ಹರ್ಭಜನ್ ಸಿಂಗ್ ದಾಖಲೆ ಮುರಿದ ಕುಲ್ದೀಪ್ ಯಾದವ್; ಐಪಿಎಲ್ನಲ್ಲಿ ವೇಗದ 100 ವಿಕೆಟ್ ಪಡೆದ ಸ್ಪಿನ್ನರ್ಗಳ ಪಟ್ಟಿ ಇದು
ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಟಾಪ್-5 ಸ್ಪಿನ್ನರ್ಗಳ ಪಟ್ಟಿಯಲ್ಲಿ ಅಮಿತ್ ಮಿಶ್ರಾ ಅವರಿಂದ ಸುನಿಲ್ ನರೈನ್ ತನಕ ಸ್ಥಾನ ಪಡೆದಿದ್ದಾರೆ. ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿ ಕುಲ್ದೀಪ್ ಯಾದವ್ ದಾಖಲೆ ಬರೆದಿದ್ದಾರೆ.
(1 / 5)
ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಸ್ಪಿನ್ನರ್ಗಳ ಪಟ್ಟಿಯಲ್ಲಿ ಅಮಿತ್ ಮಿಶ್ರಾ ಜಂಟಿ ದಾಖಲೆ ಹೊಂದಿದ್ದಾರೆ. 83 ಪಂದ್ಯಗಳಲ್ಲಿ 100 ವಿಕೆಟ್ ಪೂರ್ಣಗೊಳಿಸಿದ್ದಾರೆ. ಗುಜರಾತ್ ಟೈಟಾನ್ಸ್ ಸ್ಪಿನ್ನರ್ ರಶೀದ್ ಖಾನ್ ಮತ್ತು ಕೆಕೆಆರ್ ವರುಣ್ ಚಕ್ರವರ್ತಿ ಕೂಡ 83 ಪಂದ್ಯಗಳಲ್ಲೇ 100 ವಿಕೆಟ್ ಪೂರೈಸಿದ್ದಾರೆ.
(X)(2 / 5)
ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ನಲ್ಲಿ 84 ಪಂದ್ಯಗಳಲ್ಲಿ ಚಹಲ್ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಐಪಿಎಲ್ 2025 ರಲ್ಲಿ ಅವರು ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ.
(AP)(3 / 5)
ವೆಸ್ಟ್ ಇಂಡೀಸ್ನ ಸ್ಪಿನ್ ಆಲ್ರೌಂಡರ್ ಸುನಿಲ್ ನರೈನ್ 3ನೇ ಸ್ಥಾನದಲ್ಲಿದ್ದಾರೆ. 86 ಐಪಿಎಲ್ ಪಂದ್ಯಗಳಲ್ಲಿ 100 ವಿಕೆಟ್ ಕಿತ್ತಿದ್ದರು. ಅವರು ಕೆಕೆಆರ್ ಪರ ಆಡುತ್ತಿದ್ದಾರೆ.
(REUTERS)(4 / 5)
ಕುಲ್ದೀಪ್ ಯಾದವ್ 97 ಐಪಿಎಲ್ ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ತಲುಪಿದರು. ಇದರೊಂದಿಗೆ ಹರ್ಭಜನ್ ಸಿಂಗ್ ಅವರ ದಾಖಲೆಯನ್ನೂ ಮುರಿದರು.
(AP)ಇತರ ಗ್ಯಾಲರಿಗಳು