ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಲು ಬೆಸ್ಟ್‌ ಎನ್ನಿಸುವ ಕರ್ನಾಟಕದ 10 ಪ್ರವಾಸಿ ತಾಣಗಳಿವು; ಮುಂದಿನ ತಿಂಗಳು ಟ್ರಿಪ್‌ ಪ್ಲಾನ್‌ ಇದ್ರೆ ಗಮನಿಸಿ-travel karnataka tourism 10 best places to visit in karnataka in september hampi gokarna aagumbe badami caves rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಲು ಬೆಸ್ಟ್‌ ಎನ್ನಿಸುವ ಕರ್ನಾಟಕದ 10 ಪ್ರವಾಸಿ ತಾಣಗಳಿವು; ಮುಂದಿನ ತಿಂಗಳು ಟ್ರಿಪ್‌ ಪ್ಲಾನ್‌ ಇದ್ರೆ ಗಮನಿಸಿ

ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಲು ಬೆಸ್ಟ್‌ ಎನ್ನಿಸುವ ಕರ್ನಾಟಕದ 10 ಪ್ರವಾಸಿ ತಾಣಗಳಿವು; ಮುಂದಿನ ತಿಂಗಳು ಟ್ರಿಪ್‌ ಪ್ಲಾನ್‌ ಇದ್ರೆ ಗಮನಿಸಿ

  • ಸೆಪ್ಟೆಂಬರ್‌ ತಿಂಗಳು ಎಂದರೆ ಅತ್ತ ಮಳೆಯೂ ಇಲ್ಲದ, ಇತ್ತ ಚಳಿಯೂ ಆರಂಭವಾಗದ ಕಾಲ. ಮಳೆ ಸುರಿದ ಇಳೆಯು ಸುತ್ತಲೂ ತಂಪಾಗಿ, ಹಸಿರು ಹೊದ್ದಂತೆ ಕಾಣುತ್ತಿರುತ್ತದೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ಎರಡು ಬಾರಿ ಲಾಂಗ್‌ ವೀಕೆಂಡ್‌ ಸಿಗುವ ಸಾಧ್ಯತೆ ಇದ್ದು, ನೀವು ಕುಟುಂಬದವರು ಅಥವಾ ಸ್ನೇಹಿತರ ಜೊತೆ ಟ್ರಿಪ್‌ ಪ್ಲಾನ್‌ ಮಾಡಿದ್ರೆ ಈ ಜಾಗಗಳನ್ನ ಖಂಡಿತ ಮಿಸ್‌ ಮಾಡಬೇಡಿ.

ಸೆಪ್ಟೆಂಬರ್‌ ತಿಂಗಳು ಹತ್ತಿರದಲ್ಲಿದೆ. ಮಳೆಯ ಅಬ್ಬರವೂ ಕೊಂಚ ತಗ್ಗಿದೆ. ಮುಂದಿನ ತಿಂಗಳು ಎಲ್ಲಾದ್ರೂ ಪ್ರವಾಸ ಹೋಗೋಣ ಎಂದು ನೀವು ಯೋಚಿಸಿದ್ದರೆ ಕರ್ನಾಟಕದಲ್ಲೇ ಇರುವ ಈ ತಾಣಗಳನ್ನು ಖಂಡಿತ ಮಿಸ್‌ ಮಾಡಬೇಡಿ. ಸೆಪ್ಟೆಂಬರ್‌ನಲ್ಲಿ ಪ್ರವಾಸ ಮಾಡಲು ಹೇಳಿ ಮಾಡಿಸಿದ 10 ಜಾಗಗಳಿವು. 
icon

(1 / 12)

ಸೆಪ್ಟೆಂಬರ್‌ ತಿಂಗಳು ಹತ್ತಿರದಲ್ಲಿದೆ. ಮಳೆಯ ಅಬ್ಬರವೂ ಕೊಂಚ ತಗ್ಗಿದೆ. ಮುಂದಿನ ತಿಂಗಳು ಎಲ್ಲಾದ್ರೂ ಪ್ರವಾಸ ಹೋಗೋಣ ಎಂದು ನೀವು ಯೋಚಿಸಿದ್ದರೆ ಕರ್ನಾಟಕದಲ್ಲೇ ಇರುವ ಈ ತಾಣಗಳನ್ನು ಖಂಡಿತ ಮಿಸ್‌ ಮಾಡಬೇಡಿ. ಸೆಪ್ಟೆಂಬರ್‌ನಲ್ಲಿ ಪ್ರವಾಸ ಮಾಡಲು ಹೇಳಿ ಮಾಡಿಸಿದ 10 ಜಾಗಗಳಿವು. 

ಮೈಸೂರು: ಕರ್ನಾಟಕದ ಪ್ರವಾಸಿ ತಾಣಗಳ ಪೈಕಿ ಅಗ್ರಸ್ಥಾನ ಪಡೆದಿರುವ ಮೈಸೂರಿಗೆ ಭೇಟಿ ನೀಡಲು ಸೆಪ್ಟೆಂಬರ್‌ ಬೆಸ್ಟ್.‌ ಇನ್ನೇನು ದಸರಾ ಹಬ್ಬಕ್ಕೆ ಸಿದ್ಧತೆ ನಡೆಯುತ್ತಿರುವಾಗ ಮೈಸೂರಿಗೆ ಭೇಟಿ ನೀಡಿದ ಅರಮನೆ, ಚಾಮುಂಡಿ ಬೆಟ್ಟ ಸೇರಿದಂತೆ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಮೈಸೂರಿಗೆ ಟ್ರಿಪ್‌ಗೆ ಹೋದವರು ಕೆಆರ್‌ಎಸ್‌ ಮ್ಯೂಸಿಯಂ ನೋಡಲು ಮರೆಯದಿರಿ.
icon

(2 / 12)

ಮೈಸೂರು: ಕರ್ನಾಟಕದ ಪ್ರವಾಸಿ ತಾಣಗಳ ಪೈಕಿ ಅಗ್ರಸ್ಥಾನ ಪಡೆದಿರುವ ಮೈಸೂರಿಗೆ ಭೇಟಿ ನೀಡಲು ಸೆಪ್ಟೆಂಬರ್‌ ಬೆಸ್ಟ್.‌ ಇನ್ನೇನು ದಸರಾ ಹಬ್ಬಕ್ಕೆ ಸಿದ್ಧತೆ ನಡೆಯುತ್ತಿರುವಾಗ ಮೈಸೂರಿಗೆ ಭೇಟಿ ನೀಡಿದ ಅರಮನೆ, ಚಾಮುಂಡಿ ಬೆಟ್ಟ ಸೇರಿದಂತೆ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಮೈಸೂರಿಗೆ ಟ್ರಿಪ್‌ಗೆ ಹೋದವರು ಕೆಆರ್‌ಎಸ್‌ ಮ್ಯೂಸಿಯಂ ನೋಡಲು ಮರೆಯದಿರಿ.(PC: HT Photo)

ಹಂಪಿ: ವಿಶ್ವವಿಖ್ಯಾತ ಐತಿಹಾಸಿಕ ತಾಣ ಹಂಪಿಗೆ ಭೇಟಿ ನೀಡಲು ಸೆಪ್ಟೆಂಬರ್‌ ತಿಂಗಳು ಬೆಸ್ಟ್‌. ತೀರಾ ಮಳೆಯೂ ಇಲ್ಲದೇ ತೀರಾ ಬಿಸಿಲು ಇಲ್ಲದ ಸಮಯದಲ್ಲಿ ಹಂಪಿನ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳುವುದೇ ಅಂದ. 
icon

(3 / 12)

