ವಿಶ್ವಕಪ್‌ನಲ್ಲಿ ಈ ಬ್ಯಾಟ್ಸ್ಮನ್ಗಳ ಆಟದ ಮೇಲೆಯೇ ಎಲ್ಲರ ಕಣ್ಣು; ಇವರು ಅಬ್ಬರಿಸಿದರೆ ಕಪ್ ಗೆಲ್ಲೋದು ಗ್ಯಾರಂಟಿ!
- world cup 2023 top 5 batsman :ಕ್ರಿಕೆಟ್‌ನ ಅತಿದೊಡ್ಡ ಮೆಗಾ ಈವೆಂಟ್ ಅಂದರೆ ಏಕದಿನ ವಿಶ್ವಕಪ್. ಅಕ್ಟೋಬರ್ 5 ರಿಂದ ಟೂರ್ನಿ ಆರಂಭವಾಗಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
- world cup 2023 top 5 batsman :ಕ್ರಿಕೆಟ್‌ನ ಅತಿದೊಡ್ಡ ಮೆಗಾ ಈವೆಂಟ್ ಅಂದರೆ ಏಕದಿನ ವಿಶ್ವಕಪ್. ಅಕ್ಟೋಬರ್ 5 ರಿಂದ ಟೂರ್ನಿ ಆರಂಭವಾಗಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
(1 / 9)
ಇಂದಿನಿಂದ ಆರಂಭವಾಗುವ ಏಕದಿನ ಟೂರ್ನಿಯಲ್ಲಿ ಅಧಿಕ ರನ್ ಗಳಿಸುವ ಆಟಗಾರ ಯಾರಾಗಬಹುದು? ಇದು ಕ್ರಿಕೆಟ್ ಲೋಕದಲ್ಲಿ ಸದ್ತ ಚಾಲ್ತಿಯಲ್ಲಿರುವ ಪ್ರಶ್ನೆ. ಹಾಗಾದರೆ ಈ ವಿಶ್ವಕಪ್‌ನಲ್ಲಿ ಅಧಿಕ ರನ್ ಗಳಿಸುತ್ತಾರೆಂದು ನಿರೀಕ್ಷಿಸಲಾಗಿರುವ ಆಟಗಾರರತ್ತ ಒಂದು ನೋಟ ಇಲ್ಲಿದೆ.
(2 / 9)
ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಪಡೆದು ಇಂಗ್ಲೆಂಡ್ ತಂಡಕ್ಕೆ ಮರಳಿರುವ ಆಲ್‌ರೌಂಡರ್ ಬೆನ್ಸ್ಟೋಕ್ಸ್, ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಅಬ್ಬರಿಸುವ ನಿರೀಕ್ಷೆ ಹುಟ್ಟು ಹಾಕಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಟ್ರೋಫಿ ಗೆಲುವಿಗೆ ಕಾರಣವಾಗಿದ್ದ ಸ್ಟೋಕ್ಸ್, 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. 108 ಏಕದಿನ ಪಂದ್ಯಗಳಲ್ಲಿ 3159 ರನ್ ಗಳಿಸಿದ್ದಾರೆ. 4 ಶತಕ, 22 ಅರ್ಧಶತಕಗಳು ಅವರ ಆಟದಲ್ಲಿವೆ. 74 ವಿಕೆಟ್ ಕೂಡ ಪಡೆದಿದ್ದಾರೆ.
