ಮುತ್ತಿನ ನಗರಿ ಹೈದಾರಾಬಾದ್‌ನಲ್ಲಿರುವ ಚಾರ್‌ಮಿನಾರ್ ಕುರಿತಾದ ಆಸಕ್ತಿಕರ ವಿಚಾರಗಳಿವು
- ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನೋಡಬಹುದಾದ ಪ್ರಮುಖ ಸ್ಥಳಗಳಲಿ ಚಾರ್‌ಮಿರಾನ್ ಕೂಡಾ ಒಂದು. ದೇಶದ ಅತ್ಯಂತ ಪ್ರಸಿದ್ಧ ಕಟ್ಟಡಗಳಲ್ಲಿ ಇದೂ ಒಂದು. ಒಂದಾಗಿದೆ. ಈ ಅದ್ಭುತ ರಚನೆಯು ಕೇವಲ ಕಟ್ಟಡವಲ್ಲ. ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಸಮ್ಮಿಲನವಾಗಿದೆ. ಅಂತಹ ಚಾರ್‌ಮಿನಾರ್ ಬಗ್ಗೆ 7 ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
- ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನೋಡಬಹುದಾದ ಪ್ರಮುಖ ಸ್ಥಳಗಳಲಿ ಚಾರ್‌ಮಿರಾನ್ ಕೂಡಾ ಒಂದು. ದೇಶದ ಅತ್ಯಂತ ಪ್ರಸಿದ್ಧ ಕಟ್ಟಡಗಳಲ್ಲಿ ಇದೂ ಒಂದು. ಒಂದಾಗಿದೆ. ಈ ಅದ್ಭುತ ರಚನೆಯು ಕೇವಲ ಕಟ್ಟಡವಲ್ಲ. ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಸಮ್ಮಿಲನವಾಗಿದೆ. ಅಂತಹ ಚಾರ್‌ಮಿನಾರ್ ಬಗ್ಗೆ 7 ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
(1 / 7)
ಚಾರ್ ಮಿನಾರನ್ನು ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ನಾಲ್ಕು ಮಿನಾರ್‌ಗಳು, ಸುಂದರವಾದ ಕಮಾನುಗಳು ಮತ್ತು ಮನೆಯಂತೆ ನಿರ್ಮಿಸಲಾದ ಮಹಡಿಗಳು ಇದರ ವಿಶೇಷ ಆಕರ್ಷಣೆಯಾಗಿದೆ. ಪ್ರತಿ ಮಿನಾರ್ ಮೇಲೆ ಒಂದು ಸಣ್ಣ ಮಸೀದಿ ಇದೆ.
(istockphoto)(2 / 7)
ಚಾರ್ ಮಿನಾರನ್ನು ಕುತುಬ್ ಶಾಹಿ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಯಿತು. ನಗರದ ರಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದು ನಗರದ ವಾಣಿಜ್ಯ ಕೇಂದ್ರವೂ ಆಗಿತ್ತು.
(istockphoto)(3 / 7)
ಚಾರ್ ಮಿನಾರ್ ಸುತ್ತಲಿನ ಬಜಾರ್‌ಗಳು, ಮಸೀದಿಗಳು ಮತ್ತು ಇತರ ಐತಿಹಾಸಿಕ ರಚನೆಗಳು ಈ ಪ್ರದೇಶವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದೆ. ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಜನರು ಇಲ್ಲಿ ಸೇರಿ ಆಚರಣೆ ಮಾಡುತ್ತಾರೆ.
(istockphoto)(4 / 7)
ಚಾರ್ ಮಿನಾರ್‌ನಲ್ಲಿರುವ ಪ್ರತಿಧ್ವನಿ ಮಂಟಪವು ವಿಶೇಷ ಆಕರ್ಷಣೆಯಾಗಿದೆ. ಈ ಮಂಟಪದಲ್ಲಿ ನಿಂತು ಒಂದು ಮೂಲೆಯಲ್ಲಿ ಸದ್ದು ಮಾಡಿದರೆ ಇನ್ನೊಂದು ಮೂಲೆಯಲ್ಲಿದ್ದವರಿಗೆ ಸ್ಪಷ್ಟವಾಗಿ ಕೇಳಿಸುತ್ತದೆ.
(istockphoto)(5 / 7)
ಭಾರತ ಮಾತ್ರವಲ್ಲದೆ ಪ್ರಪಂಚಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಚಾರ್‌ಮಿನಾರ್ ಹೈದರಾಬಾದ್‌ಗೆ ವಿಶೇಷ ಗುರುತನ್ನು ತಂದುಕೊಟ್ಟಿದೆ. ಚಾರ್ಮಿನಾರ್ ನೋಡಲು ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ.
(istockphoto)(6 / 7)
ಚಾರ್‌ಮಿನಾರ್ ಸುತ್ತಮುತ್ತ ದೊರೆಯುವ ತೆಲಂಗಾಣ ಸಂಸ್ಕೃತಿಯನ್ನು ಬಿಂಬಿಸುವ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಪ್ರವಾಸಿಗರು ಕೊಂಡೊಯ್ಯುತ್ತಾರೆ. ಇಲ್ಲಿ ಬಳೆಗಳು, ಮುತ್ತುಗಳು ಇರಾನಿ ಚಹಾ ಕೂಡಾ ಫೇಮಸ್.
(istockphoto)ಇತರ ಗ್ಯಾಲರಿಗಳು