Summer Trip: ಮನಾಲಿಯಿಂದ ಕೊಡೈಕೆನಾಲ್‌ವರೆಗಿನ ಆಯ್ದ ಪ್ರವಾಸಿ ತಾಣಗಳಿವು; ಬೇಸಿಗೆ ರಜೆ ವೇಸ್ಟ್ ಮಾಡಬೇಡಿ ಎಂಜಾಯ್ ಮಾಡಿ
- Summer Trip: ಬೇಸಿಗೆಯಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದಾಕ್ಷಣ ಬಿಸಿಲಿನ ಭಯಕ್ಕೆ ಕೊಂಚ ಹೆದರುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲಿ ಪ್ರವಾಸ ಮಾಡಲು ಕೆಲವೊಂದು ಜಾಗಗಳು ಹೇಳಿ ಮಾಡಿಸಿದಂತಿರುತ್ತವೆ. ಮನಾಲಿಯಿಂದ ಕೊಡೈಕೆನಾಲ್‌ವೆರೆಗೆ ಭಾರತದಲ್ಲಿ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣಗಳಿವು. ಇಲ್ಲಿಗೆ ಪ್ರವಾಸ ಆಯೋಜಿಸಿ, ಎಂಜಾಯ್ ಮಾಡಿ.
- Summer Trip: ಬೇಸಿಗೆಯಲ್ಲಿ ಪ್ರವಾಸಕ್ಕೆ ಹೋಗಬೇಕು ಎಂದಾಕ್ಷಣ ಬಿಸಿಲಿನ ಭಯಕ್ಕೆ ಕೊಂಚ ಹೆದರುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲಿ ಪ್ರವಾಸ ಮಾಡಲು ಕೆಲವೊಂದು ಜಾಗಗಳು ಹೇಳಿ ಮಾಡಿಸಿದಂತಿರುತ್ತವೆ. ಮನಾಲಿಯಿಂದ ಕೊಡೈಕೆನಾಲ್‌ವೆರೆಗೆ ಭಾರತದಲ್ಲಿ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣಗಳಿವು. ಇಲ್ಲಿಗೆ ಪ್ರವಾಸ ಆಯೋಜಿಸಿ, ಎಂಜಾಯ್ ಮಾಡಿ.
(1 / 6)
ಮೇ ತಿಂಗಳಿನಲ್ಲಿ ಬಿಸಿಲಿನ ಬರ ಕಡಿಮೆಯಾಗಿರುವುದಿಲ್ಲ. ಅಲ್ಲದೇ ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಸಿಲಿನ ತಾಪ ಹೆಚ್ಚಿರುತ್ತದೆ. ಅದಾಗ್ಯೂ, ಕೆಲವೊಂದು ಸ್ಥಳಗಳು ತಂಪಾಗಿದ್ದು, ಆಹ್ಲಾದಕರ ಭಾವ ಮೂಡಿಸುವುದು ಮಾತ್ರವಲ್ಲ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿರುತ್ತವೆ. ಮೇ ತಿಂಗಳಿನಲ್ಲಿ ಭೇಟಿ ಮಾಡಲು ಯೋಗ್ಯವಾದ ಭಾರತದ ಐದು ಪ್ರವಾಸಿತಾಣಗಳು ಹೀಗಿವೆ.
(2 / 6)
ಮನಾಲಿ, ಹಿಮಾಚಲ ಪ್ರದೇಶ: ಮನಾಲಿ ಗಿರಿಧಾಮಗಳ ಪ್ರದೇಶವಾಗಿದ್ದು, ಅಲ್ಲಿ ವರ್ಷವಿಡೀ ತಂಪಾದ, ಆಹ್ಲಾದಕರ ವಾತಾವರಣವಿರುತ್ತದೆ. ಆ ಕಾರಣಕ್ಕೆ ಈ ತಾಣವು ವರ್ಷವಿಡೀ ಪ್ರವಾಸಿಗರನ್ನು ಸೆಳೆಯುತ್ತದೆ. ಮಾರ್ಚ್ ಹಾಗೂ ಜೂನ್ ನಡುವೆ ಮನಾಲಿಯಲ್ಲಿ 10 ರಿಂದ 25 ಡಿಗ್ರಿ ಸೆಲ್ಸಿಯಸ್ ತಾಪವಿರುತ್ತದೆ.
(3 / 6)
ಮಸ್ಸೂರಿ, ಉತ್ತರಾಖಂಡ: ಉತ್ತರಾಖಂಡದಲ್ಲಿರುವ ಮಸ್ಸೂರಿಯು ಸಮುದ್ರ ಮಟ್ಟದಿಂದ ಸುಮಾರು 2,000 ಮೀಟರ್ (6,500 ಅಡಿ) ಎತ್ತರದಲ್ಲಿದೆ. ರಮಣೀಯ ಪಾಕೃತಿಕ ಸೌಂದರ್ಯ, ಆಹ್ಲಾದಕರ ವಾತಾವರಣ ಹಾಗೂ ನೈಸರ್ಗಿಕ ಆಕರ್ಷಣೆಗಳಿಗೆ ಈ ತಾಣ ಹೆಸರುವಾಸಿಯಾಗಿದೆ.
(4 / 6)
ಸ್ಪಿತಿ ಕಣಿವೆ, ಹಿಮಾಚಲ ಪ್ರದೇಶ: ಸ್ಪಿತಿ ಕಣಿವೆಯು ಹಳ್ಳಿಗಾಡಿನ ಪ್ರದೇಶವಾಗಿದೆ. ಇದು ಕಠಿಣ ಹಾಗೂ ಸುಂದರವಾದ ಕಣಿವೆಯ ಪ್ರದೇಶವನ್ನು ಹೊಂದಿರುವ ಸ್ಥಳವಾಗಿದೆ. ಇದು ಹಿಮಚ್ಛಾದಿತ ಪ್ರದೇಶವಾಗಿದ್ದು ಇಲ್ಲಿ ವರ್ಷವಿಡಿ ಅತಿ ತಂಪಾದ ವಾತಾವರಣವಿರುತ್ತದೆ. ಈ ಸ್ಥಳದಲ್ಲಿ ಟ್ರೆಕ್ಕಿಂಗ್, ಕ್ಯಾಂಪಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಅವಕಾಶವಿದೆ. ಸಾಹಸಿ ಬೈಕ್ ರೈಡರ್‌ಗಳಿಗೆ ಈ ಜಾಗ ಹಾಟ್ ಫೇವರಿಟ್.
(5 / 6)
ಋಷಿಕೇಶ, ಉತ್ತರಾಖಂಡ: ಉತ್ತರಾಖಂಡ ರಾಜ್ಯದಲ್ಲಿರುವ ಋಷಿಕೇಶವನ್ನು ವಿಶ್ವದ ಯೋಗ ರಾಜಧಾನಿ ಎಂದು ಕರೆಯಲಾಗುತ್ತದೆ. ಮೇ ತಿಂಗಳಿನಲ್ಲಿ ಋಷಿಕೇಶದಲ್ಲಿ ಬೆಚ್ಚಗಿನ, ಆಹ್ಲಾದಕರ ವಾತಾವರಣವಿರುತ್ತದೆ. ಹರಿದ್ವಾರ, ರುದ್ರಪ್ರಯಾಗದಂತಹ ಧಾರ್ಮಿಕ ಕ್ಷೇತ್ರಗಳೂ ಇಲ್ಲಿವೆ.
ಇತರ ಗ್ಯಾಲರಿಗಳು