋಹಿತ್​-ಕೊಹ್ಲಿ ಆಯ್ತು, ಈಗ ಈ ಐವರ ಸರದಿ; ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಸಂಭಾವ್ಯ ಆಟಗಾರರಿವರು!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರೋಹಿತ್​-ಕೊಹ್ಲಿ ಆಯ್ತು, ಈಗ ಈ ಐವರ ಸರದಿ; ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಸಂಭಾವ್ಯ ಆಟಗಾರರಿವರು!

ರೋಹಿತ್​-ಕೊಹ್ಲಿ ಆಯ್ತು, ಈಗ ಈ ಐವರ ಸರದಿ; ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಸಂಭಾವ್ಯ ಆಟಗಾರರಿವರು!

  • ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಇದೀಗ ಅವರ ಸಾಲಿಗೆ ಇನ್ನೂ ಐವರು ಭಾರತೀಯ ಆಟಗಾರರು ಸೇರಿದ್ದಾರೆ. ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

'ಹಿಟ್​​ಮ್ಯಾನ್' ರೋಹಿತ್ ಶರ್ಮಾ ಮತ್ತು ಸೂಪರ್​ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಇಬ್ಬರು ಆಧುನಿಕ ಕ್ರಿಕೆಟ್​ನ ದಿಗ್ಗಜರು ಒಂದೇ ಒಂದು ವಾರದೊಳಗೆ ಟೆಸ್ಟ್​​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ರೋಹಿತ್ ತಮ್ಮ 38ನೇ, ಕೊಹ್ಲಿ 36ನೇ ವಯಸ್ಸಿನಲ್ಲಿ ಸುದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ.
icon

(1 / 7)

(PTI)

ಇದೀಗ ಕೊಹ್ಲಿ-ರೋಹಿತ್ ನಂತರ ಟೆಸ್ಟ್​ ಕ್ರಿಕೆಟ್​​ಗೆ ನಿವೃತ್ತಿ ಹೇಳಲು ಐವರು ಆಟಗಾರರು ಸಜ್ಜಾಗಿದ್ದಾರೆ. ಈ ಪೈಕಿ ಇಬ್ಬರು ಬೌಲರ್​ಗಳು, ಇಬ್ಬರು ಬ್ಯಾಟರ್​​ಗಳು, ಒಬ್ಬ ಬೌಲರ್​​ ಈ ಸಾಲಿನಲ್ಲಿದ್ದಾರೆ. ರಿಟೈರ್ ಆಗಲಿರುವ ಸಂಭವನೀಯ ಆಟಗಾರರು ಯಾರು? ಇಲ್ಲಿದೆ ಪಟ್ಟಿ.
icon

(2 / 7)

ಅನುಭವಿ ಸ್ಪಿನ್ ಆಲ್​​ರೌಂಡರ್ ರವೀಂದ್ರ ಜಡೇಜಾ ಅವರು ನಿವೃತ್ತಿ ನೀಡಬಹುದಾದ ಆಟಗಾರರ ಪಟ್ಟಿಗೆ ಸೇರಿದ್ದಾರೆ. 36 ವರ್ಷದ ಜಡೇಜಾ ಈವರೆಗೆ 80 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 3370 ರನ್ ಮತ್ತು 323 ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಮತ್ತು ಕೊಹ್ಲಿ ಜೊತೆಗೆ ಜಡೇಜಾ ನಿವೃತ್ತರಾಗಿದ್ದರು.
icon

(3 / 7)

ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ ದೀರ್ಘಕಾಲದಿಂದ ಭಾರತ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಅವರು 2023ರಲ್ಲಿ ಕೊನೆಯ ಟೆಸ್ಟ್ ಆಡಿದರು. ಮುಂದಿನ ತಿಂಗಳು 37ನೇ ವರ್ಷಕ್ಕೆ ಕಾಲಿಡಲಿರುವ ರಹಾನೆ ರಣಜಿ ಆಡುತ್ತಿದ್ದರೂ ಶೀಘ್ರದಲ್ಲೇ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಭಾರತದ ಪರ 85 ಟೆಸ್ಟ್​​ಗಳಲ್ಲಿ 5077 ರನ್ ಗಳಿಸಿದ್ದಾರೆ.
icon

(4 / 7)

(AFP)

37 ವರ್ಷದ ಬ್ಯಾಟರ್​ ಚೇತೇಶ್ವರ ಪೂಜಾರ ಟೆಸ್ಟ್ ತಂಡಕ್ಕೆ ಮರಳುವ ಬಾಗಿಲು ಕೂಡ ಬಹುತೇಕ ಮುಚ್ಚಲ್ಪಟ್ಟಿದೆ. ಅವರು ಕೊನೆಯ ಬಾರಿಗೆ 2023ರಲ್ಲಿ ಭಾರತಕ್ಕಾಗಿ ಆಡಿದರು. ಅವರು 103 ಟೆಸ್ಟ್ ಪಂದ್ಯಗಳಲ್ಲಿ 7195 ರನ್ ಗಳಿಸಿದ್ದಾರೆ. ಇವರು ಸಹ ರಣಜಿ ಆಡುತ್ತಿದ್ದಾರೆ. ಹೀಗಿದ್ದರೂ ಶೀಘ್ರವೇ ಟೆಸ್ಟ್​​ನಿಂದ ನಿವೃತ್ತರಾಗಬಹುದು.
icon

(5 / 7)

ವೇಗದ ಬೌಲರ್ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್​​ಗೆ ಶೀಘ್ರವೇ ವಿದಾಯ ಹೇಳಬಹುದು. 36ರ ಹರೆಯದ ಇಶಾಂತ್ 2021ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನಾಡಿದ್ದರು. 105 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್ ಪಡೆದಿದ್ದಾರೆ. ಭಾರತ ತಂಡದಿಂದ ಹೊರಗುಳಿದ ನಂತರ ಅವರು ವೀಕ್ಷಕವಿವರಣೆಯ ಕಡೆಗೆ ಹೊರಳುತ್ತಿದ್ದಾರೆ.
icon

(6 / 7)

(x)

ಅನುಭವಿ ವೇಗಿ ಉಮೇಶ್ ಯಾದವ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊನೆಯ ಬಾರಿಗೆ 2023ರಲ್ಲಿ ಭಾರತಕ್ಕಾಗಿ ಟೆಸ್ಟ್ ಆಡಿದರು. 37 ವರ್ಷದ ಬೌಲರ್ 57 ಟೆಸ್ಟ್ ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದಾರೆ. ಶೀಘ್ರವೇ ನಿವೃತ್ತಿಯಾಗಬಹುದು ಎಂದು ಈ ಹಿಂದೆ ವರದಿ ಆಗಿತ್ತು.
icon

(7 / 7)

(BCCI)

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು