ಸಹರಾನ್, ಮುಶೀರ್‌, ಲಿಂಬಾನಿ...; ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಸಿಕ್ಕ 5 ಸ್ಟಾರ್ ಆಟಗಾರರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಹರಾನ್, ಮುಶೀರ್‌, ಲಿಂಬಾನಿ...; ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಸಿಕ್ಕ 5 ಸ್ಟಾರ್ ಆಟಗಾರರು

ಸಹರಾನ್, ಮುಶೀರ್‌, ಲಿಂಬಾನಿ...; ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಸಿಕ್ಕ 5 ಸ್ಟಾರ್ ಆಟಗಾರರು

  • U19 World Cup 2024: 2024ರ ಅಂಡರ್19 ವಿಶ್ವಕಪ್ ಪಂದ್ಯಾವಳಿ ಮುಕ್ತಾಯಗೊಂಡಿದೆ. ಫೈನಲ್‌ ಪಂದ್ಯದಲ್ಲಿ ಭಾರತವನ್ನು 79 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಆದರೆ, ಭಾರತದ ಯುವ ಆಟಗಾರರ ಪ್ರದರ್ಶನ ಭಾರತೀಯರ ಮನ ಗೆದ್ದಿದೆ. ಟೂರ್ನಿ ಮೂಲಕ ಭಾರತ ಕ್ರಿಕೆಟ್‌ ತಂಡವು ಕನಿಷ್ಠ 5 ಸ್ಟಾರ್‌ ಆಟಗಾರರನ್ನು ಪಡೆದಿದೆ.

ಅಂಡರ್‌ 19 ವಿಶ್ವಕಪ್‌ ಮೂಲಕ ಭಾರತದ ಈ ಐವರು ಆಟಗಾರರು ಅವಕಾಶ ಸಿಕ್ಕರೆಹಿರಿಯರ ತಂಡದಲ್ಲಿ ಪ್ರಾಬಲ್ಯ ಸಾಧಿಸಲಿದ್ದಾರೆ.
icon

(1 / 6)

ಸಚಿನ್ ದಾಸ್- ಸಚಿನ್ ದಾಸ್ ಅಂಡರ್‌ 19 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಮೆಚ್ಚುಗೆಗೆ ಪಾತ್ರರಾದರ. ದಾಸ್ ಆಡಿದ 7 ಪಂದ್ಯಗಳಲ್ಲಿ 60ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ 303 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 1 ಅರ್ಧ ಶತಕ ಸೇರಿದೆ.
icon

(2 / 6)

ಮುಶೀರ್ ಖಾನ್- ಮುಶೀರ್ ಖಾನ್ ಅಂಡರ್ 19 ವಿಶ್ವಕಪ್‌ನಲ್ಲಿ‌ ಭಾರಿ ಹೆಸರು ಗಳಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮುಶೀರ್ ಎರಡನೇ ಸ್ಥಾನದಲ್ಲಿದ್ದಾರೆ. ಸರ್ಫರಾಜ್‌ ಖಾನ್‌ ತಮ್ಮ 6 ಇನ್ನಿಂಗ್ಸ್‌ಗಳಲ್ಲಿ 360 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ ಅರ್ಧಶತಕ ಸೇರಿದೆ.
icon

(3 / 6)

ರಾಜ್ ಲಿಂಬಾನಿ- ಭಾರತದ U-19 ವೇಗದ ಬೌಲರ್ ರಾಜ್ ಲಿಂಬಾನಿ ಭುವನೇಶ್ವರ್ ಕುಮಾರ್ ಅವರ ಲೈನ್, ಲೆಂಗ್ತ್ ಮತ್ತು ಸ್ವಿಂಗ್‌ ನೆನಪಿಸುತ್ತಿದ್ದಾರೆ. ಭುವಿಯಂತೆಯೇ ಚೆಂಡನ್ನು ಒಳಗೆ ಮತ್ತು ಹೊರಗೆ ಸ್ವಿಂಗ್ ಮಾಡಬಲ್ಲ ಚಾಕಚಕ್ಯತೆ ಇವರಲ್ಲಿದೆ. ಲಿಂಬಾನಿಗೆ ಈ ವಿಶ್ವಕಪ್ ತುಂಬಾ ವಿಶೇಷವಾಗಿತ್ತು. ಅವರು 6 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
icon

(4 / 6)

ಉದಯ್ ಸಹರಾನ್- ಭಾರತ ಅಂಡರ್‌ 19 ತಂಡದ ನಾಯಕ ಉದಯ್ ಸಹರಾನ್, ಪಂದ್ಯಾವಳಿಯಲ್ಲಿ ಸ್ಟ್ಯಾಂಡಿಂಗ್‌ ಪ್ರದರ್ಶನ ನೀಡಿದ್ದಾರೆ. ಟೂರ್ನಿಯುದ್ದಕ್ಕೂ ನಾಯಕನಾಗಿ ತಂಡವನ್ನು ಮುನ್ನಡೆಸಿದ ಆಟಗಾರ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು 7 ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 397 ರನ್ ಗಳಿಸಿದರು. ಇದರಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳು ಸೇರಿವೆ.
icon

(5 / 6)

ಸೌಮಿ ಪಾಂಡೆ- ಎಡಗೈ ಸ್ಪಿನ್ನರ್ ಸೌಮಿ ಪಾಂಡೆ ಅಂಡರ್‌ 19 ವಿಶ್ವಕಪ್‌ನಲ್ಲಿ ತಮ್ಮ ಮಾಂತ್ರಿಕ ಬೌಲಿಂಗ್‌ನಿಂದ ಪ್ರಭಾವಿತರಾಗಿದ್ದಾರೆ. ಅವರು ಆಡಿದ 7 ಪಂದ್ಯಗಳಲ್ಲಿ 18 ವಿಕೆಟ್ ಪಡೆದರು. ಇವರು ಕೂಡಾ ಶೀಘ್ರದಲ್ಲೇ ಟೀಮ್‌ ಇಂಡಿಯಾ ಕದ ತಟ್ಟಲಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು