ಕನ್ನಡ ಸುದ್ದಿ  /  Photo Gallery  /  Turkey-syria Earthquake: Death Toll Crosses 24,000; Rescue Operation Continues

Turkey-Syria Earthquake: ಸ್ಮಶಾನದಂತಾದ ಟರ್ಕಿ-ಸಿರಿಯಾ: ಮೃತರ ಸಂಖ್ಯೆ 24,000ಕ್ಕೆ ಏರಿಕೆ.. PHOTOS

  • ಭೂಕಂಪದ ಆಘಾತದಿಂದ ಹೊರಬರಲು ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳಿಗೆ ಸಾಧ್ಯವಾಗುತ್ತಿಲ್ಲ. ಸುಂದರವಾಗಿದ್ದ ರಾಷ್ಟ್ರಗಳು ಈಗ ಸ್ಮಶಾನದಂತಾಗಿದೆ. ಮೃತರ ಸಂಖ್ಯೆ 24,000ಕ್ಕೆ ಏರಿಕೆಯಾಗಿದೆ. ಭೂಕಂಪದಿಂದ ಸಿರಿಯಾದಲ್ಲೇ 5.3 ಮಿಲಿಯನ್ (53 ಲಕ್ಷ) ಜನರು ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 80 ವರ್ಷಗಳ ಹಿಂದೆ, 1939 ರಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನದಲ್ಲಿ 33,000 ಜನರು ಸಾವನ್ನಪ್ಪಿದ್ದರು. ಇದೀಗ ಅಂತಹದ್ದೇ ದುಸ್ಥಿತಿ ಬಂದೊದಗಿದೆ.

ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈವರೆಗೆ ಭೀಕರ ಭೂಕಂಪದಲ್ಲಿ 24 ಸಾವಿರ ಜನರು ಸಾವನ್ನಪ್ಪಿದ್ದಾರೆ.  75 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  
icon

(1 / 6)

ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈವರೆಗೆ ಭೀಕರ ಭೂಕಂಪದಲ್ಲಿ 24 ಸಾವಿರ ಜನರು ಸಾವನ್ನಪ್ಪಿದ್ದಾರೆ.  75 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  (AFP)

ಕಹ್ರಾಮನ್ಮರಸ್ ಪ್ರದೇಶದಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ.
icon

(2 / 6)

ಕಹ್ರಾಮನ್ಮರಸ್ ಪ್ರದೇಶದಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ.(AFP)

ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಟರ್ಕಿಯ ಬೆಂಬಲಕ್ಕೆ ನಿಂತಿವೆ. ವಿವಿಧ ರೀತಿಯಲ್ಲಿ ಸಹಾಯವನ್ನು ಮಾಡುತ್ತಿವೆ.
icon

(3 / 6)

ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಟರ್ಕಿಯ ಬೆಂಬಲಕ್ಕೆ ನಿಂತಿವೆ. ವಿವಿಧ ರೀತಿಯಲ್ಲಿ ಸಹಾಯವನ್ನು ಮಾಡುತ್ತಿವೆ.(AFP)

ಸಿರಿಯಾದಲ್ಲಿ ಭೂಕಂಪದಿಂದಾಗಿ 5.3 ಮಿಲಿಯನ್ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಸಿರಿಯಾ ದೇಶದ ಪ್ರತಿನಿಧಿ ಹೇಳಿದ್ದಾರೆ.
icon

(4 / 6)

ಸಿರಿಯಾದಲ್ಲಿ ಭೂಕಂಪದಿಂದಾಗಿ 5.3 ಮಿಲಿಯನ್ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಸಿರಿಯಾ ದೇಶದ ಪ್ರತಿನಿಧಿ ಹೇಳಿದ್ದಾರೆ.(AFP)

ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದ ಪ್ರಾಣ ಕಳೆದುಕೊಂಡವರ ಅಂತ್ಯಕ್ರಿಯೆ ನಡೆಯುತ್ತಿರುವುದು ಹೀಗೆ.
icon

(5 / 6)

ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದ ಪ್ರಾಣ ಕಳೆದುಕೊಂಡವರ ಅಂತ್ಯಕ್ರಿಯೆ ನಡೆಯುತ್ತಿರುವುದು ಹೀಗೆ.(AP)

ಅವಶೇಷಗಳಡಿ ಮೃತದೇಹಗಳು ಪತ್ತೆಯಾಗುತ್ತಲೇ ಇದೆ. ಐದು ದಿನಗಳಿಂದ ಅವಶೇಷಗಳಡಿ ಸಿಲುಕಿದ್ದ ಕೆಲವರು, ಅದರಲ್ಲಿಯೂ ಪುಟ್ಟ ಕಂದಮ್ಮಗಳು ಪವಾಡವೆಂಬಂತೆ ಬದುಕುಳಿದಿದ್ದು, ಅವರನ್ನು ರಕ್ಷಿಸಲಾಗುತ್ತಿದೆ. 
icon

(6 / 6)

ಅವಶೇಷಗಳಡಿ ಮೃತದೇಹಗಳು ಪತ್ತೆಯಾಗುತ್ತಲೇ ಇದೆ. ಐದು ದಿನಗಳಿಂದ ಅವಶೇಷಗಳಡಿ ಸಿಲುಕಿದ್ದ ಕೆಲವರು, ಅದರಲ್ಲಿಯೂ ಪುಟ್ಟ ಕಂದಮ್ಮಗಳು ಪವಾಡವೆಂಬಂತೆ ಬದುಕುಳಿದಿದ್ದು, ಅವರನ್ನು ರಕ್ಷಿಸಲಾಗುತ್ತಿದೆ. (AP)


ಇತರ ಗ್ಯಾಲರಿಗಳು