Bhadrachalam: ಶ್ರೀರಾಮನ ದರ್ಶನ ಪಡೆಯಲು ಭದ್ರಾಚಲಂಗೆ ಹೋದ್ರೆ ಈ 6 ಜಾಗಗಳನ್ನು ತಪ್ಪದೇ ನೋಡಿ ಬನ್ನಿ
- ಆಂಧ್ರಪ್ರದೇಶ ಗೋದಾವರಿ ಜಿಲ್ಲೆಯಲ್ಲಿರುವ ಭದ್ರಾಚಲಂ ಶ್ರೀ ರಾಮನ ದೇಗುಲಕ್ಕೆ ಪ್ರಸಿದ್ಧಿ. ಗೋದಾವರಿ ನದಿ ತೀರದಲ್ಲಿರುವ ಈ ದೇವಾಲಯಕ್ಕೆ ಸಹಸ್ರಾರು ಹಿಂದೂಗಳು ಭೇಟಿ ನೀಡುತ್ತಾರೆ. ನೀವು ಇಲ್ಲಿಗೆ ಈ 6 ಜಾಗಗಳನ್ನು ತಪ್ಪದೇ ನೋಡಿ ಬನ್ನಿ.
- ಆಂಧ್ರಪ್ರದೇಶ ಗೋದಾವರಿ ಜಿಲ್ಲೆಯಲ್ಲಿರುವ ಭದ್ರಾಚಲಂ ಶ್ರೀ ರಾಮನ ದೇಗುಲಕ್ಕೆ ಪ್ರಸಿದ್ಧಿ. ಗೋದಾವರಿ ನದಿ ತೀರದಲ್ಲಿರುವ ಈ ದೇವಾಲಯಕ್ಕೆ ಸಹಸ್ರಾರು ಹಿಂದೂಗಳು ಭೇಟಿ ನೀಡುತ್ತಾರೆ. ನೀವು ಇಲ್ಲಿಗೆ ಈ 6 ಜಾಗಗಳನ್ನು ತಪ್ಪದೇ ನೋಡಿ ಬನ್ನಿ.
(1 / 7)
ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಭಾರತದಲ್ಲೇ ವಿಶಿಷ್ಟ ಎನ್ನಿಸಿಕೊಂಡ ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯವಿದೆ. 17ನೇ ಶತಮಾನದ ಈ ದೇವಾಲಯಕ್ಕೆ ವಿಶ್ವದಾದ್ಯಂತ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಭೇಟಿ ನೀಡುವ ಪ್ಲಾನ್ ನಿಮಗಿದ್ರೆ ಈ ಜಾಗಗಳನ್ನು ತಪ್ಪದೇ ನೋಡಿ ಬನ್ನಿ.
(2 / 7)
ಪಾಪಿ ಕೊಂಡಲು ಹಿಲ್ಸ್: ಭದ್ರಾಚಲಂಗೆ ಹೋದಾಗ ಪಾಪಿ ಕೊಂಡಲು ಹಿಲ್ಸ್ ಕೂಡ ನೋಡಿ ಬರಬಹುದು. ಅದಕ್ಕಾಗಿ ಸ್ಟೀಮ್‌ಬೋಟ್‌ನಲ್ಲಿ ಗೋದಾವರಿ ನದಿಯಲ್ಲಿ ಪ್ರಯಾಣ ಮಾಡುವುದೇ ಒಂದು ವಿಶಿಷ್ಠ ಅನುಭವ. ಜಲಪಾತ ಹಾಗೂ ಗುಡ್ಡಗಳ ನಡುವೆ ಇಣುಕಿ ನೋಡುವ ಮೋಡಗಳ ಅಂದವನ್ನು ಕಣ್ತುಂಬಿಕೊಳ್ಳಲು ನೀವು ಇಲ್ಲಿಗೆ ಹೋಗಲೇಬೇಕು.
(3 / 7)
ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯ: ಮೊದಲೇ ಹೇಳಿದಂತೆ ಇದು ಭದ್ರಾಚಲಂನ ಪ್ರಮುಖ ಸ್ಥಳ. ಇಲ್ಲಿನ ದೇವಾಲಯಗಳ ಗೋಡೆಗಳ ಕೆತ್ತನೆಯಲ್ಲಿ ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸಲಾಗಿದೆ. (GOVERNMENT OF TELANGANA)
(4 / 7)
ಪರ್ಣಶಾಲಾ: ಪರ್ಣಶಾಲವು ಭದ್ರಚಾಲಂನಲ್ಲಿರುವ ಒಂದು ಪ್ರಮುಖ ಹಾಗೂ ಅದ್ಭುತ ಸ್ಥಳ. ಇದು ತೆಲಂಗಾಣದ ಖಮ್ಮಂ ಜಿಲ್ಲೆಯ ಜನಪ್ರಿಯ ಗ್ರಾಮವಾಗಿದೆ. ಇದು ಭದ್ರಾಚಲಂನಿಂದ 32 ಕಿಲೋಮೀಟರ್ ದೂರದಲ್ಲಿದೆ. (organiser.org)
(5 / 7)
ಶಬರಿ: ಆಂಧ್ರಪ್ರದೇಶದಲ್ಲೂ ಒಂದು ಶಬರಿಮಲೆ ಇದೆ. ಇದು ಶಬರಿ ನದಿಯ ದಂಡೆಯ ಮೇಲಿರುವ ವಿಶಾಲವಾದ ಕಾಡು ಪ್ರದೇಶವಾಗಿದೆ. ಕಾಡಿನ ಮಧ್ಯದಲ್ಲಿರುವ ಒಂದು ಬೆಟ್ಟದ ಮೇಲೆ ದೇವಾಲಯವಿದೆ. ಈ ದೇವಾಲಯವನ್ನು ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಅರ್ಪಿಸಲಾಗಿದೆ. ಶಬರಿ ಬೆಟ್ಟಗಳು ವಿಶ್ವವಿಖ್ಯಾತ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿದೆ.(Holidify)
(6 / 7)
ಅಭಯ ಆಂಜನೇಯ ಸ್ವಾಮಿ ದೇವಾಲಯ: ಇದು ಭಗವಾನ್ ಹುನುಮಂತನಿಗೆ ಸಮರ್ಪಿತವಾಗಿರುವ ದೇವಾಲಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹಾಗೂ ಅಂಜನೇಯ ಭಕ್ತರು ಇಲ್ಲಿಗೆ ಹೆಚ್ಚು ಭೇಟಿ ನೀಡುತ್ತಾರೆ. (Indiano Travel )
ಇತರ ಗ್ಯಾಲರಿಗಳು