Temples in Bengaluru: ಬೆಂಗಳೂರು ವಾಸಿಗಳಾದರೂ ಸರಿ, ಟೂರ್‌ಗೆಂದು ಬಂದವರಾದರೂ ಸರಿ ಈ 10 ಪ್ರಸಿದ್ಧ ದೇಗುಲಗಳನ್ನು ಮಿಸ್ ಮಾಡದೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Temples In Bengaluru: ಬೆಂಗಳೂರು ವಾಸಿಗಳಾದರೂ ಸರಿ, ಟೂರ್‌ಗೆಂದು ಬಂದವರಾದರೂ ಸರಿ ಈ 10 ಪ್ರಸಿದ್ಧ ದೇಗುಲಗಳನ್ನು ಮಿಸ್ ಮಾಡದೆ ನೋಡಿ

Temples in Bengaluru: ಬೆಂಗಳೂರು ವಾಸಿಗಳಾದರೂ ಸರಿ, ಟೂರ್‌ಗೆಂದು ಬಂದವರಾದರೂ ಸರಿ ಈ 10 ಪ್ರಸಿದ್ಧ ದೇಗುಲಗಳನ್ನು ಮಿಸ್ ಮಾಡದೆ ನೋಡಿ

  • ಬೆಂಗಳೂರು ಐಟಿ ಬಿಟಿ ಸಿಟಿಯಾಗಿಯೇ ಹಲವರಿಗೆ ಪರಿಚಯ. ಆದರೆ ಬೆಂಗಳೂರನ್ನು ದೇವಾಲಯಗಳ ತವರು ಎನ್ನಬಹುದು. ಇಲ್ಲಿ ನಾವು ಕಂಡು ಕೇಳರಿಯದ ವಿವಿಧ ಶತಮಾನ ಹಲವು ದೇವಾಲಯಗಳಿವೆ. ನೀವು ಬೆಂಗಳೂರಲ್ಲೇ ಇದ್ದವರಾಗಿಬಹುದು ಅಥವಾ ಬೆಂಗಳೂರು ನೋಡಲು ಬಂದಿರಬಹುದು, ಆದರೆ ಈ 10 ದೇವಾಲಯಗಳನ್ನು ಮಾತ್ರ ಮಿಸ್‌ ಮಾಡದೇ ನೋಡಿ.

ಸಿಲಿಕಾನ್‌ ಸಿಟಿ, ಐಟಿ ಸಿಟಿ, ಮೆಟ್ರೊ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಹಲವು ವೈಶಿಷ್ಟ್ಯಗಳಿವೆ. ಬೆಂಗಳೂರು ಆಧುನಿಕತೆಗೆ ಹೇಗೆ ತೆರೆದುಕೊಂಡಿದೆಯೋ ಹಾಗೆಯೇ ಧಾರ್ಮಿಕವಾಗಿಯೂ ಅಷ್ಟೇ ಶ್ರೀಮಂತವಾಗಿದೆ. ಬೆಂಗಳೂರಿನಲ್ಲಿ ಕೇವಲ ಐಟಿ ಕಂಪನಿಗಳಷ್ಟೇ ಇರುವುದಲ್ಲ. ಕೆಂಪೆಗೌಡರು ಕಟ್ಟಿಸಿದ ಈ ನಾಡಿನಲ್ಲಿ ಹಲವು ಶತ ಶತಮಾನಗಳ ದೇಗುಲಗಳಿವೆ. ಬೆಂಗಳೂರಿನಲ್ಲಿರುವ ಕೆಲವು ದೇವಾಲಯಗಳ ಬಗ್ಗೆ ಇಲ್ಲಿನ ನಿವಾಸಿಗಳಿಗೆ ತಿಳಿದಿಲ್ಲ. ನೀವು ಬೆಂಗಳೂರಿನಲ್ಲೇ ವಾಸಿಸುತ್ತಿದ್ದು ಅಥವಾ ಬೆಂಗಳೂರು ನೋಡಲು ಬಂದವರಾಗಿದ್ದರೂ ಸರಿ ಇಲ್ಲಿನ ಈ 10 ದೇವಾಲಯಗಳನ್ನು ಮಿಸ್‌ ಮಾಡದೇ ನೋಡಿ.
icon

