ಟಿ20 ಕ್ರಿಕೆಟ್ನಲ್ಲಿ ತಂಡವೊಂದರ ಪರ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟರ್ಸ್; ಇಲ್ಲೂ ಕೊಹ್ಲಿಯದ್ದೇ ದರ್ಬಾರ್
ಟಿ 20 ಕ್ರಿಕೆಟ್ನಲ್ಲಿ ತಂಡಕ್ಕಾಗಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಕೇವಲ ಒಬ್ಬ ವಿದೇಶಿ ಆಟಗಾರನಿದ್ದಾನೆ. ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ, ಎಂಎಸ್ ಧೋನಿ ಈ ಪಟ್ಟಿಯಲ್ಲಿ ಹಿಂದುಳಿದಿದ್ದಾರೆ.
(1 / 5)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ 2025ರ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಅರ್ಧಶತಕ ಬಾರಿಸಿದ್ದಾರೆ. ಕಳೆದ ಲೀಗ್ ಪಂದ್ಯದಲ್ಲಿ ಕೊಹ್ಲಿ 30 ಎಸೆತಗಳಲ್ಲಿ 10 ಬೌಂಡರಿ ಸಹಿತ 54 ರನ್ ಗಳಿಸಿದ್ದಾರೆ. ಹಲವು ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಒಂದು ತಂಡವೊಂದರ ಪರ 9,000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಈವರೆಗೆ ಆರ್ಸಿಬಿ ಪರ 280 ಪಂದ್ಯಗಳಲ್ಲಿ 39.60 ಸರಾಸರಿಯಲ್ಲಿ 9030 ರನ್ ಗಳಿಸಿದ್ದಾರೆ.
(REUTERS)(2 / 5)
ಹಿಟ್ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ 2ನೇ ಸ್ಥಾನ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ಪರ 234 ಪಂದ್ಯಗಳಲ್ಲಿ 6060 ರನ್ ಗಳಿಸಿದ್ದಾರೆ.
(REUTERS)(3 / 5)
ಇಂಗ್ಲೆಂಡ್ ಬ್ಯಾಟರ್ ಜೇಮ್ಸ್ ವಿನ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಹ್ಯಾಂಪ್ಶೈರ್ ಪರ 202 ಪಂದ್ಯಗಳನ್ನು ಆಡಿರುವ ವಿನ್ಸ್ 5934 ರನ್ ಗಳಿಸಿದ್ದಾರೆ. ಅವರ ಸರಾಸರಿ 34.70 ಆಗಿದೆ.
(X)(4 / 5)
ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸುರೇಶ್ ರೈನಾ ಪಾತ್ರರಾಗಿದ್ದಾರೆ. ಸಿಎಸ್ಕೆ ಪರ 200 ಪಂದ್ಯಗಳಲ್ಲಿ 33.10ರ ಸರಾಸರಿಯಲ್ಲಿ 5529 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
(X)ಇತರ ಗ್ಯಾಲರಿಗಳು