ಕನ್ನಡ ಸುದ್ದಿ  /  Photo Gallery  /  Travel Indian Tourism Indian Railway Train Route 10 Best And Beautiful Train Journey In India Must Visit Once Rst

Train Journey: ಭಾರತದಲ್ಲಿನ 10 ಅತಿ ಸುಂದರ ರೈಲು ಮಾರ್ಗಗಳಿವು, ಜೀವನದಲ್ಲಿ ಒಮ್ಮೆಯಾದ್ರೂ ಈ ಊರುಗಳಲ್ಲಿ ಟ್ರೈನ್‌ ಜರ್ನಿ ಮಾಡಿ

  • ಚುಕುಬುಕು ಚುಕುಬುಕು ಎನ್ನುತ್ತಾ ಸಾಗುವ ರೈಲಿನಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆ ಹಲವರಲ್ಲಿರುವುದು ಸಹಜ. ರೈಲು ಪಯಣದ ಅನುಭವವೇ ಅದ್ಭುತ. ಅದರಲ್ಲೂ ಭಾರತದ ಈ ಮಾರ್ಗಗಳಲ್ಲಿ ಸಂಚರಿಸುವ ರೈಲಿನಲ್ಲಿ ನೀವು ಪಯಣ ಮಾಡಿದ್ರೆ ನಿಜಕ್ಕೂ ಸ್ವರ್ಗ ಕಾಣುತ್ತೀರಿ. ಅಂತಹ 10 ಸುಂದರ ರೈಲು ಮಾರ್ಗಗಳು ಇಲ್ಲಿವೆ.

ಸಾಮಾಜಿಕ ಜಾಲತಾಣಗಳನ್ನು ತಡಕಾಡುವಾಗ ವಿದೇಶಗಳಲ್ಲಿನ ಸುಂದರ ರೈಲು ಮಾರ್ಗಗಳನ್ನು ನೋಡಿ ವಾವ್‌ ಎಂದು ಉದ್ಗಾರ ತೆಗೆದಿರುತ್ತೀರಿ. ಅಲ್ಲದೇ ಇಂತಹ ಮಾರ್ಗಗಳಲ್ಲಿ ಒಮ್ಮೆಯಾದ್ರೂ ಪಯಣ ಮಾಡಬೇಕು ಅಂದುಕೊಂಡಿರುತ್ತೀರಿ, ಆದರೆ ಭಾರತದಲ್ಲಿ ಅದಕ್ಕಿಂತ ಸುಂದರ ರೈಲು ಮಾರ್ಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಅಂತಹ 10 ಅದ್ಭುತ ರೈಲು ಮಾರ್ಗಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. 
icon

(1 / 12)

ಕಲ್ಕಾ-ಶಿಮ್ಲಾ ಮಾರ್ಗ: ನೀವು ಶಿಮ್ಲಾ ಕಡೆ ಟ್ರಿಪ್‌ ಪ್ಲಾನ್‌ ಮಾಡಿದ್ದರೆ ಕಲ್ಕಾ-ಶಿಮ್ಲಾ ನಡುವೆ ಸಂಚಾರ ಮಾಡುವ ಟಾಯ್‌ ಟ್ರೈನ್‌ ರೈಡ್‌ ಮಿಸ್‌ ಮಾಡಿಕೊಳ್ಳಲೇಬೇಡಿ. ಇದು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲೂ ಸ್ಥಾನ ಗಳಿಸಿದೆ. ಹಸಿರು ಹುಲ್ಲುಗಾವಲು ಹಾಗೂ ಕಣಿವೆಗಳ ನಡುವೆ ಸಂಚರಿಸುವ ಈ ರೈಲು ಪಯಣ ನಿಮ್ಮನ್ನ ಬೇರಯದೇ ಲೋಕಕ್ಕೆ ಕೊಂಡ್ಯೊಯುವುದರಲ್ಲಿ ಎರಡು ಮಾತಿಲ್ಲ. 96 ಕಿಲೋಮೀಟರ್‌ ಎತ್ತರದಲ್ಲಿ ಸಾಗುವ ಈ ರೈಲು 102 ಸುರಂಗಗಳು ಹಾಗೂ 82 ಸೇತುವೆಗಳನ್ನು ದಾಟುತ್ತದೆ. ಭಾರತದಲ್ಲಿ ಇಂತಹ ರೈಲು ಮಾರ್ಗ ಇನ್ನೊಂದಿಲ್ಲ. 
icon