(1 / 11)

ಸಿಲಿಕಾನ್‌ ಸಿಟಿ, ಐಟಿ ಸಿಟಿ, ಮೆಟ್ರೊ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಹಲವು ವೈಶಿಷ್ಟ್ಯಗಳಿವೆ. ಬೆಂಗಳೂರು ಆಧುನಿಕತೆಗೆ ಹೇಗೆ ತೆರೆದುಕೊಂಡಿದೆಯೋ ಹಾಗೆಯೇ ಧಾರ್ಮಿಕವಾಗಿಯೂ ಅಷ್ಟೇ ಶ್ರೀಮಂತವಾಗಿದೆ. ಬೆಂಗಳೂರಿನಲ್ಲಿ ಕೇವಲ ಐಟಿ ಕಂಪನಿಗಳಷ್ಟೇ ಇರುವುದಲ್ಲ. ಕೆಂಪೆಗೌಡರು ಕಟ್ಟಿಸಿದ ಈ ನಾಡಿನಲ್ಲಿ ಹಲವು ಶತ ಶತಮಾನಗಳ ದೇಗುಲಗಳಿವೆ. ಬೆಂಗಳೂರಿನಲ್ಲಿರುವ ಕೆಲವು ದೇವಾಲಯಗಳ ಬಗ್ಗೆ ಇಲ್ಲಿನ ನಿವಾಸಿಗಳಿಗೆ ತಿಳಿದಿಲ್ಲ. ನೀವು ಬೆಂಗಳೂರಿನಲ್ಲೇ ವಾಸಿಸುತ್ತಿದ್ದು ಅಥವಾ ಬೆಂಗಳೂರು ನೋಡಲು ಬಂದವರಾಗಿದ್ದರೂ ಸರಿ ಇಲ್ಲಿನ ಈ 10 ದೇವಾಲಯಗಳನ್ನು ಮಿಸ್‌ ಮಾಡದೇ ನೋಡಿ.

ಚೊಕ್ಕನಾಥ ಸ್ವಾಮಿ ದೇವಾಲಯಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಚೊಕ್ಕನಾಥ ಸ್ವಾಮಿ ದೇವಾಲಯವೂ ಒಂದು. ಇದು ಸಾಕಷ್ಟು ಪ್ರಸಿದ್ಧಿ ಪಡೆದ ದೇವಸ್ಥಾನ. 10ಶೇ ಶತಮಾನದಲ್ಲಿ ಚೋಳರು ಈ ದೇಗುಲವನ್ನು ಕಟ್ಟಿಸಿದ್ದಾರೆ. ವಿಷ್ಣುವಿನ ಈ ದೇಗುಲವನ್ನು ಚೋಳ ಶೈಲಿಯಲ್ಲಿ ಕಟ್ಟಿಸಲಾಗಿದೆ. ಇಲ್ಲಿನ ಕಂಬಗಳಲ್ಲಿ ತಮಿಳು ಶಾಸನಗಳನ್ನು ಕೆತ್ತಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯ ದೊಮ್ಮಲೂರಿನಲ್ಲಿದೆ.
icon

(2 / 11)

ಚೊಕ್ಕನಾಥ ಸ್ವಾಮಿ ದೇವಾಲಯಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಚೊಕ್ಕನಾಥ ಸ್ವಾಮಿ ದೇವಾಲಯವೂ ಒಂದು. ಇದು ಸಾಕಷ್ಟು ಪ್ರಸಿದ್ಧಿ ಪಡೆದ ದೇವಸ್ಥಾನ. 10ಶೇ ಶತಮಾನದಲ್ಲಿ ಚೋಳರು ಈ ದೇಗುಲವನ್ನು ಕಟ್ಟಿಸಿದ್ದಾರೆ. ವಿಷ್ಣುವಿನ ಈ ದೇಗುಲವನ್ನು ಚೋಳ ಶೈಲಿಯಲ್ಲಿ ಕಟ್ಟಿಸಲಾಗಿದೆ. ಇಲ್ಲಿನ ಕಂಬಗಳಲ್ಲಿ ತಮಿಳು ಶಾಸನಗಳನ್ನು ಕೆತ್ತಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯ ದೊಮ್ಮಲೂರಿನಲ್ಲಿದೆ.(Mappls)