ಹಂಪಿ: ವಿಶ್ವವಿಖ್ಯಾತ ಐತಿಹಾಸಿಕ ತಾಣ ಹಂಪಿಗೆ ಭೇಟಿ ನೀಡಲು ಸೆಪ್ಟೆಂಬರ್‌ ತಿಂಗಳು ಬೆಸ್ಟ್‌. ತೀರಾ ಮಳೆಯೂ ಇಲ್ಲದೇ ತೀರಾ ಬಿಸಿಲು ಇಲ್ಲದ ಸಮಯದಲ್ಲಿ ಹಂಪಿನ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳುವುದೇ ಅಂದ. (PC: HT Photo)

ಕೂರ್ಗ್‌: ಕರ್ನಾಟಕದ ಸ್ಕಾಟ್ಲೆಂಡ್‌ ಎಂದೇ ಖ್ಯಾತಿ ಪಡೆದಿರುವ ಕೊಡಗು ಅಥವಾ ಕೂರ್ಗ್‌ಗೆ ಟ್ರಿಪ್‌ ಮಾಡಲು ಇದು ಹೇಳಿ ಮಾಡಿಸಿದ ಸಮಯ. ಈ ಸಮಯದಲ್ಲಿ ಜಲಪಾತಗಳು ದುಮ್ಮಿಕ್ಕುತ್ತಿರುತ್ತವೆ, ನದಿಗಳು ತುಂಬಿ ಹರಿಯುತ್ತವೆ. ಹಸಿರ ಕಾನನ ಹಚ್ಚ ಹಸಿರಿನಿಂದ ನಳನಳಿಸುತ್ತಿರುತ್ತದೆ. ಒಟ್ಟಾರೆ ಕೊಡಗಿನ ಸೌಂದರ್ಯ ನಿಮ್ಮನ್ನು ಸೆಳೆಯದೇ ಬಿಡುವುದಿಲ್ಲ. 
icon

(4 / 12)

ಕೂರ್ಗ್‌: ಕರ್ನಾಟಕದ ಸ್ಕಾಟ್ಲೆಂಡ್‌ ಎಂದೇ ಖ್ಯಾತಿ ಪಡೆದಿರುವ ಕೊಡಗು ಅಥವಾ ಕೂರ್ಗ್‌ಗೆ ಟ್ರಿಪ್‌ ಮಾಡಲು ಇದು ಹೇಳಿ ಮಾಡಿಸಿದ ಸಮಯ. ಈ ಸಮಯದಲ್ಲಿ ಜಲಪಾತಗಳು ದುಮ್ಮಿಕ್ಕುತ್ತಿರುತ್ತವೆ, ನದಿಗಳು ತುಂಬಿ ಹರಿಯುತ್ತವೆ. ಹಸಿರ ಕಾನನ ಹಚ್ಚ ಹಸಿರಿನಿಂದ ನಳನಳಿಸುತ್ತಿರುತ್ತದೆ. ಒಟ್ಟಾರೆ ಕೊಡಗಿನ ಸೌಂದರ್ಯ ನಿಮ್ಮನ್ನು ಸೆಳೆಯದೇ ಬಿಡುವುದಿಲ್ಲ. (PC: Pixabay)

ಉಡುಪಿ: ಕೃಷ್ಣನೂರೂ ಉಡುಪಿಗೆ ಭೇಟಿ ನೀಡಲು ಸೆಪ್ಟೆಂಬರ್‌ ತಿಂಗಳು ಬೆಸ್ಟ್.‌ ಬಿಸಿಲಿಗೆ ಹೆದರುವವರು ಈ ಸಮಯದಲ್ಲಿ ಉಡುಪಿ ಪ್ರವಾಸ ಮಾಡಬಹುದು. ಅಕ್ಟೋಬರ್‌ ನಂತರ ಬಿಸಿಲಿನ ಝಳ ಹೆಚ್ಚುವ ಕಾರಣಕ್ಕೆ ಈ ಸಮಯದಲ್ಲೇ ನೀವು ಉಡುಪಿ ಟ್ರಿಪ್‌ ಮಾಡಬಹುದು. 
icon

(5 / 12)

ಉಡುಪಿ: ಕೃಷ್ಣನೂರೂ ಉಡುಪಿಗೆ ಭೇಟಿ ನೀಡಲು ಸೆಪ್ಟೆಂಬರ್‌ ತಿಂಗಳು ಬೆಸ್ಟ್.‌ ಬಿಸಿಲಿಗೆ ಹೆದರುವವರು ಈ ಸಮಯದಲ್ಲಿ ಉಡುಪಿ ಪ್ರವಾಸ ಮಾಡಬಹುದು. ಅಕ್ಟೋಬರ್‌ ನಂತರ ಬಿಸಿಲಿನ ಝಳ ಹೆಚ್ಚುವ ಕಾರಣಕ್ಕೆ ಈ ಸಮಯದಲ್ಲೇ ನೀವು ಉಡುಪಿ ಟ್ರಿಪ್‌ ಮಾಡಬಹುದು. 

ಗೋಕರ್ಣ: ನೀವು ಬೀಚ್‌ ಲವರ್‌ ಆಗಿದ್ರೆ ಖಂಡಿತ ನಿಮಗೆ ಗೋಕರ್ಣ ಬೆಸ್ಟ್‌ ಪ್ಲೇಸ್‌. ಗೋಕರ್ಣದ ಕಡಲತೀರಗಳಲ್ಲಿ ನೀವು ಸಂಜೆ ಕಳೆಯಲು ಸೆಪ್ಟೆಂಬರ್‌ಗಿಂತ ಉತ್ತಮ ಸಮಯವಿಲ್ಲ ಅಂತಲೇ ಹೇಳಬಹುದು. 
icon

(6 / 12)

ಗೋಕರ್ಣ: ನೀವು ಬೀಚ್‌ ಲವರ್‌ ಆಗಿದ್ರೆ ಖಂಡಿತ ನಿಮಗೆ ಗೋಕರ್ಣ ಬೆಸ್ಟ್‌ ಪ್ಲೇಸ್‌. ಗೋಕರ್ಣದ ಕಡಲತೀರಗಳಲ್ಲಿ ನೀವು ಸಂಜೆ ಕಳೆಯಲು ಸೆಪ್ಟೆಂಬರ್‌ಗಿಂತ ಉತ್ತಮ ಸಮಯವಿಲ್ಲ ಅಂತಲೇ ಹೇಳಬಹುದು. (PC: HT Photo)

ಬಾದಾಮಿ: ಕರ್ನಾಟಕದ ಇನ್ನೊಂದು ಪ್ರಮುಖ ಐತಿಹಾಸಿಕ ತಾಣ ಬಾದಾಮಿ. ಇಲ್ಲಿನ ಗುಹೆಗಳು ನಿಮಗೆ ಹೊಸ ಪ್ರಪಂಚ ಪರಿಚಯ ಮಾಡಿಸುವುದು ಸುಳ್ಳಲ್ಲ. ಬಾದಾಮಿಯ ಗುಹೆಗಳು, ಸುತ್ತಲಿನ ಸರೋವರ ಇವೆಲ್ಲಾ ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಸೆಪ್ಟೆಂಬರ್‌ನಲ್ಲಿ ಬಿಸಿಲು ಕಡಿಮೆ ಇರುವ ಕಾರಣ ಬಾದಾಮಿ ಕಡೆಗೆ ನೀವು ಪಯಣ ಬೆಳೆಸಬಹುದು. 
icon

(7 / 12)

ಬಾದಾಮಿ: ಕರ್ನಾಟಕದ ಇನ್ನೊಂದು ಪ್ರಮುಖ ಐತಿಹಾಸಿಕ ತಾಣ ಬಾದಾಮಿ. ಇಲ್ಲಿನ ಗುಹೆಗಳು ನಿಮಗೆ ಹೊಸ ಪ್ರಪಂಚ ಪರಿಚಯ ಮಾಡಿಸುವುದು ಸುಳ್ಳಲ್ಲ. ಬಾದಾಮಿಯ ಗುಹೆಗಳು, ಸುತ್ತಲಿನ ಸರೋವರ ಇವೆಲ್ಲಾ ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಸೆಪ್ಟೆಂಬರ್‌ನಲ್ಲಿ ಬಿಸಿಲು ಕಡಿಮೆ ಇರುವ ಕಾರಣ ಬಾದಾಮಿ ಕಡೆಗೆ ನೀವು ಪಯಣ ಬೆಳೆಸಬಹುದು. (PC: Pixabay)

ಚಿಕ್ಕಮಗಳೂರು: ಕರ್ನಾಟಕ ಪ್ರವಾಸ ಎಂದಾಕ್ಷಣ ಮೊದಲು ನೆನಪಿಗೆ ಬರೋದು ಚಿಕ್ಕಮಗಳೂರು. ಹಸಿರು ಬೆಟ್ಟ ಗುಡ್ಡಗಳು, ಹರಿಯುವ ಜಲಪಾತ ನದಿಗಳು, ಕಾಫಿಯ ಘಮಲು, ತಂಪನೆಯ ವಾತಾವರಣ ಈ ಎಲ್ಲವೂ ಸೆಪ್ಟೆಂಬರ್‌ನಲ್ಲಿ ನಿಮ್ಮನ್ನು ಕೈಬೀಸಿ ಕರೆಯುತ್ತವೆ. 
icon

(8 / 12)

ಚಿಕ್ಕಮಗಳೂರು: ಕರ್ನಾಟಕ ಪ್ರವಾಸ ಎಂದಾಕ್ಷಣ ಮೊದಲು ನೆನಪಿಗೆ ಬರೋದು ಚಿಕ್ಕಮಗಳೂರು. ಹಸಿರು ಬೆಟ್ಟ ಗುಡ್ಡಗಳು, ಹರಿಯುವ ಜಲಪಾತ ನದಿಗಳು, ಕಾಫಿಯ ಘಮಲು, ತಂಪನೆಯ ವಾತಾವರಣ ಈ ಎಲ್ಲವೂ ಸೆಪ್ಟೆಂಬರ್‌ನಲ್ಲಿ ನಿಮ್ಮನ್ನು ಕೈಬೀಸಿ ಕರೆಯುತ್ತವೆ. (PC: HT Photo)

ಜೋಗ್‌ ಜಲಪಾತ: ಇದು ಕೂಡ ವಿಶ್ವವಿಖ್ಯಾತ ತಾಣ. ಈ ವರ್ಷ ಮಳೆ ಪ್ರಮಾಣ ಹೆಚ್ಚಿರುವ ಕಾರಣ ಜೋಗ ಜಲಪಾತ ಮೈದುಂಬಿ ಹರಿಯತ್ತಿದೆ. ಜೀವನದಲ್ಲಿ ಒಮ್ಮೆ ನೋಡು ಜೋಗಾದ್‌ ಗುಂಡಿ ಎಂಬ ಹಾಡಿನಂತೆ ಇನ್ನೂ ಜೋಗ ಜಲಪಾತ ನೋಡಿರದವರು ಈ ಸೆಪ್ಟೆಂಬರ್‌ನಲ್ಲಿ ಜೋಗ ಜಲಪಾತಕ್ಕೆ ಟ್ರಿಪ್‌ ಪ್ಲಾನ್‌ ಮಾಡಬಹುದು. 
icon

(9 / 12)

