ಕೇದಾರೇಶ್ವರ ದೇವಾಲಯ, ಶೆಟ್ಟಿಹಳ್ಳಿ ಚರ್ಚ್‌ ಸೇರಿ ಹಾಸನದಲ್ಲಿ ತಪ್ಪದೇ ನೋಡಬೇಕಾದ 10 ಪ್ರಸಿದ್ಧ ತಾಣಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇದಾರೇಶ್ವರ ದೇವಾಲಯ, ಶೆಟ್ಟಿಹಳ್ಳಿ ಚರ್ಚ್‌ ಸೇರಿ ಹಾಸನದಲ್ಲಿ ತಪ್ಪದೇ ನೋಡಬೇಕಾದ 10 ಪ್ರಸಿದ್ಧ ತಾಣಗಳಿವು

ಕೇದಾರೇಶ್ವರ ದೇವಾಲಯ, ಶೆಟ್ಟಿಹಳ್ಳಿ ಚರ್ಚ್‌ ಸೇರಿ ಹಾಸನದಲ್ಲಿ ತಪ್ಪದೇ ನೋಡಬೇಕಾದ 10 ಪ್ರಸಿದ್ಧ ತಾಣಗಳಿವು

  • ಕರ್ನಾಟಕದ ಹಾಸನ ಜಿಲ್ಲೆ ಹಲವು ಕಾರಣಗಳಿಂದ ಪ್ರಸಿದ್ಧಿ ಪಡೆದಿದೆ. ಈ ಜಿಲ್ಲೆಯು ಸಾಕಷ್ಟು ಪ್ರವಾಸಿ ತಾಣಗಳನ್ನು ಹೊಂದಿದ್ದು, ಪ್ರವಾಸಿಗರನ್ನು ಸೆಳೆಯುತ್ತದೆ. ಕರ್ನಾಟಕದ ಅತಿ ಸುಂದರ ಜಿಲ್ಲೆಗಳಲ್ಲಿ ಹಾಸನವೂ ಒಂದು. ಹಾಸನಾಂಬ ದೇವಿಯ ಕಾರಣದಿಂದ ಜಗತ್ಪ್ರಸಿದ್ಧಿಯಾದ ಹಾಸನದಲ್ಲಿ ನೀವು ತಪ್ಪದೇ ನೋಡಬೇಕಾದ ಕೆಲವು ಪ್ರವಾಸಿತಾಣಗಳಿವು.

ಹಾಸನ ಜಿಲ್ಲೆಯು ಸಾಕಷ್ಟು ಪ್ರವಾಸಿ ತಾಣಗಳನ್ನು ತನ್ನ ಮಡಿಲಿನೊಳಗೆ ಇರಿಸಿಕೊಂಡಿದೆ. ಇಲ್ಲಿನ ಬೆಟ್ಟ-ಗುಡ್ಡಗಳು, ಜಲಪಾತಗಳು, ದೇವಾಲಯಗಳು ಜನರನ್ನು ಕೈಬೀಸಿ ಕರೆಯುತ್ತವೆ. ಶಿವರಾತ್ರಿ ಹಬ್ಬ ಸಮೀಪದಲ್ಲಿದ್ದು ನೀವು ಹಾಸನದ ಕಡೆ ಪ್ರವಾಸ ಹೊರಟಿದ್ದರೆ ಈ ಜಾಗಗಳನ್ನು ಮಿಸ್‌ ಮಾಡ್ಡೆ ನೋಡಿ ಬನ್ನಿ. ಕರ್ನಾಟಕದ ಹಲವು ಭಾಗಗಳಿಂದ ಇಲ್ಲಿಗೆ ರೈಲು ಹಾಗೂ ಬಸ್ಸಿನ ಸೌಕರ್ಯಗಳಿವೆ. ಬೆಂಗಳೂರಿನಿಂದ ಹಾಸನಕ್ಕೆ 182 ಕಿಲೊಮೀಟರ್‌ ದೂರವಿದೆ. ಶೆಟ್ಟಿಹಳ್ಳಿ ಚರ್ಚ್‌, ಹಾಸನಾಂಬ ದೇವಾಲಯ, ಗೋರೂರು ಡ್ಯಾಮ್‌, ಅರಸೀಕೆರೆ ಈಶ್ವರ ದೇವಾಲಯ, ಕೇದಾರೇಶ್ವರ ದೇವಾಲಯ, ಬೂಸೇಶ್ವರ ದೇವಾಲಯ ಸೇರಿದಂತೆ ಈ ಜಿಲ್ಲೆಯಲ್ಲಿ ನೋಡಲೇಬೇಕಾದದ 10 ಪ್ರಸಿದ್ಧ ಪ್ರವಾಸಿತಾಣಗಳ ಪರಿಚಯ ಇಲ್ಲಿದೆ. 
icon

(1 / 12)

