U19 World Cup: ಭಾರತ-ಪಾಕಿಸ್ತಾನಕ್ಕೆ ಸೆಮಿಫೈನಲ್ ಟಿಕೆಟ್ ಬಹುತೇಕ ಖಚಿತ; ಹೀಗಿದೆ ಅಂಡರ್ 19 ವಿಶ್ವಕಪ್ ಅಂಕಪಟ್ಟಿ
- ICC U19 Cricket World Cup Super Six Points Table: ಅಂಡರ್ 19 ವಿಶ್ವಕಪ್‌ನಲ್ಲಿ ಸೂಪರ್ ಸಿಕ್ಸ್ ಹಂತದ ಪಂದ್ಯಗಳು ಆರಂಭವಾಗಿದೆ. ಗ್ರೂಪ್ ಒಂದರ ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಇದರೊಂದಿಗೆ ಏಷ್ಯಾದ ದೇಶಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕೂಡಾ ಒಂದೇ ಗುಂಪಿನಲ್ಲಿ ಹೋರಾಡುತ್ತಿದೆ.
- ICC U19 Cricket World Cup Super Six Points Table: ಅಂಡರ್ 19 ವಿಶ್ವಕಪ್‌ನಲ್ಲಿ ಸೂಪರ್ ಸಿಕ್ಸ್ ಹಂತದ ಪಂದ್ಯಗಳು ಆರಂಭವಾಗಿದೆ. ಗ್ರೂಪ್ ಒಂದರ ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಇದರೊಂದಿಗೆ ಏಷ್ಯಾದ ದೇಶಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕೂಡಾ ಒಂದೇ ಗುಂಪಿನಲ್ಲಿ ಹೋರಾಡುತ್ತಿದೆ.
(1 / 5)
ಕಿರಿಯರ ವಿಶ್ವಕಪ್ ಗ್ರೂಪ್ ಹಂತದಲ್ಲಿ ಭಾರತ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿತು. ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಅಮೆರಿಕ ವಿರುದ್ಧದ ಗೆಲುವಿನೊಂದಿಗೆ ಭಾರತ ಯುವ ತಂಡವು ಮೂರು ಪಂದ್ಯಗಳಲ್ಲಿ 6 ಅಂಕಗಳೊಂದಿಗೆ ಎ-ಗ್ರೂಪ್‌ನಲ್ಲಿ ನಂಬರ್ ವನ್ ತಂಡವಾಗಿ ಸೂಪರ್ ಸಿಕ್ಸ್ ಸುತ್ತಿಗೆ ಪ್ರವೇಶಿಸಿತು. ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದವೂ ಭರ್ಜರಿ ಜಯ ಸಾಧಿಸಿತು. ಮುಂದೆ ತಂಡ ನೇಪಾಳ ವಿರುದ್ಧ ಹೋರಾಡಬೇಕಿದೆ. ಕಿವೀಸ್ ವಿರುದ್ಧದ ಗೆಲುವಿನೊಂದಿಗೆ ಭಾರತವು ಸೆಮಿಫೈನಲ್‌ಗೆ ಒಂದು ಹೆಜ್ಜೆ ಸನಿಹವಾಗಿದೆ.
(2 / 5)
ಗ್ರೂಪ್ ಲೀಗ್‌ನಲ್ಲಿ ಭಾರತ 6 ಅಂಕ ಕಲೆಹಾಕಿದರೂ ಆ ಏಲ್ಲಾ 6 ಅಂಕಗಳೊಂದಿಗೆ ಸೂಪರ್ ಸಿಕ್ಸ್ ಸುತ್ತಿಗೆ ಪರಿಗಣಿಸಲಾಗುವುದಿಲ್ಲ. ಗುಂಪು ಹಂತದಿಂದ ಹೊರಗುಳಿದ ತಂಡಗಳ ವಿರುದ್ಧ ಗಳಿಸಿದ ಅಂಕಗಳನ್ನು ಸೂಪರ್ ಸಿಕ್ಸ್‌ಗೆ ಪರಿಗಣಿಸಲಾಗುವುದಿಲ್ಲ. ಭಾರತವು ಅಮೆರಿಕವನ್ನು ಸೋಲಿಸಿ ಸಂಗ್ರಹಿಸಿದ 2 ಪಾಯಿಂಟ್‌ಗಳನ್ನು ಭಾರತ ಸೂಪರ್ ಸಿಕ್ಸ್‌ಗೆ ಲೆಕ್ಕಕ್ಕಿಲ್ಲ. ಭಾರತದೊಂದಿಗೆ ಎ ಗುಂಪಿನಿಂದ ಸೂಪರ್ ಸಿಕ್ಸ್‌ಗೆ ಪ್ರವೇಶಿಸಿದ ಇತರ ಎರಡು ತಂಡಗಳ ವಿರುದ್ಧ ಗಳಿಸಿದ ಅಂಕಗಳೊಂದಿಗೆ ಸೂಪರ್ ಸಿಕ್ಸ್ ಸುತ್ತಿಗೆ ಪ್ರವೇಶಿಸಿತು. ಅಂದರೆ, ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡವನ್ನು ಸೋಲಿಸಿ 4 ಅಂಕಗಳೊಂದಿಗೆ ಭಾರತ ಭಾರತ ಸೂಪರ್ ಸಿಕ್ಸ್ ಅಭಿಯಾನ ಆರಂಭಿಸಿತು.
(3 / 5)
ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ 2 ಅಂಕ ಕಲೆಹಾಕಿತು. ಈಗ ತಂಡದ ಅಂಕವು 3 ಪಂದ್ಯಗಳಲ್ಲಿ 6 ಅಂಕಗಳು. ತಂಡದ ನಿವ್ವಳ ರನ್ ರೇಟ್ +3.327. ಭಾರತ ಪ್ರಸ್ತುತ ಸೂಪರ್ ಸಿಕ್ಸ್‌ನ ಗುಂಪು 1ರಲ್ಲಿ ಅಗ್ರಸ್ಥಾನದಲ್ಲಿದೆ. ಸೂಪರ್ ಸಿಕ್ಸ್‌ನಲ್ಲಿ ಭಾರತದ ಕೊನೆಯ ಪಂದ್ಯವು ನೇಪಾಳ ವಿರುದ್ಧ ಇರಲಿದೆ. ಆ ಪಂದ್ಯದಲ್ಲಿ ಗೆದ್ದರೆ ಭಾರತದ ಅಂಕ 8 ಆಗಲಿದೆ.
(4 / 5)
ಗ್ರೂಪ್ ಲೀಗ್‌ನಿಂದ 4 ಅಂಕಗಳೊಂದಿಗೆ ಸೂಪರ್ ಸಿಕ್ಸ್ ತಲುಪಿದ್ದ ಪಾಕಿಸ್ತಾನ, ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿತು. ಹಾಗಾಗಿ ಭಾರತದಂತೆ ಪಾಕಿಸ್ತಾನ ಕೂಡ 3 ಪಂದ್ಯಗಳಿಂದ 6 ಅಂಕ ಕಲೆಹಾಕಿದೆ. ಆದರೆ, ನಿವ್ವಳ ರನ್-ರೇಟ್‌ನಲ್ಲಿ ಪಾಕ್ ಭಾರತಕ್ಕಿಂತ ಹಿಂದುಳಿದಿದೆ. ಪಾಕಿಸ್ತಾನದ ನಿವ್ವಳ ರನ್-ರೇಟ್ +1.064 ಆಗಿದೆ. ಪಾಕಿಸ್ತಾನವು ಪ್ರಸ್ತುತ ಸೂಪರ್ ಸಿಕ್ಸ್‌ನ ಗುಂಪು 1ರಲ್ಲಿ ಭಾರತದ ನಂತರ ಎರಡನೇ ಸ್ಥಾನದಲ್ಲಿದೆ. ಅದು ಸೂಪರ್ ಸಿಕ್ಸ್ ಸುತ್ತಿನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದೆ. (PCB)
(5 / 5)
ಬಾಂಗ್ಲಾದೇಶವು 2 ಅಂಕಗಳೊಂದಿಗೆ ಸೂಪರ್ ಸಿಕ್ಸ್ ಸುತ್ತಿಗೆ ತಲುಪಿತು. ತಂಡವು ಬುಧವಾರ ಸೂಪರ್ ಸಿಕ್ಸ್ ಪಂದ್ಯದಲ್ಲಿ ನೇಪಾಳವನ್ನು ಎದುರಿಸಲಿದೆ. ಬಳಿಕ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ಸೂಪರ್ ಸಿಕ್ಸ್‌ನ 2 ಪಂದ್ಯಗಳನ್ನು ಗೆದ್ದರೆ ಬಾಂಗ್ಲಾದೇಶ 6 ಅಂಕ ಪಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಈಗಾಗಲೇ 6 ಅಂಕಗಳೊಂದಿಗೆ ಮುಂದಿವೆ. ಹೀಗಾಗಿ ಬಾಂಗ್ಲಾದೇಶವು ನೇಪಾಳ ಅಥವಾ ಪಾಕಿಸ್ತಾನದ ವಿರುದ್ಧ ಯಾವುದೇ 1 ಪಂದ್ಯದಲ್ಲಿ ಸೋತರೂ, ಭಾರತವು ಕೊನೆಯ ಪಂದ್ಯವನ್ನು ಗೆಲ್ಲದಿದ್ದರೂ ಸಹ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಡುತ್ತದೆ. ಏಕೆಂದರೆ ಗುಂಪಿನ ಉಳಿದ ಮೂರು ತಂಡಗಳು 6 ಅಂಕಗಳನ್ನುಕಲೆ ಹಾಕಲು ಸಾಧ್ಯವಿಲ್ಲ. ಹೀಗಾಗಿ ಬುಧವಾರ ಬಾಂಗ್ಲಾದೇಶ ಸೋತರೆ, ಭಾರತ ಮತ್ತು ಪಾಕಿಸ್ತಾನ ತಂಡಗಳು ಗುಂಪು ಒಂದರಿಂದ ಸೆಮಿಫೈನಲ್ ತಲುಪುವುದು ಖಚಿತ. (BCB)
ಇತರ ಗ್ಯಾಲರಿಗಳು