ಕನ್ನಡ ಸುದ್ದಿ  /  Photo Gallery  /  Turkey Earthquake Death Toll Passes 21,000

Turkey-Syria earthquake: ಭೂಕಂಪಕ್ಕೆ ಅಕ್ಷರಶಃ ನಲುಗಿದ ಟರ್ಕಿ-ಸಿರಿಯಾ: 21,000 ಗಡಿ ದಾಟಿದ ಮೃತರ ಸಂಖ್ಯೆ

  • ಭೀಕರ ಸರಣಿ ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ದೇಶಗಳು ತತ್ತರಿಸಿವೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈವರೆಗೆ 21,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇನ್ನೂ ಸಾವಿರಾರು ಜನರು ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಟರ್ಕಿಯಲ್ಲಿ 17,674 ಮತ್ತು ಸಿರಿಯಾದಲ್ಲಿ 3,377 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 21,051 ಆಗಿದೆ. 
icon

(1 / 6)

ಅಧಿಕೃತ ಅಂಕಿಅಂಶಗಳ ಪ್ರಕಾರ, ಟರ್ಕಿಯಲ್ಲಿ 17,674 ಮತ್ತು ಸಿರಿಯಾದಲ್ಲಿ 3,377 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 21,051 ಆಗಿದೆ. (AFP)

ಟರ್ಕಿಯಲ್ಲಿ 72, 879 ಮಂದಿ ಗಾಯಗೊಂಡಿದ್ದರೆ, ಸಿರಿಯಾದಲ್ಲಿ 5,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಅನೇಕ ಆಸ್ಪತ್ರೆಗಳು ಕುಸಿದು ಬಿದ್ದಿದ್ದು, ಚಿಕಿತ್ಸೆ ಕೊಡಿಸಲೂ ಪರದಾಡುವಂತಾಗಿದೆ.
icon

(2 / 6)

ಟರ್ಕಿಯಲ್ಲಿ 72, 879 ಮಂದಿ ಗಾಯಗೊಂಡಿದ್ದರೆ, ಸಿರಿಯಾದಲ್ಲಿ 5,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಅನೇಕ ಆಸ್ಪತ್ರೆಗಳು ಕುಸಿದು ಬಿದ್ದಿದ್ದು, ಚಿಕಿತ್ಸೆ ಕೊಡಿಸಲೂ ಪರದಾಡುವಂತಾಗಿದೆ.(AFP)

ನಾಲ್ಕನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
icon

(3 / 6)

ನಾಲ್ಕನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.(AFP)

ಸರ್ಕಾರದ ಅಂಕಿಅಂಶಗಳ ಪ್ರಕಾರ, 7 ನಗರಗಳಲ್ಲಿ 3 ಸಾವಿರ ಕಟ್ಟಡಗಳು ಧರೆಗುರುಳಿದ್ದು, ಎರಡೂ ರಾಷ್ಟ್ರಗಳ ಚಿತ್ರಣ ಸಂಪೂರ್ಣ ಬದಲಾಗಿದೆ. ಅವಶೇಷಗಳಡಿ ಸಿಲುಕಿ ಜನರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇವರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. 
icon

(4 / 6)

ಸರ್ಕಾರದ ಅಂಕಿಅಂಶಗಳ ಪ್ರಕಾರ, 7 ನಗರಗಳಲ್ಲಿ 3 ಸಾವಿರ ಕಟ್ಟಡಗಳು ಧರೆಗುರುಳಿದ್ದು, ಎರಡೂ ರಾಷ್ಟ್ರಗಳ ಚಿತ್ರಣ ಸಂಪೂರ್ಣ ಬದಲಾಗಿದೆ. ಅವಶೇಷಗಳಡಿ ಸಿಲುಕಿ ಜನರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇವರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. (AP)

2011ರಲ್ಲಿ ಜಪಾನ್​ನ ಫುಕುಶಿಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 18,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇದಕ್ಕಿಂತ ಭೀಕರ ಪರಿಸ್ಥಿತಿ ಟರ್ಕಿಗೆ ಬಂದೊದಗಿದೆ.   
icon

(5 / 6)

2011ರಲ್ಲಿ ಜಪಾನ್​ನ ಫುಕುಶಿಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 18,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇದಕ್ಕಿಂತ ಭೀಕರ ಪರಿಸ್ಥಿತಿ ಟರ್ಕಿಗೆ ಬಂದೊದಗಿದೆ.   (REUTERS)

ವಿಪರೀತ ಚಳಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಹೊಟ್ಟೆಗೆ ಊಟ ಸಿಗದೆ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಟರ್ಕಿಯ ಸಹಾಯಕ್ಕೆ ಬಂದಿವೆ. 
icon

(6 / 6)

ವಿಪರೀತ ಚಳಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಹೊಟ್ಟೆಗೆ ಊಟ ಸಿಗದೆ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಟರ್ಕಿಯ ಸಹಾಯಕ್ಕೆ ಬಂದಿವೆ. (REUTERS)


ಇತರ ಗ್ಯಾಲರಿಗಳು