ಐಪಿಎಲ್ನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ ಟಾಪ್-6 ಆಟಗಾರರು; ಈ ಪೈಕಿ ಎಸ್ಆರ್ಹೆಚ್ ತಂಡದವರೇ ನಾಲ್ವರು!
ಪ್ರಸಕ್ತ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-6 ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರಿದ್ದಾರೆ. ಮತ್ತೊಂದು ಅಚ್ಚರಿ ಏನೆಂದರೆ ಈ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದವರೇ ನಾಲ್ವರಿದ್ದಾರೆ.
(1 / 6)
ಹೆನ್ರಿಚ್ ಕ್ಲಾಸೆನ್ ಐಪಿಎಲ್ 2025ರಲ್ಲಿ ಇದುವರೆಗಿನ ಅತಿ ಉದ್ದದ ಸಿಕ್ಸ್ ಬಾರಿಸಿದ ಸಾಧನೆ ಮಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿರುವ ಕ್ಲಾಸೆನ್, ಮುಂಬೈ ಇಂಡಿಯನ್ಸ್ ವಿರುದ್ಧ 107 ಮೀಟರ್ ಸಿಕ್ಸ್ ಬಾರಿಸಿದ್ದರು.
(AP)(2 / 6)
ಎಸ್‌ಆರ್‌ಹೆಚ್‌ನ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಅಭಿಷೇಕ್ 106 ಮೀಟರ್ ಸಿಕ್ಸ್ ಬಾರಿಸಿದರು.
(AFP)(3 / 6)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ 105 ಮೀಟರ್ ಸಿಕ್ಸ್ ಬಾರಿಸಿದ್ದಾರೆ. ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಈ ಸಾಧನೆ ಮಾಡಿದರು.
(AFP)(4 / 6)
ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಕೂಡ 105 ರನ್‌ಗಳಿಗೆ ಸಿಕ್ಸರ್ ಬಾರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೆಡ್ ಈ ಸಾಧನೆ ಮಾಡಿದರು.
(PTI)(5 / 6)
ಲಕ್ನೋ ಸೂಪರ್ ಜೈಂಟ್ಸ್ ತಂಡದ ಉಪನಾಯಕ ನಿಕೋಲಸ್ ಪೂರನ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 102 ಮೀಟರ್ ಸಿಕ್ಸ್ ಬಾರಿಸಿದರು.
(AFP)ಇತರ ಗ್ಯಾಲರಿಗಳು