ಡಿಸೆಂಬರ್ ಚಳಿಗೆ ಟೂರ್ ಪ್ಲಾನ್ ಮಾಡುವಂತಿದ್ದರೆ ಕರ್ನಾಟಕದ ಈ 8 ಜಾಗಗಳನ್ನು ಮಿಸ್‌ ಮಾಡ್ಲೇಬೇಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಿಸೆಂಬರ್ ಚಳಿಗೆ ಟೂರ್ ಪ್ಲಾನ್ ಮಾಡುವಂತಿದ್ದರೆ ಕರ್ನಾಟಕದ ಈ 8 ಜಾಗಗಳನ್ನು ಮಿಸ್‌ ಮಾಡ್ಲೇಬೇಡಿ

ಡಿಸೆಂಬರ್ ಚಳಿಗೆ ಟೂರ್ ಪ್ಲಾನ್ ಮಾಡುವಂತಿದ್ದರೆ ಕರ್ನಾಟಕದ ಈ 8 ಜಾಗಗಳನ್ನು ಮಿಸ್‌ ಮಾಡ್ಲೇಬೇಡಿ

  • ಚುಮುಚುಮು ಚಳಿಯಲ್ಲಿ ಪ್ರವಾಸ ಮಾಡುವುದು ಒಂಥರಾ ಖುಷಿ. ಅದರಲ್ಲೂ ಚಳಿಗಾಲದ ಪ್ರವಾಸಕ್ಕೆಂದೇ ಕೆಲವು ಹೇಳಿ ಮಾಡಿಸಿದ ಪ್ರದೇಶಗಳಿವೆ. ಚಳಿಗಾಲದ ಪ್ರವಾಸದ ಸವಿಯನ್ನು ಸವಿಬೇಕು ಅಂದ್ರೆ ಲೇಹ್‌ ಲಡಾಕ್‌ಗೆ ಹೋಗಬೇಕು ಎಂದೇನಿಲ್ಲ. ಕರ್ನಾಟಕದಲ್ಲೇ ಹಲವು ತಾಣಗಳು ಚಳಿಗಾಲದ ಪ್ರವಾಸಕ್ಕೆ ಬೆಸ್ಟ್‌ ಎನ್ನಿಸುವಂತಿವೆ. ಅದರಲ್ಲೂ ಡಿಸೆಂಬರ್‌ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ. 

ಕೂರ್ಗ್‌, ಮಡಿಕೇರಿ: ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಮಡಿಕೇರಿ, ಕೊಡಗು ಪ್ರಕೃತಿ ಸೌಂದರ್ಯದ ತವರು. ಹಸಿರ ಬೆಟ್ಟ, ಗುಡ್ಡಗಳ ನಡುವೆ ಕಾಫಿ ಸುವಾಸನೆಯು ಕೂರ್ಗ್‌ನ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಚಳಿಗಾಲದಲ್ಲಿ ಇಲ್ಲಿನ ವಾತಾವರಣವನ್ನು ನೋಡಿಯೇ ಸವಿಯಬೇಕು. ಕೊಡಗಿಗೆ ಪ್ರವಾಸ ಆಯೋಜಿಸಿದರೆ ಅಬ್ಬಿ ಫಾಲ್ಸ್‌, ಮಡಿಕೇರಿ ಕೋಟೆ, ರಾಜಾಸೀಟ್‌, ಇರ್ಪು ಫಾಲ್ಸ್‌ ಮುಂತಾದವುಗಳನ್ನು ನೋಡಿ ಬರಬಹುದು. 
icon

(1 / 8)

ಗೋಕರ್ಣ: ಚಳಿಗಾಲದ ಪ್ರವಾಸಕ್ಕೆ ನೀವು ಗೋಕರ್ಣವನ್ನೂ ಆರಿಸಿಕೊಳ್ಳಬಹುದು. ಜನಜಂಗುಳಿಯಿಲ್ಲದ ಬೀಚ್‌ನಲ್ಲಿ ನೀವು ಮಸ್ತ್‌ ಎಂಜಾಯ್‌ ಮಾಡಬಹುದು. ಇದಲ್ಲದೇ ಸಾಹಸಮಯ ಕ್ರೀಡೆಗಳಾದ ಸರ್ಫಿಂಗ್‌, ಸ್ಕೂಬಾ ಡೈವಿಂಗ್‌, ಜೆಟ್‌ ಸೈಕಿಂಗ್‌ ಮುಂತಾದವನ್ನು ಎಲ್ಲಿ ಎಂಜಾಯ್‌ ಮಾಡಬಹುದು. 
icon

(2 / 8)

ನಂದಿಹಿಲ್‌: ಪ್ರಕೃತಿ ಅದ್ಭುತ ವಿಸ್ಮಯವನ್ನು ಸವಿಬೇಕು ಅಂದ್ರೆ ನೀವು ಚಳಿಗಾಲದಲ್ಲಿ ನಂದಿಬೆಟ್ಟಕ್ಕೆ ಭೇಟಿ ನೀಡಲೇಬೇಕು. ನಂದಿಬೆಟ್ಟವು ಚಳಿಗಾಲದಲ್ಲಿ ಹಿಮ್ಛಾದಿತವಾಗಿದ್ದು, ಸ್ವರ್ಗದಂತೆ ಕಾಣಿಸುವುದು ಸುಳ್ಳಲ್ಲ. ಇಲ್ಲಿ ಟಿಪ್ಪು ಡ್ರಾಪ್‌ ತುಂಬಾನೇ ಫೇಮಸ್ಸ್‌. ಇಲ್ಲಿ ಹೋದರೆ ಭೋಗನಂದೀಶ್ವರ ದೇವಾಲಯ ಹಾಗೂ ಅಮೃತ ಸರೋವರ ನೋಡಲು ಮರಿಬೇಡಿ. 
icon

