ಕನ್ನಡ ಸುದ್ದಿ  /  Photo Gallery  /  Travel Karnataka Tourism Top 7 Hill Stations In Karnataka You Must Visit Br Hills Nandi Hills Coorg Rst

ಕರ್ನಾಟಕದಲ್ಲಿರುವ 7 ಅತಿ ಸುಂದರ ಗಿರಿಧಾಮಗಳಿವು; ರಾಜ್ಯದಲ್ಲೇ ಇದ್ದು ಈವರೆಗೆ ನೋಡಿಲ್ಲ ಅಂದ್ರೆ ಇಂದೇ ಬೇಸಿಗೆ ಟೂರ್‌ಗೆ ಪ್ಲಾನ್‌ ಮಾಡಿ

  • ನೀವು ಪ್ರವಾಸಪ್ರೇಮಿಯಾಗಿದ್ರೆ ಕರ್ನಾಟಕ ನಿಮಗೆ ಸ್ವರ್ಗ ಅನ್ನಿಸೋದು ಸುಳ್ಳಲ್ಲ. ನಮ್ಮ ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಹಸಿರು ಹಾಸಿರುವ ಗಿರಿಧಾಮಗಳಲ್ಲಿ ನೀವು ಕಾಲ ಕಳೆಯಲು ಬಯಸಿದ್ರೆ ಕರ್ನಾಟಕದ ಈ 7 ಜಾಗಗಳನ್ನು ಖಂಡಿತ ಮಿಸ್‌ ಮಾಡ್ಕೋಬೇಡಿ.

ಕರ್ನಾಟಕದಲ್ಲಿ ನೂರಾರು ಪ್ರವಾಸಿ ತಾಣಗಳಿವೆ. ಇಲ್ಲಿನ ಪ್ರತಿ ಜಿಲ್ಲೆಯಲ್ಲೂ ಒಂದಿಲ್ಲೊಂದು ಸುಂದರ ಸ್ಥಳಗಳಿವೆ. ಹಸಿರು ಹಾಸಿರುವ ಬೆಟ್ಟ ಗುಡ್ಡಗಳು, ಗಿರಿಧಾಮಗಳು, ಜಲಪಾತಗಳು, ಕಡಲತೀರಗಳು ಹೀಗೆ ಕರ್ನಾಟಕದಲ್ಲಿ ಏನಿದೆ ಏನಿಲ್ಲಾ ಹೇಳಿ. ಅದರಲ್ಲೂ ರಾಜ್ಯದಲ್ಲಿರುವ ಕೆಲವು ಗಿರಿಧಾಮಗಳು ನಿಮ್ಮ ಕಣ್ಣು ಮನಸ್ಸಿಗೆ ತಂಪೆರೆಯುವುದು ಸುಳ್ಳಲ್ಲ. ಇನ್ನೇನು ಬೇಸಿಗೆ ರಜೆ ಸಮೀಪದಲ್ಲಿದೆ. ನಿಮ್ಮ ಮಕ್ಕಳ ಜೊತೆ ಅಥವಾ ಸ್ನೇಹಿತರು, ಕುಟುಂಬದ ಜೊತೆ ಪ್ರವಾಸ ಮಾಡುವ ಪ್ಲಾನ್‌ ಇದ್ರೆ ಈ ಜಾಗಗಳನ್ನು ಖಂಡಿತ ಮಿಸ್‌ ಮಾಡ್ಬೇಡಿ. 
icon

(1 / 9)

ಬಿಆರ್‌ ಹಿಲ್ಸ್‌: ಮೈಸೂರಿನ ಚಾಮರಾಜನಗರದಲ್ಲಿರುವ ಬಿಳಿಗಿರಿರಂಗನ ಬೆಟ್ಟವು ಬಿಆರ್‌ ಹಿಲ್ಸ್‌ ಎಂದೇ ಖ್ಯಾತಿ ಪಡೆದಿದೆ. ಇದು ಪೂರ್ವಘಟ್ಟವನ್ನು ಪಶ್ಚಿಮಘಟ್ಟಕ್ಕೆ ಸಂಪರ್ಕಿಸುವ ತಾಣವೂ ಆಗಿದೆ. ದಟ್ಟ ಹಸಿರಿನ ಗಿರಿಧಾಮ ಇದಾಗಿದ್ದು, ಬಿಳಿಗಿರಿ ರಂಗಸ್ವಾಮಿ ದೇವಾಲಯ ಹಾಗೂ ವನ್ಯಜೀವಿ ಅಭಯಾರಣ್ಯಕ್ಕೆ ಹೆಸರುವಾಸಿಯಾಗಿದೆ. ಕಾವೇರಿ ಹಾಗೂ ಕಪಿಲಾ ನದಿಗಳು ಈ ಬೆಟ್ಟದ ತುದಿಯಲ್ಲಿ ಹರಿಯುವ ಕಾರಣ ಇಲ್ಲಿ ರೀವರ್‌ ರಾಫ್ಟಿಂಗ್‌, ಕೊರಾಕಲ್‌ ಬೋಟ್‌ ರೈಡ್‌ ಅನ್ನು ಎಂಜಾಯ್‌ ಮಾಡಬಹುದು. ಅಕ್ಟೋಬರ್‌ನಿಂದ ಮೇ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. 
icon