ದೊಡ್ಡ ಬಸವನ ಗುಡಿ (ಬುಲ್‌ ಟೆಂಪಲ್‌)ಕಡಲೆಕಾಯಿ ಪರಿಷೆ ಬಗ್ಗೆ ಕೇಳಿದವರು ದೊಡ್ಡ ಬಸವನ ಗುಡಿ ಬಗ್ಗೆ ಕೇಳಿರುತ್ತಾರೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ದೊಡ್ಡ ಬಸವನ ಗುಡಿಯನ್ನು 1537ರಲ್ಲಿ ವಿಜಯನಗರ ಸಾಮ್ರಾಜ್ಯದವರು ಕಟ್ಟಿಸಿದರು ಎನ್ನಲಾಗುತ್ತದೆ. ಇಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ನಂದಿ ವಿಗ್ರಹವಿದೆ. ಈ ವಿಗ್ರಹದ ಗಾತ್ರ ಸುಮಾರು 15 ಅಡಿ ಎತ್ತರ. ಇದು ಏಕಾಶಿಲಾ ನಂದಿ ವಿಗ್ರಹವಾಗಿದೆ.
icon

(3 / 11)

ದೊಡ್ಡ ಬಸವನ ಗುಡಿ (ಬುಲ್‌ ಟೆಂಪಲ್‌)ಕಡಲೆಕಾಯಿ ಪರಿಷೆ ಬಗ್ಗೆ ಕೇಳಿದವರು ದೊಡ್ಡ ಬಸವನ ಗುಡಿ ಬಗ್ಗೆ ಕೇಳಿರುತ್ತಾರೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ದೊಡ್ಡ ಬಸವನ ಗುಡಿಯನ್ನು 1537ರಲ್ಲಿ ವಿಜಯನಗರ ಸಾಮ್ರಾಜ್ಯದವರು ಕಟ್ಟಿಸಿದರು ಎನ್ನಲಾಗುತ್ತದೆ. ಇಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ನಂದಿ ವಿಗ್ರಹವಿದೆ. ಈ ವಿಗ್ರಹದ ಗಾತ್ರ ಸುಮಾರು 15 ಅಡಿ ಎತ್ತರ. ಇದು ಏಕಾಶಿಲಾ ನಂದಿ ವಿಗ್ರಹವಾಗಿದೆ.(WordPress.com)

ದೊಡ್ಡ ಗಣೇಶ ಟೆಂಪಲ್‌ದೊಡ್ಡ ಗಣೇಶ ದೇವಸ್ಥಾನ ಇರುವುದು ಬುಲ್‌ ಟೆಂಪಲ್‌ ಅಂದರೆ ದೊಡ್ಡ ಬಸವನ ಗುಡಿ ಆವರಣದಲ್ಲಿಯೇ. ಇಲ್ಲಿನ ಗಣಪತಿಯನ್ನು ಶಕ್ತಿ ಗಣಪತಿ, ಸತ್ಯ ಗಣಪತಿ ಎಂದೆಲ್ಲಾ ಕರೆಯುತ್ತಾರೆ. ಈ ದೇವಾಲಯದಲ್ಲೂ ಅತಿ ಎತ್ತರದ ಏಕಶಿಲಾ ಗಣಪನ ಮೂರ್ತಿ ಇದೆ. ಇದರ ಎತ್ತರ 18 ಅಡಿ ಮತ್ತು ಅಗಲ 16 ಅಡಿ. ಗಣೇಶ ಚತುರ್ಥಿ ಸಮಯದಲ್ಲಿ ಈ ದೇಗುಲ ಭೇಟಿ ನೀಡಿದರೆ ನೀವು ಗಣೇಶನನ್ನು ಬೆಣ್ಣೆ ಅಲಂಕಾರದಲ್ಲಿ ಕಣ್ತುಂಬಿಕೊಳ್ಳಬಹುದು. ಈ ಸಮಯದಲ್ಲಿ ಗಣೇಶನಿಗೆ ಬೆಣ್ಣೆ ಅಲಂಕಾರಕ್ಕಾಗಿ 100 ಕೆಜೆ ಬೆಣ್ಣೆ ಬಳಸುತ್ತಾರೆ.
icon