ಈಶ್ವರ ದೇವಾಲಯ: ಹಾಸನ ಜಿಲ್ಲೆಯ ಅರಿಸೀಕೆರೆ ತಾಲ್ಲೂಕಿನಲ್ಲಿದೆ ಪ್ರಸಿದ್ಧ ಈಶ್ವರ ದೇವಾಲಯ. ಹೊಯ್ಸಳರ ಕಾಲದ ಈ ದೇವಾಲಯವು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಭಿನ್ನ ವಾಸ್ತು ಶ್ರೀಮಂತಿಕೆಯ ಈ ದೇಗುಲಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವು ಹಾಸನದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. 
icon

(2 / 12)

ಈಶ್ವರ ದೇವಾಲಯ: ಹಾಸನ ಜಿಲ್ಲೆಯ ಅರಿಸೀಕೆರೆ ತಾಲ್ಲೂಕಿನಲ್ಲಿದೆ ಪ್ರಸಿದ್ಧ ಈಶ್ವರ ದೇವಾಲಯ. ಹೊಯ್ಸಳರ ಕಾಲದ ಈ ದೇವಾಲಯವು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಭಿನ್ನ ವಾಸ್ತು ಶ್ರೀಮಂತಿಕೆಯ ಈ ದೇಗುಲಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವು ಹಾಸನದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ( Trawell.in)

ಕೇದಾರೇಶ್ವರ ದೇವಾಲಯ:  ಮಹಾಶಿವನ ಸನ್ನಿಧಾನವಾದ ಕೇದಾರೇಶ್ವರ ದೇವಾಲಯವನ್ನು ಕ್ರಿಸ್ತಶಕ 1220ರ ಸುಮಾರಿನಲ್ಲಿ ಕಟ್ಟಿಸಲಾಯಿತು. ಹೊಯ್ಸಳ ರಾಜ ಎರಡನೇ ವೀರ ಬಲ್ಲಾಳ ಈ ದೇಗುಲವನ್ನು ನಿರ್ಮಿಸಿದ್ದಾನೆ. ಹೊಯ್ಸಳ ಶೈಲಿಯಲ್ಲಿ ನಿರ್ಮಿತವಾದ ಸುಂದರ ದೇವಾಲಯವಿದು. ಈ ದೇಗುಲದಲ್ಲಿ ಭಗವಾನ್‌ ವಿಷ್ಣು ಹಾಗೂ ಶಿವನ ಸುಂದರ ಕೆತ್ತನೆಯನ್ನು ಕಾಣಬಹುದಾಗಿದೆ.
icon

(3 / 12)

ಬೂಸೇಶ್ವರ ದೇವಾಲಯ: ಇದು ಕೂಡ ಹಾಸನದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಕೊರವಂಗಲ ದೇವಾಲಯ ಎಂದು ಇದು ಪ್ರಸಿದ್ಧಿ ಪಡೆದಿದೆ. ಇದು ಕೂಡ ಪರಮೇಶ್ವರನಿಗೆ ಅರ್ಪಿತವಾಗಿರುವ ದೇವಾಲಯ. ಇದನ್ನು 12ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದರು. ಬೂಸೇಶ್ವರನಿಗೆ ಬೂಚೇಶ್ವರ ಎಂದೂ ಕರೆಯುತ್ತಾರೆ.
icon

(4 / 12)

ಪಾರ್ವತಮ್ಮ ಬೆಟ್ಟ: ಅರಸೀಕೆರೆ ಪಟ್ಟಣಕ್ಕೆ ಸಮೀಪದಲ್ಲಿರುವ ಈ ಬೆಟ್ಟವು ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಬೆಟ್ಟ ಮೇಲಿಂದ ಕಾಣುವ ಸುಂದರ ಭೂಸ್ವರ್ಗ ನಿಮ್ಮನ್ನು ಬೇರಯದೇ ಲೋಕಕ್ಕೆ ಕರೆದ್ಯೊಯುವುದರಲ್ಲಿ ಎರಡು ಮಾತಿಲ್ಲ.
icon

(5 / 12)

ಪಾರ್ವತಮ್ಮ ಬೆಟ್ಟ: ಅರಸೀಕೆರೆ ಪಟ್ಟಣಕ್ಕೆ ಸಮೀಪದಲ್ಲಿರುವ ಈ ಬೆಟ್ಟವು ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಬೆಟ್ಟ ಮೇಲಿಂದ ಕಾಣುವ ಸುಂದರ ಭೂಸ್ವರ್ಗ ನಿಮ್ಮನ್ನು ಬೇರಯದೇ ಲೋಕಕ್ಕೆ ಕರೆದ್ಯೊಯುವುದರಲ್ಲಿ ಎರಡು ಮಾತಿಲ್ಲ.(Trawell.in)

