Krishna Janmastami2024:ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮ, ಹುಲಿವೇಷದ ಅಬ್ಬರ, ಕೃಷ್ಣನೂರಿನಲ್ಲಿ ಮಳೆಯ ನಡುವೆಯೂ ಉತ್ಸಾಹ
- ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಸೋಮವಾರ ಉಡುಪಿಯಲ್ಲಿ ಹಬ್ಬದ ಕಳೆ. ದೂರದೂರಿನಿಂದ ಆಗಮಿಸಿದ ಭಕ್ತಸಮೂಹದ ಜೊತೆ ಊರವರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲೆಲ್ಲೂ ಹುಲಿವೇಷದ ಗೌಜಿ. ತಾಸೆ ಪೆಟ್ಟಿನ ಸದ್ದು. ಅಲ್ಲಲ್ಲಿ ಬಾಲಕೃಷ್ಣ, ಮುದ್ದುಕೃಷ್ಣನ ಸ್ಪರ್ಧೆ.. ಕೃಷ್ಣನೂರಿನ ಮನೆಮನೆಗಳಲ್ಲಿ ಕೃಷ್ಣಜಯಂತಿಯ ಸಂಭ್ರಮ ಹೀಗಿತ್ತು.
- ಹರೀಶ ಮಾಂಬಾಡಿ, ಮಂಗಳೂರು
- ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಸೋಮವಾರ ಉಡುಪಿಯಲ್ಲಿ ಹಬ್ಬದ ಕಳೆ. ದೂರದೂರಿನಿಂದ ಆಗಮಿಸಿದ ಭಕ್ತಸಮೂಹದ ಜೊತೆ ಊರವರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲೆಲ್ಲೂ ಹುಲಿವೇಷದ ಗೌಜಿ. ತಾಸೆ ಪೆಟ್ಟಿನ ಸದ್ದು. ಅಲ್ಲಲ್ಲಿ ಬಾಲಕೃಷ್ಣ, ಮುದ್ದುಕೃಷ್ಣನ ಸ್ಪರ್ಧೆ.. ಕೃಷ್ಣನೂರಿನ ಮನೆಮನೆಗಳಲ್ಲಿ ಕೃಷ್ಣಜಯಂತಿಯ ಸಂಭ್ರಮ ಹೀಗಿತ್ತು.
- ಹರೀಶ ಮಾಂಬಾಡಿ, ಮಂಗಳೂರು
(1 / 7)
ಕೃಷ್ಣನಿಗೆ ವಿಶೇಷ ಪೂಜೆ////ಶ್ರೀಕೃಷ್ಣಜನ್ಮಾಷ್ಟಮಿ ಬಂತೆಂದರೆ, ತಾಯಂದಿರೆಲ್ಲಾ ತಮ್ಮ ಮಕ್ಕಳಿಗೆ ಕೃಷ್ಣವೇಷ ತೊಡಿಸಿಬಿಡುತ್ತಾರೆ. ದೇವರ ಅಲಂಕಾರದ ಜೊತೆಗೆ ಕೊಟ್ಟಿಗೆ, ಮೂಡೆ, ಪಾಯಸಗಳನ್ನು ತಯಾರಿಸಿ ಶ್ರೀಕೃಷ್ಣನಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಉಡುಪಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ನೇತೃತ್ವದಲ್ಲಿ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಶ್ರೀಕೃಷ್ಣನಿಗೆ ವಿಶೇಷ ಪೂಜೆ ನೆರವೇರಿಸಿ, ತುಳಸಿ ಮಾಲೆಯ ಅಲಂಕಾರವನ್ನು ಮಾಡಿದರು.
(2 / 7)
ಉಡುಪಿಯಲ್ಲಿ ಭಕ್ತಜನಸಾಗರ/// ಉಡುಪಿ ರಥಬೀದಿಯಲ್ಲಿ ನಾನಾ ಬಗೆಯ ಅಂಗಡಿ, ಮಾರಾಟ ಮಳಿಗಳನ್ನು ತೆರೆಯಲಾಗಿದ್ದು, ಅಷ್ಟಮಿ ನಿಮಿತ್ತವಾಗಿ ವಿವಿಧ ಬಗೆಯ ಹೂವಿನ ಮಾರಾಟವೂ ಜೋರಾಗಿ ನಡೆಯುತ್ತಿದೆ. ಕೃಷ್ಣಮಠಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.
