Tourism: ಪ್ರವಾಸಿಗರು, ಚಾರಣಿಗರನ್ನು ಸೆಳೆಯುತ್ತಿದೆ ದೇವರಮನೆ ಗುಡ್ಡ, ಬೇರೆ ಎಲ್ಲೋ ಅಲ್ಲ ಇದು ಇರೋದು ಕರ್ನಾಟಕದಲ್ಲೇ; ಫೋಟೋ ಗ್ಯಾಲರಿ
ಕೆಲಸ, ಮನೆ, ಸಂಸಾರದ ಟೆನ್ಷನ್ ಇರೋರಿಗೆ ವೀಕೆಂಡ್ನಲ್ಲಿ ಹೊರಗೆ ಸುತ್ತಾಡಿ ಬಂದ್ರೆ ರಿಲೀಫ್ ಅನ್ನಿಸುತ್ತೆ. ಅದರಲ್ಲೂ ಪ್ರಕೃತಿ ಮಡಿಲಲ್ಲಿ ಅಡ್ಡಾಡಿ ಬಂದ್ರೆ ಇನ್ನೂ ಸ್ವಲ್ಪ ದಿನಗಳು ಖುಷಿ ಖುಷಿಯಾಗಿ ಎಲ್ಲಾ ಕೆಲಸಗಳನ್ನು ಮಾಡಬಹುದು.
(1 / 8)
ಕೆಲವರು ಹಸಿರು ಪರಿಸರ ಹುಡುಕುತ್ತಾ ಹೊರ ರಾಜ್ಯಗಳಿಗೆ ಅಲೆಯುತ್ತಾರೆ. ಆದರೆ ನಮ್ಮ ಕರ್ನಾಟಕದಲ್ಲೇ ಎಷ್ಟೋ ಜನರಿಗೆ ಗೊತ್ತಿಲ್ಲದ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲಿ ದೇವರಮನೆ ಗುಡ್ಡ ಕೂಡಾ ಒಂದು. (PC: ರಾಘವೇಂದ್ರರಾವ್ ಎ.ಆರ್ ಪವಾರ್, @ADARSHASK13 ಎಕ್ಸ್ ಪೇಜ್)
(2 / 8)
ದೇವರ ಮನೆ ಗುಡ್ಡ ಇರೋದು ಮತ್ತೆಲ್ಲೂ ಅಲ್ಲ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ (PC: @Blowfish_1201)
(3 / 8)
ಈ ಸ್ಥಳಕ್ಕೆ ನೀವು ಯಾವಾಗ ಬೇಕಿದ್ರೂ ಹೋಗಿ ಬರಬಹುದು, ಆದರೆ ನವೆಂಬರ್ನಿಂದ ಫೆಬ್ರವರಿವರೆಗೆ ಇಲ್ಲಿಗೆ ಹೋಗಲು ಸೂಕ್ತ ಸಮಯ. ಈ ಸೀಸನ್ನಲ್ಲಿ ಈ ಬೆಟ್ಟವನ್ನು ನೋಡೋದೇ ಚೆಂದ.
(4 / 8)
ದೇವರಮನೆಯು ಮೂಡಿಗೆರೆಯಿಂದ ಸುಮಾರು 25 ಕಿಮೀ ದೂರದಲ್ಲಿದೆ. ಸ್ವಂತ ವಾಹನಗಳಲ್ಲಿ ಈ ಸ್ಥಳಕ್ಕೆ ಬಂದರೆ ನೀವು ಹೆಚ್ಚು ಸಮಯವನ್ನು ಇಲ್ಲಿ ಕಳೆಯಬಹುದು.
(5 / 8)
ಟ್ರೆಕ್ಕಿಂಗ್ ಪ್ರಿಯರಿಗಂತೂ ಇದು ಹೇಳಿ ಮಾಡಿಸಿದಂಥ ಸ್ಥಳ. ಸೋಲೋ ಟ್ರಿಪ್, ಫ್ಯಾಮಿಲಿ, ಪ್ರೇಮಿಗಳೆಲ್ಲರಿಗೂ ಇದು ಫೇವರೆಟ್ ಸ್ಪಾಟ್.
(6 / 8)
ಇಲ್ಲಿ ಬಂದವವರು ಪ್ರಕೃತಿಯ ಅಂದವನ್ನು ಸವಿಯೋದ್ರ ಜೊತೆಗೆ ಫೋಟೋಶೂಟ್ ಮಾಡಿಸದೆ ಹೋಗುವುದಿಲ್ಲ. ದೇವರಮನೆ ಗುಡ್ಡದ ಸೊಬಗು ಸವಿಯಲು ಎರಡು ಕಣ್ಣುಗಳು ಸಾಲದು.
(7 / 8)
ಹಸಿರು ಬೆಟ್ಟಗಳು ಹಾಗೂ ನೀಲಿ ಆಕಾಶದ ನಡುವಿನ ಬೆಳ್ಳಿಯ ಮೋಡಗಳ ದೃಶ್ಯ ಎಲ್ಲರ ಮನಸ್ಸನ್ನು ತಣಿಸದೆ ಇರಲಾರದು. ಹಸಿರು ವಾತಾವರಣ ಕಣ್ಣಿಗೆ ತಂಪೆರೆದರೆ, ತಣ್ಣನೆಯ ಗಾಳಿ ಮೈ ಮನಸ್ಸಿಗೆ ಮುದ ನೀಡುತ್ತದೆ.
ಇತರ ಗ್ಯಾಲರಿಗಳು