ಜೋಗ್‌ ಜಲಪಾತ: ಇದು ಕೂಡ ವಿಶ್ವವಿಖ್ಯಾತ ತಾಣ. ಈ ವರ್ಷ ಮಳೆ ಪ್ರಮಾಣ ಹೆಚ್ಚಿರುವ ಕಾರಣ ಜೋಗ ಜಲಪಾತ ಮೈದುಂಬಿ ಹರಿಯತ್ತಿದೆ. ಜೀವನದಲ್ಲಿ ಒಮ್ಮೆ ನೋಡು ಜೋಗಾದ್‌ ಗುಂಡಿ ಎಂಬ ಹಾಡಿನಂತೆ ಇನ್ನೂ ಜೋಗ ಜಲಪಾತ ನೋಡಿರದವರು ಈ ಸೆಪ್ಟೆಂಬರ್‌ನಲ್ಲಿ ಜೋಗ ಜಲಪಾತಕ್ಕೆ ಟ್ರಿಪ್‌ ಪ್ಲಾನ್‌ ಮಾಡಬಹುದು. (PC: HT Photo)

ಬೇಲೂರು ಹಳೆಬೀಡು: ಸುಂದರ ಗುಡಿಗೋಪುರಗಳು ಶಿಲ್ಪಕಲಾಕೃತಿ ಸೊಬಗನ್ನು ನೋಡಲು ಬಯಸಿದರೆ ನೀವು ಬೇಲೂರು ಹಳೆಬೀಡಿಗೆ ಟ್ರಿಪ್‌ ಪ್ಲಾನ್‌ ಮಾಡಬಹುದು. ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಇಲ್ಲಿಗೆ ಎರಡು ಮೂರು ದಿನದ ಟ್ರಿಪ್‌ ಪ್ಲಾನ್‌ ಮಾಡಿದ್ರೆ ಎಲ್ಲವನ್ನೂ ನೋಡಿ ಬರಬಹುದು. 
icon

(10 / 12)

ಬೇಲೂರು ಹಳೆಬೀಡು: ಸುಂದರ ಗುಡಿಗೋಪುರಗಳು ಶಿಲ್ಪಕಲಾಕೃತಿ ಸೊಬಗನ್ನು ನೋಡಲು ಬಯಸಿದರೆ ನೀವು ಬೇಲೂರು ಹಳೆಬೀಡಿಗೆ ಟ್ರಿಪ್‌ ಪ್ಲಾನ್‌ ಮಾಡಬಹುದು. ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಇಲ್ಲಿಗೆ ಎರಡು ಮೂರು ದಿನದ ಟ್ರಿಪ್‌ ಪ್ಲಾನ್‌ ಮಾಡಿದ್ರೆ ಎಲ್ಲವನ್ನೂ ನೋಡಿ ಬರಬಹುದು. (PC: Beyonder travel)

ಕವಲೆದುರ್ಗ: ನೀವು ಪರಿಸರ ಪ್ರೇಮಿಯಾಗಿದ್ದರೆ ಕವಲೆದುರ್ಗ ನಿಮಗೆ ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಹಸಿರು ಹೊದ್ದದಂತಿರುವ ಭೂದೇವಿಯ ಅಂಗಳದಲ್ಲಿ ಮಂಜು ಮುಸುಕಿದ ವಾತಾವರಣವನ್ನು ನೋಡಲು ನೀವು ಪುಣ್ಯ ಮಾಡಿರಬೇಕು.
icon

(11 / 12)

ಕವಲೆದುರ್ಗ: ನೀವು ಪರಿಸರ ಪ್ರೇಮಿಯಾಗಿದ್ದರೆ ಕವಲೆದುರ್ಗ ನಿಮಗೆ ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಹಸಿರು ಹೊದ್ದದಂತಿರುವ ಭೂದೇವಿಯ ಅಂಗಳದಲ್ಲಿ ಮಂಜು ಮುಸುಕಿದ ವಾತಾವರಣವನ್ನು ನೋಡಲು ನೀವು ಪುಣ್ಯ ಮಾಡಿರಬೇಕು.(PC: HT Photo)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು