Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರಾ ಮಹೋತ್ಸವಕ್ಕೆ ಬಂದ ಬಗೆಬಗೆಯ ರಾಸುಗಳು, ಪ್ರದರ್ಶನ ಮಾರಾಟಕ್ಕೆ ಅನ್ನದಾತರು ಅಣಿ
- Tumkur Siddaganga Jatre 2025: ತುಮಕೂರು ಸಿದ್ದಗಂಗಾ ಮಠದ ಜಾತ್ರೆಗೆ ಈ ಬಾರಿ ಬಗೆಬಗೆಯ ರಾಸುಗಳು ಬಂದಿವೆ. ರಾಸುಗಳ ಆಲಂಕಾರವೂ ಆಕರ್ಷಕವಾಗಿದೆ. ಇದರ ಚಿತ್ರನೋಟ ಇಲ್ಲಿದೆ.
- Tumkur Siddaganga Jatre 2025: ತುಮಕೂರು ಸಿದ್ದಗಂಗಾ ಮಠದ ಜಾತ್ರೆಗೆ ಈ ಬಾರಿ ಬಗೆಬಗೆಯ ರಾಸುಗಳು ಬಂದಿವೆ. ರಾಸುಗಳ ಆಲಂಕಾರವೂ ಆಕರ್ಷಕವಾಗಿದೆ. ಇದರ ಚಿತ್ರನೋಟ ಇಲ್ಲಿದೆ.
(1 / 10)
ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ವೈಭವದಲ್ಲಿ ರಾಸುಗಳ ಪ್ರದರ್ಶನ ಹಾಗೂ ಮಾರಾಟವೂ ಹೆಸರುವಾಸಿ. ಈ ಬಾರಿಯೂ ಜಾತ್ರೆಯ ಹತ್ತು ಹಲವು ರೀತಿಯ ರಾಸುಗಳು ಬಂದಿವೆ.
(Manu doddamane)(2 / 10)
ತುಮಕೂರು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಇಲ್ಲಿ ವಿಶೇಷ ಶಾಮೀಯಾನದೊಂದಿಗೆ ಅಲಂಕಾರಕ್ಕೆ ಇರಿಸಿದ್ದಾರೆ.
(Manu doddamane)(3 / 10)
ತುಮಕೂರಿನ ಸಿದ್ದಗಂಗಾ ಜಾನುವಾರುಗಳ ಜಾತ್ರೆವೇಳೆ ಲಕ್ಷ ಲಕ್ಷ ರೂಪಾಯಿ ವ್ಯವಹಾರ ಕೂಡ ನಡೆಯುತ್ತದೆ. 30 ಸಾವಿರದಿಂದ ಲಕ್ಷ ರೂಪಾಯಿವರೆಗೂ ದನಗಳ ಮಾರಾಟವಾಗುವುದು ವಿಶೇಷ.
(Manu doddamane)(4 / 10)
ತುಮಕೂರು ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವದ ದನಗಳ ಪರಿಷೆಗೆ ಬಂದಿರುವ ರಾಸುಗಳನ್ನು ಮಠದ ಎದುರಿನಿಂದ ಮೆರವಣಿಗೆಯಲ್ಲಿ ತಂದ ರೈತರು.
(Manu doddamane)(5 / 10)
ಐದಾರು ದಶಕಗಳ ಇತಿಹಾಸವಿರುವ ಶಿವರಾತ್ರಿ ಹಬ್ಬಕ್ಕೂ 10-15 ದಿನಗಳ ಮುಂಚೆ ಆರಂಭವಾಗೋ ಜಾತ್ರೆಗೆ ಕರ್ನಾಟಕದ ಹಲವು ಭಾಗಗಳಿಂದಲೂ ಜನ ಬರ್ತಾರೆ. ಭರ್ಜರಿ ದನಗಳ ಪರಿಷೆಯಲ್ಲಿ ವ್ಯಾಪಾರ-ವಹಿವಾಟು ಚೆನ್ನಾಗಿರುತ್ತದೆ.
(6 / 10)
ಈ ಸಾಲಿನ ಕೃಷಿ ಕಾಯಕ ಆರಂಭಿಸುವ ಮೊದಲು ತುಮಕೂರು ಜಾತ್ರೆಯಲ್ಲಿ ಹೊಸ ರಾಸು ಖರೀದಿಸುವುದು ಈ ಭಾಗದವರಲ್ಲಿದೆ. ವಿಭಿನ್ನ ರಾಸುಗಳು ಇಲ್ಲಿಗೆ ಬರುತ್ತವೆ ಎನ್ನುವ ಕಾರಣದಿಂದಲೂ ರೈತರು ಇಲ್ಲಿಗೆ ಬರುತ್ತಾರೆ.
(7 / 10)
ಪರಿಷೆಯಲ್ಲಿ ದನಗಳ ವಯಸ್ಸು, ಹಲ್ಲು, ಆಕಾರ, ಶರೀರ ಎಲ್ಲವನ್ನೂ ನೋಡಿ ಹಣವನ್ನ ನಿಗದಿಮಾಡಲಾಗುತ್ತದೆ. ಈ ಬಾರಿಯೂ ಎಳೆಯ ಜೋಡಿಗಳು ಇಲ್ಲಿವೆ ಬಂದಿವೆ.
(8 / 10)
ಜಾತ್ರೆ ವೇಳೆ ಸಿದ್ದಗಂಗಾ ಮಠದ ಆವರಣದಲ್ಲಿ ರಾಸುಗಳಿಗೆ ಶಾಮೀಯಾನ ಹಾಕಿ ಹುಲ್ಲು. ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ.
(9 / 10)
ಸಿದ್ದಗಂಗಾ ಮಠದ ಜಾತ್ರೆಯ ದನಗಳ ಪರಿಷೆ ವೇಳೆ ರಾಸುಗಳಿಗೆ ಬಳಸುವ ಅಲಂಕಾರಿಕ ವಸ್ತುಗಳ ಮಾರಾಟವೂ ಜೋರಾಗಿರುತ್ತದೆ.
ಇತರ ಗ್ಯಾಲರಿಗಳು