Monsoon Tour: ಮಳೆಗಾಲ ಶುರುವಾಯ್ತು, ಕರ್ನಾಟಕದ 8 ಜಲಪಾತಗಳ ಟ್ರಿಪ್‌ಗೆ ಅಣಿಯಾಗಿ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Monsoon Tour: ಮಳೆಗಾಲ ಶುರುವಾಯ್ತು, ಕರ್ನಾಟಕದ 8 ಜಲಪಾತಗಳ ಟ್ರಿಪ್‌ಗೆ ಅಣಿಯಾಗಿ Photos

Monsoon Tour: ಮಳೆಗಾಲ ಶುರುವಾಯ್ತು, ಕರ್ನಾಟಕದ 8 ಜಲಪಾತಗಳ ಟ್ರಿಪ್‌ಗೆ ಅಣಿಯಾಗಿ photos

  • Karnataka Falls ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಜಲಪಾತಗಳೂ ಪ್ರಮುಖವಾದವು. ಮುಂಗಾರು ಶುರುವಾಗಿ ಈಗ ಜಲಪಾತಗಳಿಗೂ ಜೀವ ಕಳೆ ಬರುತ್ತಿದೆ. ಅಂತಹ ಪ್ರಮುಖ ಜಲಪಾತಗಳ ಚಿತ್ರನೋಟ ಇಲ್ಲಿದೆ.

ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿರುವ ಹೊಗೆನೆಕಲ್‌ ಜಲಪಾತ(Hogenakkal falls ) ಕಾವೇರಿ ನದಿಯ ಭಾಗ. ಬೆಂಗಳೂರು ಹಾಗೂ ಮೈಸೂರಿನಿಂದಲೂ ಇಲ್ಲಿಗೆ ಹೋಗಬಹುದು. ಈಗಷ್ಟೇ ಮಳೆ ಶುರುವಾಗಿರುವುದರಿಂದ ಜಲಪಾತ ಜೀವ ಕಳೆ ಪಡೆಯಲು ಇನ್ನಷ್ಟು ದಿನ ಬೇಕು.
icon

(1 / 8)

ಮಾನವನಾಗಿ ಹುಟ್ಟಿದ ಮೇಲೆ ಏನೇನ್‌ ಕಂಡಿ ಎಂದು ಡಾ.ರಾಜ್‌ ಹಾಡಿದ ಹಾಡು ನೆನಪಾದರೆ ಅದು ಜೋಗ(Jog Falls) ನೆನಪಾದಂತೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆ ಗಡಿ ಭಾಗವಾದ ಜೋಗ ಜಲಪಾತವೂ ಪ್ರಮುಖ ಪ್ರವಾಸಿ ತಾಣ. ಶಿವಮೊಗ್ಗದಿಂದ  90 ಕಿ.ಮಿ ದೂರದಲ್ಲಿದೆ ಜೋಗ.
icon

(2 / 8)

ಕೊಡಗಿನ ಪ್ರಮುಖ ಜಲಪಾತ ಅಬ್ಬಿ( Abbey falls.) ಮಡಿಕೇರಿ ನಗರದಿಂದ ಎಂಟು ಕಿ.ಮಿ ದೂರದಲ್ಲಿರುವ ಅಬ್ಬಿ ಕೂಡ ಮಳೆಗಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಜಲಪಾತ.
icon

(3 / 8)

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಜಲಪಾತಗಳಲ್ಲಿ ಒಂದು ಲಾಲ್‌ ಗುಳಿ ಜಲಪಾತ(Lalguli Waterfalls). ಕಾಳಿ ನದಿ ಸೃಷ್ಟಿಸಿರುವ ಸುಂದರ ತಾಣವಿದು. ಸುಮಾರು  61 ರಿಂದ 91  ಮೀ. ಎತ್ತರದಿಂದ ಬೀಳುವ ಜಲಪಾತ ವೀಕ್ಷಣೆ ಸೊಬಗು ಚೆನ್ನ.
icon

(4 / 8)

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಾಗೋಡು ಜಲಪಾತ(Magod Falls)  ಬೇಡ್ತಿ ನದಿಯ ಪ್ರವಾಸಿ ತಾಣ. ಬೇಡ್ತಿ ನದಿ 650 ಅಡಿ ಮೇಲಿನಿಂದ ಬೀಳುವ, ಬಂಡೆಗಳ ನಡುವಿನ ಆ ವೈಭವ ಮನಮೋಹಕ.
icon

(5 / 8)

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿರುವ ಕಾವೇರಿ ನದಿ ತೀರದ ಶಿವನಸಮುದ್ರ ಜಲಪಾತವೂ(Shivanasamudra Falls) ಉತ್ಸಾಹ ತುಂಬುವ ತಾಣ. ಗಗನಚುಕ್ಕಿ ಹಾಗೂ ಭರಚುಕ್ಕಿಯಾಗಿ ಒಡೆದು ರೂಪುಗೊಂಡ ಜಲಪಾತಗಳು. ಮೈಸೂರಿನಿಂದ 81 ಕಿ.ಮಿ ಹಾಗೂ ಬೆಂಗಳೂರಿನಿಂದ 130  ಕಿ.ಮೀ ದೂರದಲ್ಲಿದೆ. 
icon

(6 / 8)

ಚಿಕ್ಕಮಗಳೂರು ಜಿಲ್ಲೆಯ ಸೊಬಗಿನ ಜಲಪಾತ ಹೆಬ್ಬೆ( Hebbe Falls). ಭದ್ರಾ ಹುಲಿ ಯೋಜನೆ ವ್ಯಾಪ್ತಿಯೊಳಗೆ ನೆಲೆಗೊಂಡಿರುವ ಭದ್ರಾ ನದಿಯ ಜಲಪಾತಕ್ಕೂ ಜೀವ ಕಳೆ ಬರುತ್ತಿದೆ. ಇಲ್ಲಿ ಚಿಕ್ಕ ಹಾಗೂ ದೊಡ್ಡ ಹೆಬ್ಬೆ ಎಂಬ ಎರಡು ಜಲಪಾತಗಳಿವೆ.  ಎರಡು ಕಿ.ಮಿ ನಡೆದುಕೊಂಡೇ ಅಲ್ಲಿಗೆ ಹೋಗಬೇಕು.
icon

(7 / 8)

ಕೊಡಗು ಹಾಗೂ ಕೇರಳಕ್ಕೆ ಹೊಂದಿಕೊಂಡಂತೆ ಇರುವ ಇರ್ಪು ಜಲಪಾತವು(Irupu Falls) ಲಕ್ಷ್ಮಣತೀರ್ಥ ನದಿ ಸೃಷ್ಟಿಸಿರುವ ಸೊಬಗು. ಮೈಸೂರು ಹಾಗೂ ಮಡಿಕೇರಿಯಿಂದ ನೂರು ಕಿ.ಮಿ. ದೂರದಲ್ಲಿದೆ. ಇರ್ಪು. ನಾಗೃಹೊಳೆ ಸಮೀಪದಲ್ಲಿಯೇ ಇದೆ.
icon

(8 / 8)

ಇತರ ಗ್ಯಾಲರಿಗಳು