ಶೆಟ್ಟಿಹಳ್ಳಿ ಚರ್ಚ್‌: ಹಾಸನ ಎಂದಾಕ್ಷಣ ನೆನಪಾಗುವುದು ಶೆಟ್ಟಿಹಳ್ಳಿ ಚರ್ಚ್‌. ಈ ಜಾಗದಲ್ಲಿ ಹಲವು ಸಿನಿಮಾಗಳನ್ನು ಶೂಟಿಂಗ್‌ ಮಾಡಲಾಗಿದೆ. ಗೋಥಿಕ್‌ ವಾಸ್ತುಶೈಲಿಯ ಈ ದೇಗುಲವನ್ನು 1860ರ ದಶಕದಲ್ಲಿ ನಿರ್ಮಿಸಲಾಯಿತು. 1960 ದಶಕದಲ್ಲಿ ಹಿನ್ನೀರಿನಲ್ಲಿ ಈ ಚರ್ಚ್‌ ಮುಳುಗಲು ಆರಂಭಿಸಿತು. ಆದ್ದರಿಂತ ಇದ್ದಕ್ಕೆ ಫ್ಲೋಟಿಂಗ್‌ ಚರ್ಚ್‌, ದಿ ಸಬ್ಮರ್ಡ್‌ ಚರ್ಚ್‌ ಎಂಬ ಹೆಸರೂ ಇದೆ. 
icon

(6 / 12)

ಶೆಟ್ಟಿಹಳ್ಳಿ ಚರ್ಚ್‌: ಹಾಸನ ಎಂದಾಕ್ಷಣ ನೆನಪಾಗುವುದು ಶೆಟ್ಟಿಹಳ್ಳಿ ಚರ್ಚ್‌. ಈ ಜಾಗದಲ್ಲಿ ಹಲವು ಸಿನಿಮಾಗಳನ್ನು ಶೂಟಿಂಗ್‌ ಮಾಡಲಾಗಿದೆ. ಗೋಥಿಕ್‌ ವಾಸ್ತುಶೈಲಿಯ ಈ ದೇಗುಲವನ್ನು 1860ರ ದಶಕದಲ್ಲಿ ನಿರ್ಮಿಸಲಾಯಿತು. 1960 ದಶಕದಲ್ಲಿ ಹಿನ್ನೀರಿನಲ್ಲಿ ಈ ಚರ್ಚ್‌ ಮುಳುಗಲು ಆರಂಭಿಸಿತು. ಆದ್ದರಿಂತ ಇದ್ದಕ್ಕೆ ಫ್ಲೋಟಿಂಗ್‌ ಚರ್ಚ್‌, ದಿ ಸಬ್ಮರ್ಡ್‌ ಚರ್ಚ್‌ ಎಂಬ ಹೆಸರೂ ಇದೆ. (Facebook)

ಹಾಸನಾಂಬ ದೇವಾಲಯ: ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಹಾಸನಾಂಬ ದೇವಾಲಯವೂ ಹೌದು. ವರ್ಷಕ್ಕೊಮ್ಮೆ ಈ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಹಿಂದಿನ ವರ್ಷ ಹಚ್ಚಿದ ದೀಪ ಮುಂದಿನ ವರ್ಷದವರೆಗೂ ಉರಿಯುತ್ತಲೇ ಇರುವುದು ಈ ದೇಗುಲದ ವಿಶೇಷ. 
icon

(7 / 12)

ಹಾಸನಾಂಬ ದೇವಾಲಯ: ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಹಾಸನಾಂಬ ದೇವಾಲಯವೂ ಹೌದು. ವರ್ಷಕ್ಕೊಮ್ಮೆ ಈ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಹಿಂದಿನ ವರ್ಷ ಹಚ್ಚಿದ ದೀಪ ಮುಂದಿನ ವರ್ಷದವರೆಗೂ ಉರಿಯುತ್ತಲೇ ಇರುವುದು ಈ ದೇಗುಲದ ವಿಶೇಷ. (tripadvisor)

ಗೋರೂರು ಡ್ಯಾಂ: ಹೇಮಾವತಿ ಅಣೆಕಟ್ಟು ಎಂದೂ ಈ ಜಾಗಕ್ಕೆ ಕರೆಯಲಾಗುತ್ತದೆ. ಹಾಸನದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಈ ಜಾಗವೂ ಒಂದು. ಇದು ಪ್ರಕೃತಿ ಸೌಂದರ್ಯದಿಂದ ಕೂಡಿರುವ ತಾಣ. ವಿವಿಧ ರೀತಿಯ ಪಕ್ಷಿಗಳನ್ನು ಇಲ್ಲಿ ನೋಡಬಹುದಾಗಿದೆ. 
icon

(8 / 12)