(3 / 9)
2019ರ ವಿಶ್ವಕಪ್ ಹೀರೋ ರೋಹಿತ್ ಶರ್ಮಾ ಈ ಬಾರಿಯೂ ಅದ್ಭುತ ಸೃಷ್ಟಿಸುವ ಸಾಧ್ಯತೆ ಇದೆ. 2019ರ ವಿಶ್ವಕಪ್‌ನಲ್ಲಿ ರೋಹಿತ್ 5 ಶತಕ ಬಾರಿಸಿ ಇತಿಹಾಸ ಬರೆದಿದ್ದರು. ಸದ್ಯ ರೆಡ್ಹಾಟ್ ಫಾರ್ಮ್ನಲ್ಲಿರುವ ಹಿಟ್ಮ್ಯಾನ್ ಈ ಬಾರಿಯೂ ಅಬ್ಬರಿಸುವ ನಿರೀಕ್ಷೆ ಇದೆ. 251 ಏಕದಿನ ಪಂದ್ಯಗಳಲ್ಲಿ 30 ಶತಕ, 52 ಅರ್ಧಶತಕಗಳ ಸಹಿತ 10112 ರನ್ ಗಳಿಸಿದ್ದಾರೆ.
(4 / 9)
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಬೆನ್ನೆಲುಬು. ಹಾಗೆ ಮಧ್ಯಮ ಕ್ರಮಾಂಕದ ಆಸ್ತಿ. ಕಳೆದ ಎರಡು ವಿಶ್ವಕಪ್ಗಳಲ್ಲೂ ಆಸೀಸ್ನ ಬ್ಯಾಟಿಂಗ್ ಕೊಂಡಿಯಾಗಿದ್ದ ಸ್ಮಿತ್, ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಸದ್ಯ ಅದ್ಭುತ ಫಾರ್ಮ್ನಲ್ಲಿರುವ ಬಲಗೈ ಆಟಗಾರ ಈ ವಿಶ್ವಕಪ್ನಲ್ಲೂ ಸಿಡಿಯಲು ಸಜ್ಜಾಗಿದ್ದಾರೆ. ಭಾರತದ ಪಿಚ್ಗಳಲ್ಲಿ ಅವರು ಸುಲಭವಾಗಿ ರನ್ ಗಳಿಸುತ್ತಾರೆ. 145 ಏಕದಿನ ಪಂದ್ಯಗಳಲ್ಲಿ 12 ಶತಕ, 30 ಅರ್ಧಶತಕಗಳ ಸಹಿತ 5054 ರನ್ ಗಳಿಸಿದ್ದಾರೆ.
(5 / 9)
ಅಭ್ಯಾಸ ಪಂದ್ಯಗಳಲ್ಲಿ ಆರ್ಭಟಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್, ಏಕದಿನ ಕ್ರಿಕೆಟ್‌ನ ನಂಬರ್ 1 ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿರುವ ಬಾಬರ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಭಾರತದ ನೆಲದಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ. 108 ಏಕದಿನಗಳಲ್ಲಿ 19 ಶತಕ, 28 ಅರ್ಧಶತಕಗಳ ಸಹಿತ 5409 ರನ್ ಗಳಿಸಿದ್ದಾರೆ.
(6 / 9)
ಭಾರತೀಯ ಕ್ರಿಕೆಟ್‌ನ ದೊಡ್ಡ ಸ್ಟಾರ್ ವಿರಾಟ್ ಕೊಹ್ಲಿ ಸದ್ಯ ಅದ್ಭುತ ಫಾರ್ಮ್ನಲ್ಲಿದ್ದಾರೆ. 34ರ ಹರೆಯದ ವಿರಾಟ್ ಕೊಹ್ಲಿಗೆ ಇದು ಕೊನೆಯ ವಿಶ್ವಕಪ್ ಕೂಡ ಆಗಿರಬಹುದು. ಕುತೂಹಲಕಾರಿಯಾಗಿ ವಿರಾಟ್ ವಿಶ್ವಕಪ್‌ನಲ್ಲಿ ಶತಕ ಗಳಿಸಿದ ಭಾರತದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿದ್ದಾರೆ. 2011ರಲ್ಲಿ ಕಿಂಗ್ ಕೊಹ್ಲಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಲ್ಲದೆ, ಈ ಟೂರ್ನಿಯಲ್ಲಿ ಮತ್ತಷ್ಟು ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆಯೂ ಇದೆ. 281 ಏಕದಿನ ಪಂದ್ಯಗಳಲ್ಲಿ 47 ಶತಕ, 66 ಅರ್ಧಶತಕ ಸಹಿತ 13083 ರನ್ ಗಳಿಸಿದ್ದಾರೆ.
