ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅನ್‌ಕ್ಯಾಪ್ಡ್ ಆಟಗಾರರು; ಟಾಪ್ 5 ಭಾರತೀಯರ ಪಟ್ಟಿ

ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅನ್‌ಕ್ಯಾಪ್ಡ್ ಆಟಗಾರರು; ಟಾಪ್ 5 ಭಾರತೀಯರ ಪಟ್ಟಿ

  • IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಕೆಲವು ಆಟಗಾರರು ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಲೀಗ್‌ ಹಂತದಲ್ಲಿ ಈವರೆಗೆ 24 ಪಂದ್ಯಗಳು ನಡೆದಿವೆ. ಈವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಅನ್‌ಕ್ಯಾಪ್ಡ್‌ ಭಾರತೀಯ ಕ್ರಿಕೆಟಿಗರು ಯಾರು ಎಂಬುದನ್ನು ನೋಡೋಣ.

ಐಪಿಎಲ್ 2024ರ 24ನೇ ಲೀಗ್ ಪಂದ್ಯದ ನಂತರ ರಿಯಾನ್ ಪರಾಗ್ ಭಾರತೀಯ ದೇಶೀಯ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ 5 ಇನ್ನಿಂಗ್ಸ್‌ಗಳಲ್ಲಿ 87.00 ಸರಾಸರಿಯಲ್ಲಿ 261 ರನ್ ಗಳಿಸಿದ್ದಾರೆ. ಈಗಾಗಲೇ ಅವರು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 84 ರನ್. 158.18ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.
icon

(1 / 5)

ಐಪಿಎಲ್ 2024ರ 24ನೇ ಲೀಗ್ ಪಂದ್ಯದ ನಂತರ ರಿಯಾನ್ ಪರಾಗ್ ಭಾರತೀಯ ದೇಶೀಯ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ 5 ಇನ್ನಿಂಗ್ಸ್‌ಗಳಲ್ಲಿ 87.00 ಸರಾಸರಿಯಲ್ಲಿ 261 ರನ್ ಗಳಿಸಿದ್ದಾರೆ. ಈಗಾಗಲೇ ಅವರು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 84 ರನ್. 158.18ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.(PTI)

ಅಭಿಷೇಕ್ ಶರ್ಮಾ ಭಾರತೀಯ ದೇಶೀಯ ಕ್ರಿಕೆಟಿಗರ ಪೈಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಸನ್‌ರೈಸರ್ಸ್ ಹೈದರಾಬಾದ್ ಪರ 5 ಇನ್ನಿಂಗ್ಸ್‌ಗಳಲ್ಲಿ 35.40ರ ಸರಾಸರಿಯಲ್ಲಿ 177 ರನ್ ಗಳಿಸಿದ್ದಾರೆ. ಅಭಿಷೇಕ್ ಈವರೆಗೆ 1 ಅರ್ಧಶತಕ ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಮೊತ್ತ 63 ರನ್ ಆಗಿದೆ. 208.23ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬIಸಿರುವ ಅವರು, ಈವರೆಗೆ 14 ಬೌಂಡರಿ ಮತ್ತು 16 ಸಿಕ್ಸರ್‌ ಸಿಡಿಸಿದ್ದಾರೆ.
icon

(2 / 5)

ಅಭಿಷೇಕ್ ಶರ್ಮಾ ಭಾರತೀಯ ದೇಶೀಯ ಕ್ರಿಕೆಟಿಗರ ಪೈಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಸನ್‌ರೈಸರ್ಸ್ ಹೈದರಾಬಾದ್ ಪರ 5 ಇನ್ನಿಂಗ್ಸ್‌ಗಳಲ್ಲಿ 35.40ರ ಸರಾಸರಿಯಲ್ಲಿ 177 ರನ್ ಗಳಿಸಿದ್ದಾರೆ. ಅಭಿಷೇಕ್ ಈವರೆಗೆ 1 ಅರ್ಧಶತಕ ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಮೊತ್ತ 63 ರನ್ ಆಗಿದೆ. 208.23ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬIಸಿರುವ ಅವರು, ಈವರೆಗೆ 14 ಬೌಂಡರಿ ಮತ್ತು 16 ಸಿಕ್ಸರ್‌ ಸಿಡಿಸಿದ್ದಾರೆ.(IPL)

ಪ್ರಸ್ತುತ ಐಪಿಎಲ್‌ನಲ್ಲಿ ಅನ್‌ಕ್ಯಾಪ್‌ಡ್ ಭಾರತೀಯ ಕ್ರಿಕೆಟಿಗ ಶಶಾಂಕ್ ಸಿಂಗ್ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಪಂಜಾಬ್ ಕಿಂಗ್ಸ್ ಪರ ಆಡಿದ 5 ಇನ್ನಿಂಗ್ಸ್‌ಗಳಲ್ಲಿ ಒಟ್ಟು 137 ರನ್ ಗಳಿಸಿದ್ದಾರೆ. ಶಶಾಂಕ್ ಅವರ ಬ್ಯಾಟಿಂಗ್ ಸರಾಸರಿ 137 ಆಗಿದ್ದು, 4 ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಒಂದು ಪಂದ್ಯದಲ್ಲಿ ಅಮೋಘ ಚೇಸಿಂಗ್‌ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇದುವರೆಗ ಶಶಾಂಕ್ 1 ಅರ್ಧಶತಕ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಮೊತ್ತ ಔಟಾಗದೆ 61 ರನ್.
icon

(3 / 5)

ಪ್ರಸ್ತುತ ಐಪಿಎಲ್‌ನಲ್ಲಿ ಅನ್‌ಕ್ಯಾಪ್‌ಡ್ ಭಾರತೀಯ ಕ್ರಿಕೆಟಿಗ ಶಶಾಂಕ್ ಸಿಂಗ್ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಪಂಜಾಬ್ ಕಿಂಗ್ಸ್ ಪರ ಆಡಿದ 5 ಇನ್ನಿಂಗ್ಸ್‌ಗಳಲ್ಲಿ ಒಟ್ಟು 137 ರನ್ ಗಳಿಸಿದ್ದಾರೆ. ಶಶಾಂಕ್ ಅವರ ಬ್ಯಾಟಿಂಗ್ ಸರಾಸರಿ 137 ಆಗಿದ್ದು, 4 ಇನ್ನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಒಂದು ಪಂದ್ಯದಲ್ಲಿ ಅಮೋಘ ಚೇಸಿಂಗ್‌ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇದುವರೆಗ ಶಶಾಂಕ್ 1 ಅರ್ಧಶತಕ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಮೊತ್ತ ಔಟಾಗದೆ 61 ರನ್.(PTI)

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ದೇಶೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಪ್ರಭ್‌ಸಿಮ್ರನ್ ಸಿಂಗ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ಪರ 5 ಇನ್ನಿಂಗ್ಸ್‌ಗಳಲ್ಲಿ 21.80ರ ಸರಾಸರಿಯಲ್ಲಿ 109 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಮೊತ್ತ 35 ರನ್ 153.52ರ ಸ್ಟ್ರೈಕ್ ರೇಟ್‌ನಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿದ್ದಾರೆ.
icon

(4 / 5)

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ದೇಶೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಪ್ರಭ್‌ಸಿಮ್ರನ್ ಸಿಂಗ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ಪರ 5 ಇನ್ನಿಂಗ್ಸ್‌ಗಳಲ್ಲಿ 21.80ರ ಸರಾಸರಿಯಲ್ಲಿ 109 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಮೊತ್ತ 35 ರನ್ 153.52ರ ಸ್ಟ್ರೈಕ್ ರೇಟ್‌ನಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿದ್ದಾರೆ.(PTI)

ಈ ಪಟ್ಟಿಯಲ್ಲಿ ಅಭಿಷೇಕ್ ಪೊರೆಲ್ ಐದನೇ ಸ್ಥಾನದಲ್ಲಿದ್ದಾರೆ. ಬಂಗಾಳದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಡೆಲ್ಲಿ ಕ್ಯಾಪಿಟಲ್ಸ್ ಪರ ಐದು ಇನ್ನಿಂಗ್ಸ್‌ಗಳಲ್ಲಿ ಒಟ್ಟು 91 ರನ್ ಗಳಿಸಿದ್ದಾರೆ. ಎರಡು ಇನ್ನಿಂಗ್ಸ್‌ಗಳಲ್ಲಿ ಔಟಾಗದೆ ಉಳಿದಿರುವ ಅಭಿಷೇಕ್, 146.77 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರ ಗರಿಷ್ಠ ಮೊತ್ತ 41 ರನ್.
icon

(5 / 5)

ಈ ಪಟ್ಟಿಯಲ್ಲಿ ಅಭಿಷೇಕ್ ಪೊರೆಲ್ ಐದನೇ ಸ್ಥಾನದಲ್ಲಿದ್ದಾರೆ. ಬಂಗಾಳದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಡೆಲ್ಲಿ ಕ್ಯಾಪಿಟಲ್ಸ್ ಪರ ಐದು ಇನ್ನಿಂಗ್ಸ್‌ಗಳಲ್ಲಿ ಒಟ್ಟು 91 ರನ್ ಗಳಿಸಿದ್ದಾರೆ. ಎರಡು ಇನ್ನಿಂಗ್ಸ್‌ಗಳಲ್ಲಿ ಔಟಾಗದೆ ಉಳಿದಿರುವ ಅಭಿಷೇಕ್, 146.77 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರ ಗರಿಷ್ಠ ಮೊತ್ತ 41 ರನ್.(PTI)


IPL_Entry_Point

ಇತರ ಗ್ಯಾಲರಿಗಳು