ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಜೊತೆಯಾಟದ ಜೋಡಿಗಳು; ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ಗಿಲ್-ಸುದರ್ಶನ್
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ ಜೊತೆಯಾಟದ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಜೋಡಿಗಳ ಪಟ್ಟಿ ಇಲ್ಲಿದೆ. ಶುಭ್ಮನ್ ಗಿಲ್-ಸಾಯಿ ಸುದರ್ಶನ್ ಜೋಡಿ ಐಪಿಎಲ್ 2025ರಲ್ಲಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದೆ.
(1 / 5)
ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಜೊತೆಯಾಟದ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ ಕೊಹ್ಲಿ 2016ರ ಐಪಿಎಲ್ನಲ್ಲಿ ಡಿವಿಲಿಯರ್ಸ್ ಅವರೊಂದಿಗೆ 939 ರನ್ ಜೊತೆಯಾಟ ಸೇರಿಸಿದ್ದಾರೆ. ಆರ್ಸಿಬಿ ಪರ ದೀರ್ಘಕಾಲ ಆಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಡಿವಿಲಿಯರ್ಸ್ ಸದ್ಯ ನಿವೃತ್ತಿ ಘೋಷಿಸಿದ್ದಾರೆ.
(BCCI)(2 / 5)
ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2023 ರಲ್ಲಿ ಇವರಿಬ್ಬರು ಒಟ್ಟಿಗೆ 939 ರನ್ ಗಳಿಸಿದ್ದರು. ಮೂರು ಋತುಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದ ಡು ಪ್ಲೆಸಿಸ್ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭಾಗವಾಗಿದ್ದಾರೆ.
(AP)(3 / 5)
ಋತುರಾಜ್ ಗಾಯಕ್ವಾಡ್ ಮತ್ತು ನ್ಯೂಜಿಲೆಂಡ್ ಬ್ಯಾಟರ್ ಡೆವೊನ್ ಕಾನ್ವೆ 2023ರಲ್ಲಿ 849 ಪಾಲುದಾರಿಕೆ ರನ್ ಗಳಿಸಿದ್ದಾರೆ. ಇಬ್ಬರೂ ಚೆನ್ನೈ ಸೂಪರ್ ಕಿಂಗ್ಸ್ ಭಾಗವಾಗಿದ್ದಾರೆ. ಗಾಯಕ್ವಾಡ್ ಸಿಎಸ್ಕೆ ತಂಡದ ನಿಯಮಿತ ನಾಯಕರಾಗಿದ್ದರೂ ಗಾಯದ ಮೊದಲ ಐದು ಪಂದ್ಯಗಳಿಗಷ್ಟೇ ಲಭ್ಯರಾಗಿದ್ದರು.
(BCCI)(4 / 5)
ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ 4ನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲೇ ಗುಜರಾತ್ ಟೈಟಾನ್ಸ್ ಪರ ಇಬ್ಬರೂ ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಜಿಟಿ ನಾಯಕ ಗಿಲ್ ಮತ್ತು ಸುದರ್ಶನ್ ಈವರೆಗೆ 839 ರನ್ ಸೇರಿಸಿದ್ದಾರೆ. ಜಿಟಿ ಪ್ಲೇಆಫ್ ತಲುಪಿದೆ. ಪ್ರಸ್ತುತ ಗಿಲ್ ಮತ್ತು ಸುದರ್ಶನ್ ಅದ್ಭುತ ಲಯ ಹೊಂದಿರುವ ಕಾರಣ ಪ್ರಸಕ್ತ ಆವೃತ್ತಿಯಲ್ಲೇ ಕೊಹ್ಲಿ-ಎಬಿಡಿ ಅವರ ಐತಿಹಾಸಿಕ ದಾಖಲೆ ಮುರಿಯಬಹುದು.
(PTI)ಇತರ ಗ್ಯಾಲರಿಗಳು