ಚಳಿಗಾಲದಲ್ಲಿ ಪ್ರವಾಸಕ್ಕೆ ಹೊರಡುವ ಮುನ್ನ ಈ ವಸ್ತುಗಳನ್ನ ಮರೆಯದೇ ನಿಮ್ಮ ಬ್ಯಾಗ್‌ನಲ್ಲಿರಿಸಿ; ಇಲ್ಲದಿದ್ದರೆ ಪಜೀತಿ ಪಡಬೇಕಾಗುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಳಿಗಾಲದಲ್ಲಿ ಪ್ರವಾಸಕ್ಕೆ ಹೊರಡುವ ಮುನ್ನ ಈ ವಸ್ತುಗಳನ್ನ ಮರೆಯದೇ ನಿಮ್ಮ ಬ್ಯಾಗ್‌ನಲ್ಲಿರಿಸಿ; ಇಲ್ಲದಿದ್ದರೆ ಪಜೀತಿ ಪಡಬೇಕಾಗುತ್ತೆ

ಚಳಿಗಾಲದಲ್ಲಿ ಪ್ರವಾಸಕ್ಕೆ ಹೊರಡುವ ಮುನ್ನ ಈ ವಸ್ತುಗಳನ್ನ ಮರೆಯದೇ ನಿಮ್ಮ ಬ್ಯಾಗ್‌ನಲ್ಲಿರಿಸಿ; ಇಲ್ಲದಿದ್ದರೆ ಪಜೀತಿ ಪಡಬೇಕಾಗುತ್ತೆ

ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗುವುದು ನಿಜಕ್ಕೂ ಅದ್ಭುತ ಅನುಭವ ನೀಡುವುದು ಸುಳ್ಳಲ್ಲ. ಈ ಸೀಸನ್‌ನಲ್ಲಿ ನೀವು ಪ್ರವಾಸ ಹೋಗಲು ಯೋಚಿಸುತ್ತಿದ್ದರೆ, ಬ್ಯಾಗ್‌ ಪ್ಯಾಕ್ ಮಾಡುವ ಮುನ್ನ ಕೆಲವು ವಸ್ತುಗಳನ್ನು ಮರೆಯದೇ ಬ್ಯಾಗ್‌ನಲ್ಲಿ ಇರಿಸಿಕೊಳ್ಳಬೇಕು. ಚಳಿಯಿಂದ ರಕ್ಷಿಸಿಕೊಳ್ಳಲು ಇದು ಅಗತ್ಯ ಕೂಡ ಹೌದು.

ಚಳಿಗಾಲದ ಪ್ರವಾಸವು ಸಖತ್ ಥ್ರಿಲ್ಲಿಂಗ್ ಹಾಗೂ ರೋಮಾಂಚಕವಾಗಿರುತ್ತದೆ. ಈ ಸಮಯದಲ್ಲಿ ಚಳಿಯನ್ನು ಎಂಜಾಯ್ ಮಾಡಲು ಗಿರಿಧಾಮಗಳಿವೆ ಪ್ರವಾಸ ಹೋಗುವುದು ಸಾಮಾನ್ಯ. ಯಾಕೆಂದರೆ ಚಳಿಗಾಲದಲ್ಲಿ ಕಾಣ ಸಿಗುವ ಪ್ರಾಕೃತಿಕ ಸೌಂದರ್ಯ ಬೇರೆ ಯಾವ ಸೀಸನ್‌ನಲ್ಲೂ ಕಾಣಲು ಸಾಧ್ಯವಿಲ್ಲ. ಆದರೆ ಚಳಿಗಾಲದ ಪ್ರವಾಸವು ಮೋಜಿನಷ್ಟೇ ಕಠಿಣ ಹಾಗೂ ಅಪಾಯಕಾರಿಯೂ ಆಗಿರುತ್ತದೆ. ಚಳಿಗಾಲದ ಪ್ರವಾಸದಲ್ಲಿ ಸಕಲ ಸಿದ್ಧತೆ ಇಲ್ಲ ಎಂದರೆ ಆರೋಗ್ಯ ಕೆಡುವುದು ಖಂಡಿತ.  
icon

(1 / 8)

(freepik)