(4 / 11)

ದೊಡ್ಡ ಗಣೇಶ ಟೆಂಪಲ್‌ದೊಡ್ಡ ಗಣೇಶ ದೇವಸ್ಥಾನ ಇರುವುದು ಬುಲ್‌ ಟೆಂಪಲ್‌ ಅಂದರೆ ದೊಡ್ಡ ಬಸವನ ಗುಡಿ ಆವರಣದಲ್ಲಿಯೇ. ಇಲ್ಲಿನ ಗಣಪತಿಯನ್ನು ಶಕ್ತಿ ಗಣಪತಿ, ಸತ್ಯ ಗಣಪತಿ ಎಂದೆಲ್ಲಾ ಕರೆಯುತ್ತಾರೆ. ಈ ದೇವಾಲಯದಲ್ಲೂ ಅತಿ ಎತ್ತರದ ಏಕಶಿಲಾ ಗಣಪನ ಮೂರ್ತಿ ಇದೆ. ಇದರ ಎತ್ತರ 18 ಅಡಿ ಮತ್ತು ಅಗಲ 16 ಅಡಿ. ಗಣೇಶ ಚತುರ್ಥಿ ಸಮಯದಲ್ಲಿ ಈ ದೇಗುಲ ಭೇಟಿ ನೀಡಿದರೆ ನೀವು ಗಣೇಶನನ್ನು ಬೆಣ್ಣೆ ಅಲಂಕಾರದಲ್ಲಿ ಕಣ್ತುಂಬಿಕೊಳ್ಳಬಹುದು. ಈ ಸಮಯದಲ್ಲಿ ಗಣೇಶನಿಗೆ ಬೆಣ್ಣೆ ಅಲಂಕಾರಕ್ಕಾಗಿ 100 ಕೆಜೆ ಬೆಣ್ಣೆ ಬಳಸುತ್ತಾರೆ.(trawellin)

ಗವಿ ಗಂಗಾಧರೇಶ್ವರ ದೇವಾಲಯ9ನೇ ಶತಮಾನದಲ್ಲಿ ಕಟ್ಟಿಸಲಾದ ಈ ದೇವಾಯಲವು ಗುಹೆಯೊಳಗಿದೆ. ಬಂಡೆ ಕಲ್ಲುಗಳನ್ನು ಕೊರೆದು ಇಲ್ಲಿ ದೇವಾಯಲ ನಿರ್ಮಿಸಲಾಗಿದೆ. ಈ ದೇವಾಲಯವನ್ನೂ ಏಕಶಿಲೆಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಅಪರೂಪದ ಶನಿದೇವನ ವಿಗ್ರಹವಿದೆ. ಇಲ್ಲಿರುವ ಶನಿದೇವನಿಗೆ ಎರಡು ತಲೆ ಹಾಗೂ ಮೂರು ಕಾಲುಗಳಿರುವುದನ್ನು ಗಮನಿಸಬಹುದು.
icon

(5 / 11)

ಗವಿ ಗಂಗಾಧರೇಶ್ವರ ದೇವಾಲಯ9ನೇ ಶತಮಾನದಲ್ಲಿ ಕಟ್ಟಿಸಲಾದ ಈ ದೇವಾಯಲವು ಗುಹೆಯೊಳಗಿದೆ. ಬಂಡೆ ಕಲ್ಲುಗಳನ್ನು ಕೊರೆದು ಇಲ್ಲಿ ದೇವಾಯಲ ನಿರ್ಮಿಸಲಾಗಿದೆ. ಈ ದೇವಾಲಯವನ್ನೂ ಏಕಶಿಲೆಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಅಪರೂಪದ ಶನಿದೇವನ ವಿಗ್ರಹವಿದೆ. ಇಲ್ಲಿರುವ ಶನಿದೇವನಿಗೆ ಎರಡು ತಲೆ ಹಾಗೂ ಮೂರು ಕಾಲುಗಳಿರುವುದನ್ನು ಗಮನಿಸಬಹುದು.(Mint )

ಇಸ್ಕಾನ್‌ ಇಸ್ಕಾನ್‌ ದೇವಾಲಯ ಬೆಂಗಳೂರಿನ ಗುರುತುಗಳಲ್ಲಿ ಒಂದು ಎನ್ನಬಹುದು. ಸಾಮಾನ್ಯವಾಗಿ ಬೆಂಗಳೂರಿನ ಮಂದಿ ಅಥವಾ ಬೆಂಗಳೂರಿಗೆ ಪ್ರವಾಸಕ್ಕೆಂದು ಬಂದವರು ಈ ದೇವಾಲಯವನ್ನು ನೋಡಿಯೇ ಇರುತ್ತಾರೆ. 1997ರಲ್ಲಿ ಈ ದೇವಾಲಯವನ್ನು ಕಟ್ಟಿಸಲಾಗಿದೆ. ಪ್ರಪಂಚದಲ್ಲೇ ವೈಷ್ಣವರ ಅತಿ ದೊಡ್ಡ ದೇಗುಲವಿದು ಎಂದು ಹೇಳಲಾಗುತ್ತದೆ. ಇದು ಬೆಂಗಳೂರಿನ ರಾಜಾಜಿನಗರದಲ್ಲಿದೆ. ಮಹಾಲಕ್ಷ್ಮೀ ಲೇಔಟ್‌ ಮೆಟ್ರೊ ನಿಲ್ದಾಣದಿಂದ ಈ ದೇಗುಲ ಸಮೀಪದಲ್ಲಿದೆ.
icon

(6 / 11)

ಇಸ್ಕಾನ್‌ ಇಸ್ಕಾನ್‌ ದೇವಾಲಯ ಬೆಂಗಳೂರಿನ ಗುರುತುಗಳಲ್ಲಿ ಒಂದು ಎನ್ನಬಹುದು. ಸಾಮಾನ್ಯವಾಗಿ ಬೆಂಗಳೂರಿನ ಮಂದಿ ಅಥವಾ ಬೆಂಗಳೂರಿಗೆ ಪ್ರವಾಸಕ್ಕೆಂದು ಬಂದವರು ಈ ದೇವಾಲಯವನ್ನು ನೋಡಿಯೇ ಇರುತ್ತಾರೆ. 1997ರಲ್ಲಿ ಈ ದೇವಾಲಯವನ್ನು ಕಟ್ಟಿಸಲಾಗಿದೆ. ಪ್ರಪಂಚದಲ್ಲೇ ವೈಷ್ಣವರ ಅತಿ ದೊಡ್ಡ ದೇಗುಲವಿದು ಎಂದು ಹೇಳಲಾಗುತ್ತದೆ. ಇದು ಬೆಂಗಳೂರಿನ ರಾಜಾಜಿನಗರದಲ್ಲಿದೆ. ಮಹಾಲಕ್ಷ್ಮೀ ಲೇಔಟ್‌ ಮೆಟ್ರೊ ನಿಲ್ದಾಣದಿಂದ ಈ ದೇಗುಲ ಸಮೀಪದಲ್ಲಿದೆ.(Holiday Zone)

ಕೋಟೆ ವೆಂಕಟರಮಣ ದೇಗುಲಬಸವನಗುಡಿಯ ಕೆಆರ್‌ ರಸ್ತೆಯಲ್ಲಿದೆ ವೆಂಕಟೇಶ್ವರ ದೇವಾಲಯ. 1689ರಲ್ಲಿ ಈ ದೇವಾಲಯವನ್ನು ಕಟ್ಟಿಸಲಾಯಿತು. ಇದು ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ ದೇವಾಲಯ. ಈ ದೇವಾಲಯವನ್ನು ದ್ರಾವಿಡ ಹಾಗೂ ವಿಜಯನಗರ ವಾಸ್ತುಶೈಲಿಯಲ್ಲಿ ಕಟ್ಟಿಸಲಾಗಿದೆ.
icon

(7 / 11)