ಗೋರೂರು ಡ್ಯಾಂ: ಹೇಮಾವತಿ ಅಣೆಕಟ್ಟು ಎಂದೂ ಈ ಜಾಗಕ್ಕೆ ಕರೆಯಲಾಗುತ್ತದೆ. ಹಾಸನದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಈ ಜಾಗವೂ ಒಂದು. ಇದು ಪ್ರಕೃತಿ ಸೌಂದರ್ಯದಿಂದ ಕೂಡಿರುವ ತಾಣ. ವಿವಿಧ ರೀತಿಯ ಪಕ್ಷಿಗಳನ್ನು ಇಲ್ಲಿ ನೋಡಬಹುದಾಗಿದೆ. (Facebook)

ಬಾಹುಬಲಿ ಪ್ರತಿಮೆ: ಭಗವಾನ್‌ ಬಾಹುಬಲಿ ಪ್ರತಿಮೆಯು ಹಾಸನದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. 57 ಅಡಿ ಎತ್ತರದ ಬಾಹುಬಲಿ ಪ್ರತಿಮೆಯನ್ನು ಗ್ರಾನೈಟ್‌ನಿಂದ ಮಾಡಲಾಗಿದೆ. ಕ್ರಿಸ್ತಶಕ 983ರಲ್ಲಿ ನಿರ್ಮಿಸಲಾದ ಈ ಮೂರ್ತಿ ಬೆಟ್ಟದ ಮೇಲಿದೆ. ಹಾಸನಕ್ಕೆ ಹೋದ್ರೆ ಬಾಹುಬಲಿ ಬೆಟ್ಟಕ್ಕೆ ಭೇಟಿ ನೀಡದೇ ಬರಬೇಡಿ. 
icon

(9 / 12)

ಬಾಹುಬಲಿ ಪ್ರತಿಮೆ: ಭಗವಾನ್‌ ಬಾಹುಬಲಿ ಪ್ರತಿಮೆಯು ಹಾಸನದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. 57 ಅಡಿ ಎತ್ತರದ ಬಾಹುಬಲಿ ಪ್ರತಿಮೆಯನ್ನು ಗ್ರಾನೈಟ್‌ನಿಂದ ಮಾಡಲಾಗಿದೆ. ಕ್ರಿಸ್ತಶಕ 983ರಲ್ಲಿ ನಿರ್ಮಿಸಲಾದ ಈ ಮೂರ್ತಿ ಬೆಟ್ಟದ ಮೇಲಿದೆ. ಹಾಸನಕ್ಕೆ ಹೋದ್ರೆ ಬಾಹುಬಲಿ ಬೆಟ್ಟಕ್ಕೆ ಭೇಟಿ ನೀಡದೇ ಬರಬೇಡಿ. (facebook)

ಹುಲಿಕೆರೆ ಕೊಳ: ಹುಲಿಕೆರೆ ಕೊಳವು ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ. ಸುಂದರ ಕೆರೆ, ಕೆರೆಯ ಸುತ್ತಲಿನ ವಾಸ್ತುಶಿಲ್ಪ, ಹಸಿರ ಪರಿಸರ ಈ ಎಲ್ಲವೂ ನಿಮ್ಮ ಕಣ್ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. 
icon

(10 / 12)

ಹುಲಿಕೆರೆ ಕೊಳ: ಹುಲಿಕೆರೆ ಕೊಳವು ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ. ಸುಂದರ ಕೆರೆ, ಕೆರೆಯ ಸುತ್ತಲಿನ ವಾಸ್ತುಶಿಲ್ಪ, ಹಸಿರ ಪರಿಸರ ಈ ಎಲ್ಲವೂ ನಿಮ್ಮ ಕಣ್ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. (Facebook)

ಕಪ್ಪೆ ಚೆನ್ನಿಗರಾಯ ದೇವಾಲಯ: ಕಪ್ಪೆ ಚನ್ನಿಗರಾಯ ದೇವಾಲಯವನ್ನು 11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಚೆನ್ನಕೇಶವನಿಗೆ ಅರ್ಪಿತವಾದ ಈ ದೇವಾಲಯವು ಸಂಕೀರ್ಣ ವಾಸ್ತುಶಿಲ್ಪದಿಂದ ಹೆಸರುವಾಸಿಯಾಗಿದೆ. 
icon

(11 / 12)

ಕಪ್ಪೆ ಚೆನ್ನಿಗರಾಯ ದೇವಾಲಯ: ಕಪ್ಪೆ ಚನ್ನಿಗರಾಯ ದೇವಾಲಯವನ್ನು 11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಚೆನ್ನಕೇಶವನಿಗೆ ಅರ್ಪಿತವಾದ ಈ ದೇವಾಲಯವು ಸಂಕೀರ್ಣ ವಾಸ್ತುಶಿಲ್ಪದಿಂದ ಹೆಸರುವಾಸಿಯಾಗಿದೆ. (Holidify)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು