Tweet Effect: ಒಂದು ಟ್ವೀಟ್‌ಗೆ ಶಿವನಸಮುದ್ರ ಜಲಪಾತ ಸುತ್ತಲ ಕಸ ಮಾಯ, ಸಿಎಂ ಕಚೇರಿ ಸೂಚನೆಯಿಂದ ಹೇಗಿದ್ದ ಸನ್ನಿವೇಶ ಹೇಗಾಯ್ತು ನೋಡಿ-tourism news shivanasamudra falls tourist area became garbage single tweet changed by instructions by karnataka cmo kub ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tweet Effect: ಒಂದು ಟ್ವೀಟ್‌ಗೆ ಶಿವನಸಮುದ್ರ ಜಲಪಾತ ಸುತ್ತಲ ಕಸ ಮಾಯ, ಸಿಎಂ ಕಚೇರಿ ಸೂಚನೆಯಿಂದ ಹೇಗಿದ್ದ ಸನ್ನಿವೇಶ ಹೇಗಾಯ್ತು ನೋಡಿ

Tweet Effect: ಒಂದು ಟ್ವೀಟ್‌ಗೆ ಶಿವನಸಮುದ್ರ ಜಲಪಾತ ಸುತ್ತಲ ಕಸ ಮಾಯ, ಸಿಎಂ ಕಚೇರಿ ಸೂಚನೆಯಿಂದ ಹೇಗಿದ್ದ ಸನ್ನಿವೇಶ ಹೇಗಾಯ್ತು ನೋಡಿ

  • Public grievences ಸಾರ್ವಜನಿಕ ಸಮಸ್ಯೆಗೆ ದೂರು ನೀಡಲು ಹಲವು ಮಾರ್ಗ. ಸಾಮಾಜಿಕ ಮಾಧ್ಯಮವೂ ಪರಿಣಾಮಕಾರಿಯೇ. ಪ್ರಖ್ಯಾತ ಜಲತಾಣ ಶಿವನಸಮುದ್ರದ ಬಳಿ ತುಂಬಿದ್ದ ಕಸದ ರಾಶಿಯನ್ನು ಒಂದು ಟ್ವೀಟ್‌ ಬದಲಿಸಿದೆ. ಇದರ ಚಿತ್ರನೋಟ ಇಲ್ಲಿದೆ. ನಿಮ್ಮೂರಿನಲ್ಲಿ ಹೀಗೆಯೇ ಇದ್ದರೆ ನೀವೂ @osd_cmkarnataka ಗೆ  ಪೋಸ್ಟ್‌ ಮಾಡಬಹುದು.

ಮಂಡ್ಯ- ಚಾಮರಾಜನಗರ ಜಿಲ್ಲೆಯ ಪ್ರವಾಸಿ ಸೊಬಗು ಹೆಚ್ಚಿಸಿರುವ ಶಿವನಸಮುದ್ರದ ಭರಚುಕ್ಕಿ ಜಲಪಾತದ ಬಳಿ ಕಸವೋ ಕಸ.ಕಳೆದ ವಾರ ಜಲಪಾತೋತ್ಸವ ಮಾಡಿದ್ದರ ಜತೆಗೆ ಸ್ಥಳೀಯವಾಗಿ ಕಸವನ್ನು ಅಲ್ಲಿಯೇ ಎಸೆಯಲಾಗುತ್ತಿತ್ತು.
icon

(1 / 7)

ಅದೂ ಪ್ರವಾಸಿಗರು ಜಲಪಾತ ವೀಕ್ಷಿಸುವ ಮುನ್ನ ಈ ಕಸ ನೋಡುವ ಸ್ಥಿತಿಯಿತ್ತು,. ಕರ್ನಾಟಕದ ಪ್ರವಾಸಿ ತಾಣಗಳ ಕಥೆ ಇಷ್ಟೆ ಎನ್ನುವಂತಹ ವಾತಾವರಣ ಕಂಡು ಬಂದಿತ್ತು.
icon

(2 / 7)

ಈ ಕಸದ ರಾಶಿಯನ್ನು ವೀಕ್ಷಿಸಿದ ಪ್ರವಾಸಿಗರಾದ ನೀತು(@neethuneetha)ಎಂಬುವವರು ಇಲ್ಲಿನ ಸ್ಥಿತಿ ಕಂಡು ಬೇಜಾರಾದರು. ಸುಮ್ಮನೇ ಕೂರದೇ ಸಿಎಂ ಕಚೇರಿಗೆ ಎಕ್ಸ್‌ ಪೋಸ್ಟ್‌ ಮೂಲಕ ಗಮನಕ್ಕೆ ತಂದರು.
icon

(3 / 7)

ಕರ್ನಾಟಕದ ಮುಖ್ಯಮಂತ್ರಿಗಳ ಕಚೇರಿ ಸಾರ್ವಜನಿಕ ಸಮಸ್ಯೆ ನೋಡಿಕೊಳ್ಳುವ ವಿಭಾಗ(@osd_cmkarnataka) ದೂರು ಹೋಗಿತ್ತು. ಇದನ್ನು ಗಮನಿಸಿದ ಕಚೇರಿಯಿಂದ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಲಾಯಿತು.
icon

(4 / 7)

ಸಿಎಂ ಕಚೇರಿಯಲ್ಲಿ ಸಾರ್ವಜನಿಕ ದೂರುಗಳ ವಿಭಾಗ ನೋಡಿಕೊಳ್ಳುವ ಡಾ.ವೈಷ್ಣವಿ(@DrVaishnavi14) ಅವರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರಿಂದ ಸ್ವಚ್ಚತೆ ಶುರುವಾಯಿತು.,
icon

(5 / 7)

ಈಗ ಶಿವನಸಮುದ್ರ ಜಲಪಾತದ ಸೊಬಗನ್ನು ಯಾವುದೇ ಅಡ್ಡಿಯಿಲ್ಲದೇ ನೋಡಬಹುದು.ಅಂತಹ ವಾತಾವರಣ ನಿರ್ಮಾಣವಾಗಿದೆ.
icon

(6 / 7)

ಅಲ್ಲದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಶಿವನಸಮುದ್ರದ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆಯೂ ಸೂಚಿಸಲಾಗಿದೆ. ನಿಮ್ಮ ಒಂದು ದೂರು ಈ ರೀತಿ ಬದಲಾವಣೆಗೂ ದಾರಿಯಾಗಬಹುದು.
icon

(7 / 7)

ಇತರ ಗ್ಯಾಲರಿಗಳು