ಕೋಟೆ ವೆಂಕಟರಮಣ ದೇಗುಲಬಸವನಗುಡಿಯ ಕೆಆರ್‌ ರಸ್ತೆಯಲ್ಲಿದೆ ವೆಂಕಟೇಶ್ವರ ದೇವಾಲಯ. 1689ರಲ್ಲಿ ಈ ದೇವಾಲಯವನ್ನು ಕಟ್ಟಿಸಲಾಯಿತು. ಇದು ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ ದೇವಾಲಯ. ಈ ದೇವಾಲಯವನ್ನು ದ್ರಾವಿಡ ಹಾಗೂ ವಿಜಯನಗರ ವಾಸ್ತುಶೈಲಿಯಲ್ಲಿ ಕಟ್ಟಿಸಲಾಗಿದೆ.(Wikipedia)

ಶೃಂಗಗಿರಿ ಈ ಷಣ್ಮುಖ ದೇವಸ್ಥಾನಶ್ರೀ ಷಣ್ಮುಖ ಸ್ವಾಮಿಯು ನೆಲೆಯಾದ ಸ್ಥಳದಲ್ಲಿ ಶೃಂಗಗಿರಿ ಷಣ್ಮುಖ ಸ್ವಾಮಿ ದೇಗುಲವಿದೆ. ಈ ದೇವಾಲಯವನ್ನು ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ 6 ಮುಖಗಳುಳ್ಳ ಷಣ್ಮುಖ ಸ್ವಾಮಿ ಮೂರ್ತಿ ಇದೆ. ಇಲ್ಲಿ ಆರು ಮುಖಗಳ ಸ್ಫಟಿಕ ಗುಮ್ಮಟವಿದೆ.
icon

(8 / 11)

ಶೃಂಗಗಿರಿ ಈ ಷಣ್ಮುಖ ದೇವಸ್ಥಾನಶ್ರೀ ಷಣ್ಮುಖ ಸ್ವಾಮಿಯು ನೆಲೆಯಾದ ಸ್ಥಳದಲ್ಲಿ ಶೃಂಗಗಿರಿ ಷಣ್ಮುಖ ಸ್ವಾಮಿ ದೇಗುಲವಿದೆ. ಈ ದೇವಾಲಯವನ್ನು ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ 6 ಮುಖಗಳುಳ್ಳ ಷಣ್ಮುಖ ಸ್ವಾಮಿ ಮೂರ್ತಿ ಇದೆ. ಇಲ್ಲಿ ಆರು ಮುಖಗಳ ಸ್ಫಟಿಕ ಗುಮ್ಮಟವಿದೆ.(Nativeplanet)

ಬನಶಂಕರಿ ದೇವಾಲಯಬನಶಂಕರಿ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಬನಶಂಕರಿ ಅಮ್ಮ ಇಲ್ಲಿ ನೆಲೆಯಾಗಿರುವ ದೇವರು. 1915ರಲ್ಲಿ ಬನಶಂಕರಿ ದೇವಾಲಯವನ್ನು ಕಟ್ಟಿಸಲಾಯಿತು. ರಾಹುಕಾಲದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ಇಲ್ಲಿ ಶುಕ್ರವಾರ ಹಾಗೂ ಭಾನುವಾರ ಜನಸಾಗರವೇ ತುಂಬಿರುವುದನ್ನು ಗಮನಿಸಬಹುದು. ದಸರಾ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪುಷ್ಯ ಮಾಸದಲ್ಲಿ ಬನಶಂಕರಿ ದೇವರ ಉತ್ಸವ ನಡೆಯುತ್ತದೆ.
icon

(9 / 11)

ಬನಶಂಕರಿ ದೇವಾಲಯಬನಶಂಕರಿ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಬನಶಂಕರಿ ಅಮ್ಮ ಇಲ್ಲಿ ನೆಲೆಯಾಗಿರುವ ದೇವರು. 1915ರಲ್ಲಿ ಬನಶಂಕರಿ ದೇವಾಲಯವನ್ನು ಕಟ್ಟಿಸಲಾಯಿತು. ರಾಹುಕಾಲದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ಇಲ್ಲಿ ಶುಕ್ರವಾರ ಹಾಗೂ ಭಾನುವಾರ ಜನಸಾಗರವೇ ತುಂಬಿರುವುದನ್ನು ಗಮನಿಸಬಹುದು. ದಸರಾ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪುಷ್ಯ ಮಾಸದಲ್ಲಿ ಬನಶಂಕರಿ ದೇವರ ಉತ್ಸವ ನಡೆಯುತ್ತದೆ.

ಹಲಸೂರು ಸೋಮನಾಥ ದೇವಾಲಯಹಲಸೂರು ಸೋಮನಾಥ ದೇವಾಲಯವೂ ಅತ್ಯಂತ ಹಳೆಯ ದೇಗುಲಗಳಲ್ಲಿ ಒಂದು. ಇದನ್ನು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು ಎನ್ನಲಾಗುತ್ತದೆ. ಇಲ್ಲಿ ಹಲವು ಹಿಂದೂ ದೇವರುಗಳು ಗುಡಿ ಇದೆ. ಇಲ್ಲಿ ನವಗ್ರಹ ದೇವಸ್ಥಾನವಿದೆ. 48 ಕಲ್ಲಿನ ಕಂಬಗಳಿಂದ ಈ ದೇವಾಲಯವನ್ನು ಕಟ್ಟಿಸಲಾಗಿದೆ ಎನ್ನಲಾಗುತ್ತದೆ. ಶ್ರೀ ಸೋಮೇಶ್ವರ ಸ್ವಾಮಿ ಇಲ್ಲಿ ನೆಲೆಯಾಗಿರುವ ದೇವರು.
icon

(10 / 11)

ಹಲಸೂರು ಸೋಮನಾಥ ದೇವಾಲಯಹಲಸೂರು ಸೋಮನಾಥ ದೇವಾಲಯವೂ ಅತ್ಯಂತ ಹಳೆಯ ದೇಗುಲಗಳಲ್ಲಿ ಒಂದು. ಇದನ್ನು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು ಎನ್ನಲಾಗುತ್ತದೆ. ಇಲ್ಲಿ ಹಲವು ಹಿಂದೂ ದೇವರುಗಳು ಗುಡಿ ಇದೆ. ಇಲ್ಲಿ ನವಗ್ರಹ ದೇವಸ್ಥಾನವಿದೆ. 48 ಕಲ್ಲಿನ ಕಂಬಗಳಿಂದ ಈ ದೇವಾಲಯವನ್ನು ಕಟ್ಟಿಸಲಾಗಿದೆ ಎನ್ನಲಾಗುತ್ತದೆ. ಶ್ರೀ ಸೋಮೇಶ್ವರ ಸ್ವಾಮಿ ಇಲ್ಲಿ ನೆಲೆಯಾಗಿರುವ ದೇವರು.(Lights up Temples)

ಶಿವೋಹಂ ಶಿವ ದೇವಾಸ್ಥಾನಬೆಂಗಳೂರಿನ ಹಳೆ ಮದ್ರಾಸ್‌ ರಸ್ತೆಯಲ್ಲಿನ ಈ ದೇವಾಲಯವು ಸಾಕಷ್ಟು ಪ್ರಸಿದ್ಧ ಪಡೆದಿದೆ. 1995ರಲ್ಲಿ ಈ ದೇಗುಲವನ್ನು ಕಟ್ಟಿಸಲಾಯಿತು. ಇಲ್ಲಿ 65 ಅಡಿ ಎತ್ತರದ ಶಿವನ ಮೂರ್ತಿ ಇದೆ.
icon

(11 / 11)

ಶಿವೋಹಂ ಶಿವ ದೇವಾಸ್ಥಾನಬೆಂಗಳೂರಿನ ಹಳೆ ಮದ್ರಾಸ್‌ ರಸ್ತೆಯಲ್ಲಿನ ಈ ದೇವಾಲಯವು ಸಾಕಷ್ಟು ಪ್ರಸಿದ್ಧ ಪಡೆದಿದೆ. 1995ರಲ್ಲಿ ಈ ದೇಗುಲವನ್ನು ಕಟ್ಟಿಸಲಾಯಿತು. ಇಲ್ಲಿ 65 ಅಡಿ ಎತ್ತರದ ಶಿವನ ಮೂರ್ತಿ ಇದೆ.(ExploreBees)


ಇತರ ಗ್ಯಾಲರಿಗಳು