ಪ್ರಸಕ್ತ ಆವೃತ್ತಿಯ ಐಪಿಎಲ್ನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಟಾಪ್-5 ಆಟಗಾರರು; ಭಾರತದ ಇಬ್ಬರಿಗೆ ಸ್ಥಾನ
- Longest Sixes in IPL 2025: 2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಟಾಪ್-5 ಆಟಗಾರರ ಪಟ್ಟಿಯಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿದ್ದಾರೆ. (ಈ ಅಂಕಿ-ಅಂಶ ಏಪ್ರಿಲ್ 13ರ ತನಕ)
- Longest Sixes in IPL 2025: 2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಟಾಪ್-5 ಆಟಗಾರರ ಪಟ್ಟಿಯಲ್ಲಿ ಭಾರತದ ಇಬ್ಬರು ಸ್ಥಾನ ಪಡೆದಿದ್ದಾರೆ. (ಈ ಅಂಕಿ-ಅಂಶ ಏಪ್ರಿಲ್ 13ರ ತನಕ)
(1 / 5)
ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆಲ್‌ರೌಂಡರ್ ಅಭಿಷೇಕ್ ಶರ್ಮಾ 2025ರ ಐಪಿಎಲ್ನಲ್ಲಿ ಅತಿ ಉದ್ದದ ಸಿಕ್ಸ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಂಜಾಬ್ ಕಿಂಗ್ಸ್ (PBKS) ವಿರುದ್ಧ ವೇಗದ ಶತಕದ ವೇಳೆ 106 ಮೀಟರ್ ಸಿಕ್ಸ್ ಬಾರಿಸಿದರು.
(AFP)(2 / 5)
ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಫಿಲ್ ಸಾಲ್ಟ್ ಇದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಸಾಲ್ಟ್ 105 ಮೀಟರ್ ದೂರ ಸಿಕ್ಸರ್ ಬಾರಿಸಿದ್ದರು.
(PTI)(3 / 5)
ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ ಅವರ ಆರಂಭಿಕ ಪಾಲುದಾರ ಟ್ರಾವಿಸ್ ಹೆಡ್ 105 ಮೀಟರ್ ಸಿಕ್ಸ್ ಬಾರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಹೆಡ್ ಈ ಸಾಧನೆ ಮಾಡಿದರು.
(AFP)(4 / 5)
ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನಿಕೋಲಸ್ ಪೂರನ್ 102 ಮೀಟರ್ ದೂರದ ಸಿಕ್ಸ್ ಬಾರಿಸಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈ ಸಾಧನೆ ಮಾಡಿದರು.
(REUTERS)ಇತರ ಗ್ಯಾಲರಿಗಳು