Uddhav VS Eknath: ಭಿನ್ನ ದಸರಾ ರ‍್ಯಾಲಿ: ಉದ್ಧವ್ VS ಏಕನಾಥ್ ನಡುವಿನ ಸ್ಪರ್ಧೆ ತಾರಕಕ್ಕೆ!
- ಮುಂಬೈ: ಶಿವಸೇನೆ ಪಕ್ಷ ಸ್ಥಾಪನೆಯಾಗಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಪಕ್ಷದ ಎರಡು ಭಿನ್ನ ಬಣಗಳಿಂದ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಈ ಬಾರಿ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜಿಸಿವೆ. ಈ ಕುರಿತಾದ ಮಾಹಿತಿ ಇಲ್ಲಿದೆ.

(1 / 5)
ಇಂದು(ಅ.5-ಬುಧವಾರ) ಸಂಜೆ ಶಿವಸೇನೆಯ ಎರಡು ಬಣಗಳಿಂದ ಪ್ರತ್ಯೇಕ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಎರಡೂ ಬಣಗಳ ಸಿದ್ಧತೆ ಜೋರಾಗಿದ್ದು, ಪರಸ್ಪರ ಸ್ಪರ್ಧೆಗಿಳಿಯುವಂತೆ ಸಮಾರಂಭವನ್ನು ಆಯೋಜಿಸಿವೆ. ಈ ಬಾರಿಯ ದಸರಾ ರ‍್ಯಾಲಿಯನ್ನು ಉದ್ಧವ್ ಠಾಕೆ ಮತ್ತು ಏಕನಾಥ್ ಶಿಂಧೆ ಬಣ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಳ್ಳಲಿವೆ.(ANI)
(2 / 5)
ಮುಂಬೈನ ಶಿವಾಜಿ ಪಾರ್ಕ್ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಬಿಕೆಸಿ) ಸೇನಾ ಬಣಗಳ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಎರಡೂ ಸಮಾರಂಭಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರುವುದರಿಂದ, ಮುಂಬೈ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.(ANI)
(3 / 5)
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣ ಪ್ರತ್ಯೇಕ ದಸರಾ ರ‍್ಯಾಲಿಗಾಗಿ, 5,000 ಕ್ಕೂ ಹೆಚ್ಚು ಬಸ್‌ಗಳು, ಹಲವಾರು ಸಣ್ಣ ಪ್ರವಾಸಿ ವಾಹನಗಳು ಮತ್ತು ಕಾರುಗಳು ಮತ್ತು ವಿಶೇಷ ರೈಲುಗಳ ವ್ಯವಸ್ಥೆ ಮಾಡಿವೆ.(ANI)
(4 / 5)
ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ದಸರಾ ರ‍್ಯಾಲಿ ಆಯೋಜಿಸಿದ್ದರೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಬಣ ದಸರಾ ರ‍್ಯಾಲಿ ಆಯೋಜಿಸಿದೆ. ಎರಡೂ ಸಭೆಗಳಿಗೆ ಭಾರೀ ಸಂಖ್ಯೆಯಲ್ಲಿ ಬೆಂಬಲಿಗರು ಸೇರಲಿರುವುದು ಖಚಿತವಾಗಿದೆ.(ANI)
ಇತರ ಗ್ಯಾಲರಿಗಳು