(3 / 7)
ಮಳೆಯ ನಡುವೆಯೂ ಹುಲಿವೇಷದ ಸಂಭ್ರಮ//ಹುಲಿಷೇಷದ ಸದ್ದು ಉಡುಪಿಯಲ್ಲಂತೂ ಜೋರಾಗಿಯೇ ಇದೆ. ಮಂಗಳವಾರ ಶ್ರೀಕೃಷ್ಣಮಠದಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದ್ದು, ಸಂಜೆ ವಿಟ್ಲಪಿಂಡಿ ಉತ್ಸವಕ್ಕೆ ನರ್ತಿಸಲು ಹುಲಿವೇಷಗಳು ರೆಡಿಯಾಗುತ್ತಿವೆ. ಸೋಮವಾರ ಸಂಜೆ ಉಡುಪಿ ರಥಬೀದಿಯಲ್ಲಿ ಮಳೆಯ ನಡುವೆಯೂ ಹುಲಿಗಳ ನರ್ತನ ಗಮನ ಸೆಳೆಯಿತು.
(4 / 7)
ಉಡುಪಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ// ಉಡುಪಿಯಲ್ಲಿ ನಾನಾ ಸಂಘ, ಸಂಸ್ಥೆಗಳು ಮುದ್ದುಕೃಷ್ಣ ಸ್ಪರ್ಧೆ ಏರ್ಪಡಿಸುತ್ತವೆ. ಉಡುಪಿ ಶ್ರೀಕೃಷ್ಣ ಮಠದಲ್ಲೂ ಮುದ್ದುಕೃಷ್ಣ ಸ್ಪರ್ಧೆ ಸೋಮವಾರ ಆಯೋಜಿಸಲಾಗಿತ್ತು. ಮುದ್ದುಕೃಷ್ಣರೊಂದಿಗೆ ಪುತ್ತಿಗೆ ಪರ್ಯಾಯ ಶ್ರೀಗಳೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
(5 / 7)
ಮಹಿಳೆಯರ ಹುಲಿವೇಷದ ಗೌಜಿ// ಅಲ್ಲಲ್ಲಿ ಹುಲಿವೇಷಗಳು ಜನರ ನಡುವೆ ಹೆಜ್ಜೆ ಹಾಕುತ್ತಿವೆ. ಹುಲಿವೇಷವನ್ನು ನೋಡಿ, ಕಾಲೇಜು ಮಕ್ಕಳೂ ನರ್ತಿಸುತ್ತಿದ್ದಾರೆ. ವಿಶೇಷವಾಗಿ ಹುಡುಗಿಯರು, ಮಹಿಳೆಯರು ಹುಲಿವೇಷ ಹಾಕುತ್ತಿದ್ದಾರೆ. ಸೋಮವಾರ ರಥಬೀದಿಯಲ್ಲಿ ಮಹಿಳಾ ವೇಷಧಾರಿಗಳ ನರ್ತನ ಗಮನ ಸೆಳೆಯಿತು.
(6 / 7)
ಉಡುಪಿ ಮಠಗಳಲ್ಲಿ ವಿಶೇಷ ಸಂಭ್ರಮ// ಉಡುಪಿಯ ಅಷ್ಟಮಠಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ವಿಶೇಷ ಸಂಭ್ರಮ. ವಿಶೇಷವಾಗಿ ಪರ್ಯಾಯ ಪುತ್ತಿಗೆ ಮಠಾಧೀಶರ ನೇತೃತ್ವದಲ್ಲಿ ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ಧಾರ್ಮಿಕ ಸಭೆಗಳ ಸಹಿತ ಹಲವು ಕಾರ್ಯಕ್ರಮಗಳು ಮಠದ ವತಿಯಿಂದ ನಡೆಯುತ್ತಿವೆ.
(7 / 7)
ವಿಟ್ಲಪಿಂಡಿಗೆ ಶ್ರೀಕೃಷ್ಣ ಮಠ ಸಿದ್ಧತೆ// ಮಂಗಳವಾರ ಉಡುಪಿಯಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಎಲ್ಲರೂ ಉಡುಪಿಯ ರಥಬೀದಿಯತ್ತ ಸಾಗುತ್ತಾರೆ. ಈ ಸಂದರ್ಭ ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ವಿಟ್ಲಪಿಂಡಿ ಜನಾಕರ್ಷಣೆ ಪಡೆಯುವ ಉತ್ಸವವಾಗಿದ್ದು, ಕೃಷ್ಣನಿಗೆ ಜಯಘೋಷವನ್ನು ಹಾಕುತ್ತಾ, ಸಂಭ್ರಮಿಸುತ್ತಾರೆ. ನಾನಾ ಸ್ಪರ್ಧೆಗಳು, ವೇಷಗಳ ಸಹಿತ ಉಡುಪಿಗೆ ಉಡುಪಿಯೇ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ. ಶ್ರೀಕೃಷ್ಣಮಠ ಸೋಮವಾರ ವಿಟ್ಲಪಿಂಡಿಗೆ ಸಿದ್ಧತೆಗಳನ್ನು ಮಾಡಿದೆ.
ಇತರ ಗ್ಯಾಲರಿಗಳು