(7 / 9)
ಈ ಹಿರಿಯ ಆಟಗಾರರ ನಡುವೆ ಯುವ ಆಟಗಾರ ಶುಭ್ಮನ್ ಗಿಲ್ ಸದ್ಯ ಹೆಚ್ಚು ಚರ್ಚೆಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಗಿಲ್, ರನ್ ಶಿಖರ ನಿರ್ಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ಏಕದಿನ ಕ್ರಿಕೆಟ್ನಲ್ಲಿ 1000ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. 35 ಏಕದಿನ ಪಂದ್ಯಗಳಲ್ಲಿ 6 ಶತಕ, 9 ಅರ್ಧಶತಕಗಳೊಂದಿಗೆ 1917 ರನ್ ಗಳಿಸಿದ್ದಾರೆ.
(8 / 9)
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೇಲೂ ನಿರೀಕ್ಷೆ ದುಪ್ಪಟ್ಟಾಗಿದೆ. ನ್ಯೂಜಿಲೆಂಡ್ ತಂಡಕ್ಕೆ ಟ್ರೋಫಿ ಗೆದ್ದುಕೊಡುವ ಇರಾದೆಯಲ್ಲಿರುವ ಅವರು, ಬ್ಯಾಟಿಂಗ್ನಲ್ಲೂ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ. ತನ್ನ ಕ್ಲಾಸಿಕ್ ಬ್ಯಾಟಿಂಗ್ನಿಂದಲೇ ಎದುರಾಳಿ ಬೌಲರ್ಗಳಿಗೆ ಕಾಡುವ ವಿಲಿಯಮ್ಸನ್ ವಿಶ್ವಕಪ್ನಲ್ಲೂ ಅದೇ ಫಾರ್ಮ್ ಮುಂದುವರೆಸುವ ಸಾಧ್ಯತೆ ಇದೆ. 161 ಏಕದಿನ ಪಂದ್ಯಗಳನ್ನಾಡಿರುವ ವಿಲಿಯಮ್ಸನ್, 13 ಶತಕ, 42 ಅರ್ಧಶತಕಗಳ ನೆರವಿನಿಂದ 6555 ರನ್ ಸಿಡಿಸಿದ್ದಾರೆ. ಬಹುಶಃ ಇದು ಕೊನೆಯ ವಿಶ್ವಕಪ್ ಆಗಿರಲೂಬಹುದು.
(9 / 9)
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಸ್ಕೋರ್ ಗಳಿಸಬಲ್ಲ ತಾಕತ್ತು ಹೊಂದಿರುವ ಆಟಗಾರ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ ಒಬ್ಬರು. 2019ರ ಏಕದಿನ ವಿಶ್ವಕಪ್‌ನಲ್ಲಿ ರನ್ ಶಿಖರ ನಿರ್ಮಿಸಿದ್ದ ವಾರ್ನರ್, ಈ ಬಾರಿಯೂ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ. ಅದ್ಭುತ ಫಾರ್ಮ್ನಲ್ಲಿರುವ ಎಡಗೈ ಆಟಗಾರ ಈ ಬಾರಿ ಭಾರತದ ಪಿಚ್ಗಳಲ್ಲಿ ಮ್ಯಾಜಿಕ್ ನಡೆಸಲಿದ್ದಾರೆ ಎನ್ನಲಾಗ್ತಿದೆ. 150 ಏಕದಿನ ಪಂದ್ಯಗಳನ್ನಾಡಿರುವ ವಾರ್ನರ್ 20 ಶತಕ, 31 ಅರ್ಧಶತಕ ಸಹಿತ 6397 ರನ್ ಗಳಿಸಿದ್ದಾರೆ. ಇದು ಕೊನೆಯ ವಿಶ್ವಕಪ್ ಆಗಿರಬಹುದು.
ಇತರ ಗ್ಯಾಲರಿಗಳು