ಚಳಿಗಾಲದಲ್ಲಿ ಗಿರಿಧಾಮಗಳಿರುವ ಪ್ರದೇಶಗಳಲ್ಲಿ ತಾಪಮಾನ ಕುಸಿದಿರುತ್ತದೆ. ಅಂತಹ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗುವಾಗ ಸಕಲ ಸಿದ್ಧತೆ ಹಾಗೂ ಎಚ್ಚರಿಕೆ ವಹಿಸದಿದ್ದರೆ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಹಾಗಾಗಿ ಚಳಿಗಾಲದ ಪ್ರವಾಸಕ್ಕೆ ಹೋಗುವ ಮುನ್ನ ನಿಮ್ಮನ್ನು ನೀವು ಸಿದ್ಧ ಮಾಡಿಕೊಳ್ಳಬೇಕು. ಚಳಿಗಾಲದ ಪ್ರವಾಸಕ್ಕೆ ಹೋಗುವಾಗ ಮರೆಯದೇ ಈ ವಸ್ತುಗಳನ್ನು ನಿಮ್ಮ ಬ್ಯಾಗ್‌ನಲ್ಲಿ ಇರಿಸಿಕೊಳ್ಳಬೇಕು. 
icon

(2 / 8)

ಟೋಪಿ: ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗುವಾಗ ಬ್ಯಾಗ್‌ನಲ್ಲಿ ಟೋಪಿ ಇರಿಸಿಕೊಳ್ಳಲು ಮರೆಯದಿರಿ. ಯಾವ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದರೂ ಮರೆಯದೇ ಟೋಪಿ ಇರಿಸಿಕೊಳ್ಳಿ. ಟೋಪಿ ನಿಮ್ಮ ತಲೆಯನ್ನು ಶೀತ ಗಾಳಿಯಿಂದ ರಕ್ಷಿಸುವುದಲ್ಲದೆ  ತಲೆಯನ್ನು ಬೆಚ್ಚಗಾಗಿಸುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯಬಹುದು. ಏಕೆಂದರೆ ಚಳಿಗಾಲದಲ್ಲಿ ಶೀತದ ಅಲೆಯು ನಿಮಗೆ ಬಹಳಷ್ಟು ಹಾನಿ ಮಾಡುತ್ತದೆ. ಟೋಪಿಯು ನಿಮ್ಮ ಕಿವಿಗಳನ್ನು ಮುಚ್ಚುವಂತಿರಬೇಕು, ಆದ್ದರಿಂದ ತಂಪಾದ ಗಾಳಿಯು ಕಿವಿಗೆ ಪ್ರವೇಶಿಸುವುದಿಲ್ಲ. ಇದರಿಂದ ಶೀತ, ಜ್ವರ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. 
icon

(3 / 8)

ಬೆಚ್ಚಗಿನ ಬಟ್ಟೆ: ಚಳಿಗಾಲದ ಪ್ರವಾಸಕ್ಕೆ ಹೋಗುವ ಮೊದಲು ನಿಮ್ಮ ಬ್ಯಾಗ್‌ನಲ್ಲಿ ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ಪ್ಯಾಕ್ ಮಾಡಿ. ಚಳಿಗಾಲದಲ್ಲಿ ಸ್ವೆಟರ್‌, ಜಾಕೆಟ್‌ನಂತಹ ಬಟ್ಟೆಗಳನ್ನು ಧರಿಸುವುದರಿಂದ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜೊತೆಗೆ ಆರೋಗ್ಯವನ್ನೂ ರಕ್ಷಿಸಿಕೊಳ್ಳಬಹುದು. ಚಳಿಗಾಲದಲ್ಲಿ ಧರಿಸುವ ಬಟ್ಟೆಗಳು ಹಲವಾರು ಪದರಗಳನ್ನು ಹೊಂದಿರಬೇಕು. ಉದ್ದ ತೋಳಿನ ಶರ್ಟ್‌ಗಳು, ಉದ್ದ ತೋಳಿನ ಓವರ್‌ಕೋಟ್‌ಗಳು, ಸ್ವೆಟರ್‌ಗಳು, ಜಾಕೆಟ್‌ಗಳನ್ನು ತೆಗೆದುಕೊಳ್ಳಲು ಮರೆಯಬೇಡಿ. ತಂಪಾದ ಸ್ಥಳಗಳಲ್ಲಿ, ಹವಾಮಾನವು ಯಾವುದೇ ಸಮಯದಲ್ಲಿ ಕೆಡಬಹುದು. ಮಳೆ ಅಥವಾ ಹಿಮಪಾತ ಸಂಭವಿಸಬಹುದು. ಹಾಗಾಗಿ ವಾಟರ್ ಪ್ರೂಫ್ ಕೋಟ್ ಇಟ್ಟುಕೊಳ್ಳಲು ಮರೆಯಬೇಡಿ. 
icon