(3 / 8)

ಚಿಕ್ಕಮಗಳೂರು: ಚಳಿಗಾಲದಲ್ಲಿ ಕರ್ನಾಟಕದಲ್ಲೇ ಕಾಶ್ಮೀರ ನೋಡಬೇಕು ಅಂದ್ರೆ ಚಿಕ್ಕಮಗಳೂರಿಗೆ ಭೇಟಿ ನೀಡಬೇಕು. ಚಿಕ್ಕಮಗಳೂರು ಕೂಡ ಮಡಿಕೇರಿಯಂತೆ ಹಿಮವನ್ನು ಹಾಸು ಹೊದ್ದಂತೆ ಇರುತ್ತದೆ. ಈ ಕಾಲದಲ್ಲಿ ಹಸಿರು ಬೆಟ್ಟ, ಗುಡ್ಡಗಳು ಝರಿ, ತೊರೆಗಳಿಂದ ತುಂಬಿರುವ ಇಲ್ಲಿನ ತಾಣಗಳನ್ನು ನೋಡುವುದೇ ಅದ್ಭುತ. 
icon

(4 / 8)

(wordpresscon)

ಮೈಸೂರು: ಚಳಿಗಾಲದ ಪ್ರವಾಸಕ್ಕೆ ಮೈಸೂರನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೈಸೂರಿಗೆ ಅಗ್ರಸ್ಥಾನವಿದೆ. ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದರೆ ನೀವು ಮೈಸೂರಿಗೆ ಭೇಟಿ ನೀಡಬೇಕು. ಇಲ್ಲಿಗೆ ಹೋದರೆ ಮೈಸೂರು ಅರಮನೆ, ಲಲಿತ ಮಹಲ್‌, ಜಗಮೋಹನ್‌ ಪ್ಯಾಲೇಸ್‌ ಮುಂತಾದ ತಾಣಗಳಿಗೆ ಭೇಟಿ ಕೊಡದೇ ಮರಳದಿರಿ. 
icon

(5 / 8)

ಬೆಂಗಳೂರು: ಬೆಂಗಳೂರು ನೋಡಬೇಕು ಅನ್ನೋ ಆಸೆ ಇರುವವರು ಚಳಿಗಾಲದಲ್ಲಿ ಬೆಂಗಳೂರಿಗೆ ಭೇಟಿ ನೀಡುವುದು ಬೆಸ್ಟ್‌. ಚಳಿಗಾಲದಲ್ಲಿ ಬೆಂಗಳೂರಿನ ವಾತಾವರಣ ಸೂಪರ್‌ ಆಗಿರುತ್ತೆ. ಬೆಂಗಳೂರಿಗೆ ಯಾವ ಸಮಯದಲ್ಲೂ ಭೇಟಿ ನೀಡಬಹುದಾದರೂ ಚಳಿಗಾಲ ಹೇಳಿ ಮಾಡಿಸಿದ್ದು. ಕಬ್ಬನ್‌ ಪಾರ್ಕ್‌, ಬ್ಯೂಗಲ್‌ ರಾಕ್‌ ಪಾರ್ಕ್‌, ಇಂದಿರಾಗಾಂಧಿ ಮ್ಯೂಸಿಕಲ್‌ ಫೌಂಟೇನ್‌ ಪಾರ್ಕ್‌, ಲಾಲ್‌ಬಾಗ್‌, ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌ ಸೇರಿದಂತೆ ಇಲ್ಲಿ ಹಲವು ಪ್ರದೇಶಗಳಿವೆ. 
icon

(6 / 8)

ಕಬಿನಿ: ಕರ್ನಾಟಕದಲ್ಲಿ ಮನಸೆಳೆವ ಸುಂದರ ತಾಣಗಳಲ್ಲಿ ಕಬಿನಿ ಕೂಡ ಒಂದು. ಜೀವನದಲ್ಲಿ ಒಮ್ಮೆಯಾದ್ರೂ ಕಬಿನಿಗೆ ಭೇಟಿ ನೀಡಬೇಕು. ಮನಸ್ಸಿಗೆ ಖುಷಿ ನೀಡುವ ವಾತಾವರಣ, ವೈವಿಧ್ಯಮಯ ಚಟುವಟಿಕೆಗಳು, ಕ್ಯಾಂಪ್‌ ಸೇರಿದಂತೆ ಸುಂದರ ನದಿ, ಕಾಡು, ಪ್ರಾಣಿಗಳು ನಿಮ್ಮ ಖುಷಿ ಹೆಚ್ಚಿಸುವುದರಿಂದ ಎರಡು ಮಾತಿಲ್ಲ. 
icon

(7 / 8)

ಆಗುಂಬೆ: ಮಲೆನಾಡಿನ ಪ್ರಕೃತಿಯನ್ನು ಸವಿಬೇಕು ಅಂದ್ರೆ ನೀವು ಚಳಿಗಾಲದಲ್ಲಿ ಆಗುಂಬೆಗೆ ಭೇಟಿ ನೀಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿದ್ದು ಆಗುಂಬೆ ಅದರಲ್ಲಿ ದಿ ಬೆಸ್ಟ್‌ ಎನ್ನಬಹುದು. ಇಲ್ಲಿಗೆ ಪ್ರವಾಸಕ್ಕೆ ಹೋದರೆ ಕುಂದಾದ್ರಿಗೆ ಹೋಗೋದು ಮರಿಬೇಡಿ. ಜೊತೆಗೆ ಜೋಗ ಕೂಡ ನೋಡ್ಕೊಂಡ್‌ ಬನ್ನಿ.
icon

(8 / 8)

ಇತರ ಗ್ಯಾಲರಿಗಳು