(2 / 12)

ಜಲಪೈಗುರಿ-ಡಾರ್ಜಿಲಿಂಗ್‌ ಮಾರ್ಗ: ಇದು ಕೂಡ ಯುನೆಸ್ಕೊ ವಿಶ್ವ ಪಾರಂಪರಿಕ ತಾಣದಲ್ಲಿ ಹೆಸರು ಗಳಿಸಿದೆ. ಡಾರ್ಜಿಲಿಂಗ್‌ನ ಗಿರಿಧಾಮಗಳಿಗೆ ಭೇಟಿ ನೀಡಿದಾಗ ಇದನ್ನು ಮಿಸ್‌ ಮಾಡದಿರಿ. ಇದು 8 ಗಂಟೆಗಳ ಕಾಲ ಪ್ರಯಾಣದ ದಾರಿಯಾಗಿದೆ. ಸಿಲಿಗುರಿ ಟೌನ್, ಸಿಲಿಗುರಿ ಜಂಕ್ಷನ್, ಸುಕ್ನಾ, ರಂಗ್ಟಾಂಗ್, ತಿಂಧರಿಯಾ, ಮಹಾನದಿ, ಕುರ್ಸಿಯಾಂಗ್, ತುಂಗ್, ಸೋನಾಡಾ, ಘುಮ್, ರೋಂಗ್ಬುಲ್, ಜೋರ್ಬಂಗ್ಲೋ ಮತ್ತು ಬಟಾಸಿಯಾ ಲೂಪ್ ಮೂಲಕ ಹಾದು ಹೋಗುವ ರೈಲು ಇದಾಗಿದೆ. 
icon

(3 / 12)

ದೆಹಲಿ ಮುಂಬೈ: ಈ ಮಾರ್ಗದಲ್ಲಿ ಸಂಚರಿಸುವ ಐಷಾರಾಮಿ ಮಹಾರಾಜ ಎಕ್ಸ್‌ಪ್ರೆಸ್‌ ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಈ 5 ರಾಜ್ಯಗಳನ್ನು ಹಾದು ಹೋಗುತ್ತದೆ. ಒಟ್ಟು 6 ರಾತ್ರಿ ಹಾಗೂ 7 ದಿನಗಳ ಪ್ರಯಾಣವು ದೆಹಲಿ, ಆಗ್ರಾ, ರಣಥಂಬೋರ್, ಜೈಪುರ, ಬಿಕಾನೇರ್, ಜೋಧ್‌ಪುರ, ಉದಯಪುರ ಮತ್ತು ಮುಂಬೈಯಂತಹ ಸ್ಥಳಗಳನ್ನು ತೋರಿಸುವ ಜೊತೆಗೆ ವಸತಿ ಹಾಗೂ ಊಟದ ವ್ಯವಸ್ಥೆಯೂ ಸೇರಿರುವ ಪ್ಯಾಕೇಜ್‌ ಟ್ರಿಪ್‌ ಆಗಿದೆ. 
icon

(4 / 12)

ಮುಂಬೈ-ಗೋವಾ: ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ನೀವು ಕಳೆದು ಹೋಗಬೇಕು, ಮನದ ನೋವುಗಳನ್ನೆಲ್ಲಾ ಹಸಿರ ಸಿರಿ ನೋಡುತ್ತಾ ಮರೆಯಬೇಕು ಅಂತಿದ್ರೆ ಮುಂಬೈ ಹಾಗೂ ಗೋವಾ ನಡುವೆ ಸಂಚರಿಸುವ ಮಾಂಡೋವಿ ಎಕ್ಸ್‌ಪ್ರೆಸ್‌ ಹತ್ತಬೇಕು. ನದಿ, ಕಣಿವೆಗಳು, ಅರೇಬಿಯನ್‌ ಸಮುದ್ರ, ಬೆಟ್ಟ-ಗುಡ್ಡಗಳ ನಡುವೆ ಹಾದು ಹೋಗುವ ಈ ರೈಲು ಪಯಣ ನಿಮಗೆ ಇಷ್ಟವಾಗದೇ ಇರುವುದಿಲ್ಲ. 
icon