(4 / 8)

ವಾಟರ್ ಪ್ರೂಫ್‌ ಹ್ಯಾಂಡ್ ಗ್ಲೌಸ್‌: ಚಳಿಗಾಲದಲ್ಲಿ ಯಾವಾಗಲೂ ವಾಟರ್ ಪ್ರೂಫ್‌ ಹ್ಯಾಂಡ್ ಗ್ಲೌಸ್‌ ಧರಿಸುವುದನ್ನು ಮರೆಯಬಾರದು. ಪ್ರತಿಕೂಲ ಹವಾಮಾನವನ್ನು ಎದುರಿಸಲು ವಾಟರ್‌ಪ್ರೂಫ್ ಹ್ಯಾಂಡ್ ಗ್ಲೌಸ್‌ಗಳು ಅತಿ ಅವಶ್ಯ. ಈ ಹ್ಯಾಂಡ್‌ ಗ್ಲೌಸ್‌ಗಳು ಬೇಗ ಒಣಗುವಂತೆಯೂ ಇರಬೇಕು. 
icon

(5 / 8)

ಚಳಿಗಾಲದ ಬೂಟುಗಳು: ಚಳಿಗಾಲದಲ್ಲಿ ದೇಹವನ್ನ ರಕ್ಷಿಸಿಕೊಳ್ಳುವುದು ಮಾತ್ರವಲ್ಲ, ಪಾದಗಳನ್ನು ರಕ್ಷಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಪಾದಗಳನ್ನು ಹಿಮ, ಚಳಿಯಿಂದ ರಕ್ಷಿಸಿಕೊಳ್ಳಲು ಸೂಕ್ತ ಎನ್ನಿಸುವ ಬೂಟ್‌ಗಳನ್ನು ಕೂಡ ಧರಿಸಿ. ವಾಟರ್‌ ಫ್ರೂಪ್‌ ಬೂಟ್‌ಗಳು ಚಳಿಗಾಲದಲ್ಲಿ ಪಾದವನ್ನು ರಕ್ಷಿಸಿ, ದೇಹವನ್ನು ಬೆಚ್ಚಗಿರಿಸುತ್ತದೆ. ಚಳಿಗಾಲದಲ್ಲಿ ಮೊಣಕಾಲಿನವರೆಗೆ ಕವರ್ ಆಗುವ ಬೂಟ್ ಧರಿಸುವುದು ಉತ್ತಮ. 
icon

(6 / 8)

ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್‌: ಚಳಿಗಾಲದಲ್ಲಿ ತಪ್ಪದೇ ಇರಿಸಿಕೊಳ್ಳಬೇಕಾದ ವಸ್ತುಗಳಲ್ಲಿ ಮಾಯಿಶ್ಚರೈಸರ್ ಕ್ರೀಮ್ ಹಾಗೂ ಸನ್‌ಗ್ಲಾಸ್‌ಗಳು ಕೂಡ ಒಂದು. ಚಳಿಗಾಲದಲ್ಲೂ ಸನ್‌ಸ್ಕ್ರೀನ್ ಕ್ರೀಮ್ ಹಚ್ಚುವುದನ್ನು ಮರೆಯದಿರಿ. ಮಾಯಿಶ್ಚರೈಸರ್ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರೊಂದಿಗೆ ಕೆಲವು ಫಸ್ಟ್ ಏಡ್‌ ಔಷಧಿಗಳನ್ನೂ ಕೂಡ ನಿಮ್ಮ ಜೊತೆಗೆ ಇರಿಸಿಕೊಂಡಿರಬೇಕು. 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು