ಕನ್ನಡ ಸುದ್ದಿ  /  Photo Gallery  /  Tumkur News Trividha Dasohi Dr Shivakumara Swamiji 117th Jayanti Celebration At Siddaganag Muth Photos Esp

ತುಮಕೂರಿನ ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿ 117ನೇ ಜಯಂತಿ ಸಂಭ್ರಮ; ಫೋಟೊಸ್

  • ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 117ನೇ ಜನ್ಮ ಜಯಂತಿ, ಗುರುವಂದನಾ ಮಹೋತ್ಸವ ಸಿದ್ದಗಂಗಾ ಮಠದಲ್ಲಿ ಸಡಗರ,ಸಂಭ್ರಮದಿಂದ ಆಚರಿಸಲಾಗಿದೆ.

12ನೇ ಶತಮಾನದ ಬಸವಣ್ಣನವರ ತತ್ವಾದರ್ಶಗಳನ್ನು ಪಾಲನೆ ಮಾಡುತ್ತಾ ಸಮಾಜದ ಉದ್ಧಾರಕ್ಕೆ ಸದಾ ತುಡಿಯುತ್ತಿದ್ದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿಗೆ ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳು, ಗಣ್ಯಾತಿ ಗಣ್ಯರು ಹಾಗೂ ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದಾರೆ.
icon

(1 / 9)

ಶ್ರೀಮಠದ ಆವರಣದಲ್ಲಿ ಸ್ವಾಮೀಜಿಗಳ ಪ್ರತಿಮೆಯನ್ನು ರಥದಲ್ಲಿಟ್ಟು ಮರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಪೂರ್ಣಕುಂಭ ಕಳಸ ಹೊತ್ತ ಸುಮಂಗಲಿಯರು, ಹರಗುರುಚರಮೂರ್ತಿಗಳು, ಭಕ್ತಾದಿಗಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
icon

(2 / 9)

ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷ  ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, 108 ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ  ಪೂಜಾ ಕೈಂಕರ್ಯ, ಮಹಾ ಮಂಗಳಾರತಿ ನೆರವೇರಿತು.
icon

(3 / 9)

ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಗೆ ಹೂ, ಹಣ್ಣುಗಳಿಂದ ಅಲಂಕರಿಸಲಾಗಿತ್ತು.
icon

(4 / 9)

ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿಗಳ 117ನೇ ಜಯಂತಿ ಮಹೋತ್ಸವಕ್ಕೆ ಗಣ್ಯಾತಿ ಗಣ್ಯರು ಹಾಗೂ ಸಹಸ್ರಾರು ಭಕ್ತರು ಸಾಕ್ಷಿಯಾದರು.  
icon

(5 / 9)

ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಯ ದರ್ಶನ ಪಡೆದರು.
icon

(6 / 9)

ತುಕಮೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ್ ಅವರು ಕೂಡ ಗದ್ದುಗೆಯ ದರ್ಶನ ಪಡೆದರು.
icon

(7 / 9)

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಮಂಜುನಾಥ್, ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಕೂಡ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಶ್ರೀಗಳ ಗದ್ದುಗೆಯ ದರ್ಶನ ಮಾಡಿದರು.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್.. ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
icon

(9 / 9)

ಇತರ ಗ್ಯಾಲರಿಗಳು