(5 / 12)

ಹುಬ್ಬಳ್ಳಿ-ಮಾಡಂಗಾವ್‌: ಗೋವಾ ಲಿಂಕ್‌ ಎಕ್ಸ್‌ಪ್ರೆಸ್‌ ಅಥವಾ ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ ಹುಬ್ಬಳ್ಳಿ-ಮಾಡಂಗಾವ್‌ ಮಾರ್ಗದಲ್ಲಿ ನೀವು ಸಂಚಾರ ಮಾಡಿದರೆ ನಿಮ್ಮ ಜೀವನದ ಬೆಸ್ಟ್‌ ರೈಲು ಪಯಣ ನೋಡುವುದರಲ್ಲಿ ಎರಡು ಮಾತಿಲ್ಲ. ಈ ಮಾರ್ಗದಲ್ಲಿ ಸಾಗುವಾಗ ನಿಮಗೆ ಅತ್ಯದ್ಭುತ ಸೌಂದರ್ಯದ ಧೂದ್‌ಸಾಗರ್‌ ಜಲಪಾತವನ್ನು ವೀಕ್ಷಣೆ ಮಾಡಬಹುದು. ಧೂದ್‌ಸಾಗರ್‌ ಜಲಪಾತವನ್ನು ಹತ್ತಿರದಿಂದ ನೋಡಲು ಲೋಂಡಾ ಜಂಕ್ಷನ್‌ನಲ್ಲಿ ಇಳಿಯಬೇಕು. 
icon

(6 / 12)

ಹುಬ್ಬಳ್ಳಿ-ಮಾಡಂಗಾವ್‌: ಗೋವಾ ಲಿಂಕ್‌ ಎಕ್ಸ್‌ಪ್ರೆಸ್‌ ಅಥವಾ ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ ಹುಬ್ಬಳ್ಳಿ-ಮಾಡಂಗಾವ್‌ ಮಾರ್ಗದಲ್ಲಿ ನೀವು ಸಂಚಾರ ಮಾಡಿದರೆ ನಿಮ್ಮ ಜೀವನದ ಬೆಸ್ಟ್‌ ರೈಲು ಪಯಣ ನೋಡುವುದರಲ್ಲಿ ಎರಡು ಮಾತಿಲ್ಲ. ಈ ಮಾರ್ಗದಲ್ಲಿ ಸಾಗುವಾಗ ನಿಮಗೆ ಅತ್ಯದ್ಭುತ ಸೌಂದರ್ಯದ ಧೂದ್‌ಸಾಗರ್‌ ಜಲಪಾತವನ್ನು ವೀಕ್ಷಣೆ ಮಾಡಬಹುದು. ಧೂದ್‌ಸಾಗರ್‌ ಜಲಪಾತವನ್ನು ಹತ್ತಿರದಿಂದ ನೋಡಲು ಲೋಂಡಾ ಜಂಕ್ಷನ್‌ನಲ್ಲಿ ಇಳಿಯಬೇಕು. (Holy Tree Travel)

ಮುಂಬೈ-ದೆಹಲಿ: ಐಷಾರಾಮಿ ಡೆಕ್ಕನ್ ಒಡಿಸ್ಸಿಯಲ್ಲಿ ಮುಂಬೈ-ದೆಹಲಿ ಮಾರ್ಗದಲ್ಲಿ ಸಂಚರಿಸುವುದು ಕೂಡ ಉತ್ತಮ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ. ಮುಂಬೈನಿಂದ ಪ್ರಾರಂಭವಾಗಿ ಸಿಂಧುದುರ್ಗ, ಗೋವಾ, ಗೋವಾ- ವಾಸ್ಕೋ, ಕೊಲ್ಹಾಪುರ, ಔರಂಗಾಬಾದ್, ನಾಸಿಕ್ ಮೂಲಕ ಸಾಗುವ ಈ ರೈಲಿನ ಕೊನೆಯ ನಿಲ್ದಾಣ ದೆಹಲಿ. 
icon

(7 / 12)

ಚೆನ್ನೈ-ರಾಮೇಶ್ವರಂ: ಭಾರತದ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ರಾಮೇಶ್ವರಂಗೆ ತೆರಳಲು ಸೇತು ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಮಾಡಬಹುದು. ಸಮುದ್ರದ ಮೇಲಿನ ಪಂಬನ್ ರೈಲ್ವೆ ಸೇತುವೆಯಲ್ಲಿ ಸಾಗುವ ಈ ರೈಲು ಪಯಣ ವಿಭಿನ್ನ ಅನುಭವ ನೀಡುತ್ತದೆ. 
icon

(8 / 12)

ಚೆನ್ನೈ-ರಾಮೇಶ್ವರಂ: ಭಾರತದ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ರಾಮೇಶ್ವರಂಗೆ ತೆರಳಲು ಸೇತು ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಮಾಡಬಹುದು. ಸಮುದ್ರದ ಮೇಲಿನ ಪಂಬನ್ ರೈಲ್ವೆ ಸೇತುವೆಯಲ್ಲಿ ಸಾಗುವ ಈ ರೈಲು ಪಯಣ ವಿಭಿನ್ನ ಅನುಭವ ನೀಡುತ್ತದೆ. (Pinterest)

ಜಮ್ಮು-ಉಧಂಪುರ: ಜಮ್ಮು-ಕಾಶ್ಮೀರದ ಸೌಂದರ್ಯವನ್ನು ಸವಿಯುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಫೋಟೊ, ವಿಡಿಯೊಗಳಲ್ಲಿ ನೋಡಿಯೇ ಆಹಾ, ಅದ್ಭುತ ಎನ್ನುವ ನಾವು ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ನೈಜವಾಗಿ ಕಣ್ತುಂಬಿಕೊಳ್ಳಲು ಜಮ್ಮು-ಉಧಂಪುರ ರೈಲು ಮಾರ್ಗದಲ್ಲಿ ಪ್ರಯಾಣ ಮಾಡಬೇಕು. 20 ಸುರಂಗಗಳು, 158 ಸೇತುವೆಗಳು ಮತ್ತು ಕೆಲವು ಸುಂದರವಾದ ನದಿಗಳನ್ನು ದಾಟಿ ಈ ರೈಲು ಸಾಗುತ್ತದೆ. 
icon

(9 / 12)

ಕನ್ಯಾಕುಮಾರಿ-ತಿರುವನಂತಪುರಂ: ಎರಡು ಗಂಟೆಗಳ ಪಯಣದ ದಾರಿ ಇದಾಗಿದೆ. ಐಲ್ಯಾಂಡ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಮಾಡುವ ಅನುಭವವೇ ಚೆಂದ. 
icon

(10 / 12)

ಬೆಂಗಳೂರು-ಗೋವಾ: ಗೋಲ್ಡನ್ ಚಾರಿಯಟ್‌ನಲ್ಲಿ ಬೆಂಗಳೂರು-ಗೋವಾ ನಡುವೆ ಸಂಚರಿಸುವಾಗ ಭೂಸ್ವರ್ಗದ ಸುಂದರ ದೃಶ್ಯಗಳನ್ನು ನಿಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಕಬಿನಿ ವನ್ಯಜೀವಿ ಅಭಯಾರಣ್ಯ, ಹಂಪಿ ಮತ್ತು ಬಾದಾಮಿಯ ಪರಂಪರೆಯ ತಾಣಗಳು, ಮರಳುಗಲ್ಲಿನ ಗುಹೆಗಳ ಸುಂದರ ನೋಟಗಳು, ದೇವಾಲಯದ ಅವಶೇಷಗಳು ಜೊತೆಗೆ ಗೋವಾದ ವಿಹಂಗಮ ನೋಟವನ್ನು ಸವಿಯಬಹುದು. 
icon

(11 / 12)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಇತರ ಗ್ಯಾಲರಿಗಳು