ಮೇ ತಿಂಗಳಲ್ಲಿ ಪ್ರವಾಸ ಯೋಜಿಸುತ್ತಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಬಹುದು; ಶಾಂತಿಯುತ ಸಮಯ ಕಳೆಯಲು ಇವು ಬೆಸ್ಟ್
ಮೇ ತಿಂಗಳು ಪ್ರಾರಂಭವಾಗಲಿದೆ. ಈ ತಿಂಗಳಿನಲ್ಲಿ ಎಲ್ಲಿಗಾದರೂ ತಿರುಗಾಡಲು ಯೋಜಿಸುತ್ತಿದ್ದರೆ, ಭೇಟಿ ನೀಡಲು ಉತ್ತಮವಾದ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
(1 / 9)
ಮೇ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ಸ್ಥಳವನ್ನು ಹುಡುಕುತ್ತಿದ್ದರೆ, ನೀವು ಹೋಗಬಹುದಾದ ಕೆಲವು ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ನಗರದ ಗದ್ದಲದಿಂದ ದೂರವಾಗಿ ಶಾಂತಿಯುತವಾಗಿ ಸಮಯ ಕಳೆಯಲು ಈ ಸ್ಥಳಗಳು ಉತ್ತಮ.
(2 / 9)
ಅಲ್ಮೋರಾ, ಉತ್ತರಾಖಂಡ್: ಪ್ರಕೃತಿಯ ಮಡಿಲಿನಲ್ಲಿ ಶಾಂತಿಯುತ ರಜೆಯನ್ನು ಕಳೆಯಲು ಅಲ್ಮೋರಾ ಉತ್ತಮ ಸ್ಥಳವಾಗಿದೆ. ಮೇ ತಿಂಗಳಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.
(3 / 9)
ಪಚ್ಮರ್ಹಿ, ಮಧ್ಯಪ್ರದೇಶ: ಸತ್ಪುರ ಪರ್ವತ ಶ್ರೇಣಿಯಿಂದ ಸುತ್ತುವರೆದಿರುವ ಪಚಮಡಿ, ಪ್ರಶಾಂತವಾದ ಗಿರಿಧಾಮವಾಗಿದೆ. ಅನೇಕ ಗುಹೆಗಳು, ದೇವಾಲಯಗಳು ಮತ್ತು ದಟ್ಟವಾದ ಕಾಡುಗಳು ಈ ಸ್ಥಳದ ಸೌಂದರ್ಯವನ್ನು ಹೆಚ್ಚಿಸಿವೆ.
(4 / 9)
ಚಂಬಾ, ಹಿಮಾಚಲ ಪ್ರದೇಶ: ಚಂಬಾ ಒಂದು ಅದ್ಭುತ ಸ್ಥಳ. ಪ್ರಾಚೀನ ಸರೋವರಗಳು, ಎತ್ತರದ ಪರ್ವತಗಳು ಮತ್ತು ಸುಂದರವಾದ ಸೂರ್ಯಾಸ್ತಗಳು ಇದನ್ನು ಇತರ ಗಿರಿಧಾಮಗಳಿಗಿಂತ ಭಿನ್ನವಾಗಿಸುತ್ತವೆ.
(5 / 9)
ನಂದಿ ಬೆಟ್ಟ, ಕರ್ನಾಟಕ: ನಂದಿ ಬೆಟ್ಟದ ಆಕರ್ಷಕ ದೃಶ್ಯ ನೋಡಿದರೆ ನಿಮ್ಮ ಮನಸ್ಸು ಸಂತೋಷದಿಂದ ತುಂಬಿ ಬರುತ್ತದೆ. ಈ ಸ್ಥಳವು ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗೆ ಹೆಸರುವಾಸಿಯಾಗಿದೆ.
(6 / 9)
ಚಿರಾಪುಂಜಿ, ಮೇಘಾಲಯ: ಚಿರಾಪುಂಜಿ ವರ್ಷಪೂರ್ತಿ ಮಳೆ ಬೀಳುವ ಸ್ಥಳ. ಇಲ್ಲಿ ನೀವು ಏಷ್ಯಾದ ಅತಿ ಎತ್ತರದ ಜಲಪಾತಗಳನ್ನು ವೀಕ್ಷಿಸಬಹುದು.
(7 / 9)
ಹಾರ್ಸ್ಲೆ ಬೆಟ್ಟ, ಆಂಧ್ರಪ್ರದೇಶ: 'ಆಂಧ್ರದ ಊಟಿ' ಎಂದು ಕರೆಯಲ್ಪಡುವ ಹಾರ್ಸ್ಲೆ ಬೆಟ್ಟ ಒಂದು ಸುಂದರವಾದ ಗಿರಿಧಾಮವಾಗಿದೆ. ದಟ್ಟವಾದ ಕಾಡು, ಬೆಟ್ಟಗಳು ಮತ್ತು ಸುಂದರವಾದ ಹುಲ್ಲುಗಾವಲುಗಳಿಂದ ಸುತ್ತುವರೆದಿರುವ ಈ ಸ್ಥಳವು ಪ್ರಕೃತಿ ಪ್ರಿಯರು ಮತ್ತು ಸಾಹಸ ಪ್ರಿಯರಿಗೆ ಇಷ್ಟವಾಗುತ್ತದೆ.
(8 / 9)
ತೀರ್ಥನ್ ಕಣಿವೆ, ಹಿಮಾಚಲ ಪ್ರದೇಶ: ತೀರ್ಥನ್ ಕಣಿವೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿರುವ ಒಂದು ಸುಂದರವಾದ ಸ್ಥಳವಾಗಿದೆ. ನೀವು ನಗರದ ಜೀವನದಿಂದ ದೂರವಾಗಿ ಸಮಯ ಕಳೆಯಲು ಬಯಸಿದರೆ, ಇದು ನಿಮಗೆ ಸೂಕ್ತ ಸ್ಥಳವಾಗಿದೆ.
ಇತರ ಗ್ಯಾಲರಿಗಳು