(2 / 9)

ಕೆಮ್ಮಣ್ಣುಗುಂಡಿ: ಬಾಬುಬುಡನ್‌ ಗಿರಿಧಾಮದ ಶ್ರೇಣಿಯಲ್ಲಿರುವ ಕೆಮ್ಮಣ್ಣುಗುಂಡಿ ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ತಾಣ. ಪುರಾಣಗಳಲ್ಲಿ ಇದಕ್ಕೆ ಚಂದ್ರ ದ್ರೋಣ ಪರ್ವತ ಎಂದೂ ಕರೆಯುತ್ತಿದ್ದರು. ಇಲ್ಲಿಗೆ ಭೇಟಿ ನೀಡಿದಾಗ ಹೆಬ್ಬೆ ಜಲಪಾತ, ಝಡ್‌ ಪಾಯಿಂಟ್‌, ರಾಕ್‌ ಗಾರ್ಡನ್‌, ಕಲ್ಹತ್ತಗಿರಿ, ಬಾಬು ಬುಡನ್‌ ಹಿಲ್ಸ್‌ ಮುಂತಾದವನ್ನು ನೋಡಬಹುದು. 
icon

(3 / 9)

ಕೆಮ್ಮಣ್ಣುಗುಂಡಿ: ಬಾಬುಬುಡನ್‌ ಗಿರಿಧಾಮದ ಶ್ರೇಣಿಯಲ್ಲಿರುವ ಕೆಮ್ಮಣ್ಣುಗುಂಡಿ ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ತಾಣ. ಪುರಾಣಗಳಲ್ಲಿ ಇದಕ್ಕೆ ಚಂದ್ರ ದ್ರೋಣ ಪರ್ವತ ಎಂದೂ ಕರೆಯುತ್ತಿದ್ದರು. ಇಲ್ಲಿಗೆ ಭೇಟಿ ನೀಡಿದಾಗ ಹೆಬ್ಬೆ ಜಲಪಾತ, ಝಡ್‌ ಪಾಯಿಂಟ್‌, ರಾಕ್‌ ಗಾರ್ಡನ್‌, ಕಲ್ಹತ್ತಗಿರಿ, ಬಾಬು ಬುಡನ್‌ ಹಿಲ್ಸ್‌ ಮುಂತಾದವನ್ನು ನೋಡಬಹುದು. (Chikmagalur tourism )

ಕೂರ್ಗ್‌: ಕೊಡಗು ಪ್ರಾಕೃತಿಕ ಸೌಂದರ್ಯ ಹಾಗೂ ತಂಪಿನ ವಾತಾವರಣದ ಕಾರಣದಿಂದ ಕರ್ನಾಟಕದ ಕಾಶ್ಮೀರ ಎಂಬ ಹೆಸರು ಪಡೆದಿದೆ. ಕೂರ್ಗ್‌ ತನ್ನ ಸುತ್ತಲೂ ಬೆಟ್ಟ-ಗುಡ್ಡಗಳಿಂದ ಆವರಿಸಿಕೊಂಡಿದೆ. ಭಾರತದ ಸ್ಕಾಟ್ಲೆಂಡ್‌ ಎಂಬ ಹೆಸರೂ ಇದಕ್ಕಿದೆ. ಇಲ್ಲಿ ಟ್ರೆಕ್ಕಿಂಗ್‌ ಮಾಡಲು ಹೇಳಿದ ಮಾಡಿಸಿದ ಜಾಗಗಳಿವೆ. ಇಲ್ಲಿನ ಸಾಕಷ್ಟು ಪ್ರವಾಸಿ ತಾಣಗಳಿದ್ದು ಎರಡು ದಿನಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗವಿದು. 
icon

(4 / 9)

ಚಿಕ್ಕಮಗಳೂರು: ಕೊಡಗಿನಷ್ಟೇ ಚಿಕ್ಕಮಗಳೂರು ಕೂಡ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಜಿಲ್ಲೆ. ಇಲ್ಲಿ ಹತ್ತಾರು ಬೆಟ್ಟ, ಜಲಪಾತ ಹಾಗೂ ನದಿಗಳಿವೆ. ಹಚ್ಚ ಹಸಿರಿನ ವಾತಾವರಣ, ಕಾಡು ಗುಡ್ಡಗಳಿಂದ ಸುತ್ತವರಿದಿರುವ ಚಿಕ್ಕಮಗಳೂರು ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿದೆ. ಮೊದಲೇ ಹೇಳಿದಂತೆ ಕೆಮ್ಮುಣ್ಣು ಗುಂಡಿ, ಚಾರ್ಮಾಡಿ ಘಾಟ್‌ ಹೀಗೆ ಹಲವು ತಾಣಗಳು ಇಲ್ಲಿವೆ. 
icon

(5 / 9)

ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟವು ಮೈಸೂರಿನ ಚಾಮರಾಜನಗರದ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಇಲ್ಲಿನ ಗಿರಿಧಾಮಗಳು ಸುಂದರ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. 
icon

(6 / 9)

ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟವು ಮೈಸೂರಿನ ಚಾಮರಾಜನಗರದ ಕೊಳ್ಳೆಗಾಲ ತಾಲ್ಲೂಕಿನಲ್ಲಿದೆ. ಇಲ್ಲಿನ ಗಿರಿಧಾಮಗಳು ಸುಂದರ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. (ExploreBees)

ಆಗುಂಬೆ: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದ ಮಧ್ಯದಲ್ಲಿರುವ ಆಗುಂಬೆ ಸಮುದ್ರ ಮಟ್ಟದಿಂದ 2100 ಅಡಿ ಎತ್ತರದಲ್ಲಿದೆ. ಇದು ಕೂಡ ಸುಂದರ ಪ್ರಾಕೃತಿಕ ವೈವಿಧ್ಯವನ್ನು ಹೊಂದಿರುವ ತಾಣ. ಇದನ್ನು ದಕ್ಷಿಣದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಅಪರೂಪದ ಔಷಧೀಯ ಸಸ್ಯಗಳನ್ನ ತನ್ನ ಮಡಿನಲ್ಲಿ ಇರಿಸಿಕೊಂಡಿದೆ ಆಗುಂಬೆ. 
icon

(7 / 9)

ಆಗುಂಬೆ: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದ ಮಧ್ಯದಲ್ಲಿರುವ ಆಗುಂಬೆ ಸಮುದ್ರ ಮಟ್ಟದಿಂದ 2100 ಅಡಿ ಎತ್ತರದಲ್ಲಿದೆ. ಇದು ಕೂಡ ಸುಂದರ ಪ್ರಾಕೃತಿಕ ವೈವಿಧ್ಯವನ್ನು ಹೊಂದಿರುವ ತಾಣ. ಇದನ್ನು ದಕ್ಷಿಣದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಅಪರೂಪದ ಔಷಧೀಯ ಸಸ್ಯಗಳನ್ನ ತನ್ನ ಮಡಿನಲ್ಲಿ ಇರಿಸಿಕೊಂಡಿದೆ ಆಗುಂಬೆ. (Traveltear)

ನಂದಿ ಹಿಲ್ಸ್‌: ಕರ್ನಾಟಕ ನಂದಿಹಿಲ್ಸ್‌ ಭಾರತದಾದ್ಯಂತ ಪ್ರಸಿದ್ಧ ಪಡೆದ ಸ್ಥಳವಾಗಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವ ಈ ಜಾಗವು ಹಿಮದಿಂದ ಹರಡಿಸುವ ಸ್ವರ್ಗಲೋಕದಂತೆ ನಿಮಗೆ ಭಾಸವಾಗುತ್ತದೆ. ಇದು ಬೆಂಗಳೂರಿಗರ ನೆಚ್ಚಿನ ಪಿಕ್ನಿಕ್‌ ಸ್ಪಾಟ್‌ ಕೂಡ ಹೌದು. 
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

IPL_Entry_Point

ಇತರ ಗ್ಯಾಲರಿಗಳು