ಉಡುಪಿ ಶ್ರೀಕೃಷ್ಣ ಮಠದ ಅಂಗಣದಲ್ಲಿ ಗಮನ ಸೆಳೆದ ಶ್ರೀಕೃಷ್ಣಲೀಲೋತ್ಸವ - ಮೊಸರು ಕುಡಿಕೆ ಉತ್ಸವ- ಚಿತ್ರನೋಟ-udupi news sri krishna leelotsava and mosaru kudike utsava celebrated in udupi krishna mutt check photos hsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉಡುಪಿ ಶ್ರೀಕೃಷ್ಣ ಮಠದ ಅಂಗಣದಲ್ಲಿ ಗಮನ ಸೆಳೆದ ಶ್ರೀಕೃಷ್ಣಲೀಲೋತ್ಸವ - ಮೊಸರು ಕುಡಿಕೆ ಉತ್ಸವ- ಚಿತ್ರನೋಟ

ಉಡುಪಿ ಶ್ರೀಕೃಷ್ಣ ಮಠದ ಅಂಗಣದಲ್ಲಿ ಗಮನ ಸೆಳೆದ ಶ್ರೀಕೃಷ್ಣಲೀಲೋತ್ಸವ - ಮೊಸರು ಕುಡಿಕೆ ಉತ್ಸವ- ಚಿತ್ರನೋಟ

Udupi Sri krishna leelotsava; ಉಡುಪಿಯೆಂಬ ಕೃಷ್ಣನಗರಿಯಲ್ಲಿ ವೈಭವದ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಸಹಸ್ರಾರು ಭಕ್ತರ ಸಮ್ಮುಖ ಮಂಗಳವಾರ ನೆರವೇರಿತು. ಹುಲಿವೇಷ ಸೇರಿ ವಿವಿಧ ವೇಷಧಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ಸಂಭ್ರಮ ಸಡಗರದ ಒಂದು ಚಿತ್ರನೋಟ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು) 

ಉಡುಪಿ ಶ್ರೀಕೃಷ್ಣ ಮಠದ ಆವರಣದಲ್ಲಿ ಮಂಗಳವಾರ ನಡೆದ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ದ ವೇಳೆ ನಡೆದ ಮೊಸರುಕುಡಿಕೆ ಉತ್ಸವದ ಒಂದು ನೋಟ. ಇನ್ನೊಂದು ಚಿತ್ರದಲ್ಲಿ  ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಭಕ್ತರಿಗೆ ಪ್ರಸಾದ ಹಂಚಿದ ಸಂದರ್ಭ.
icon

(1 / 10)

ಪೊಡವಿಗೊಡೆಯನ ನಾಡಲ್ಲಿ  ಮಳೆಸುರಿದು ಇಳೆ ತಂಪಾದಂತೆ ಬಿಸಿಲು-ಮೋಡದ ವಾತಾ ವರಣದಲ್ಲಿ ಚಿನ್ನದ ರಥವೇರಿದ ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯ ಮೆರ ವಣಿಗೆಯೊಂದಿಗೆ ಉಡುಪಿಯೆಂಬ ಕೃಷ್ಣನಗರಿಯಲ್ಲಿ ವೈಭವದ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಸಹ ಸ್ರಾರು ಭಕ್ತರ ಸಮ್ಮುಖ ಮಂಗಳವಾರ ನೆರವೇರಿತು. 
icon

(2 / 10)

ರಥವೇರಿದ ಮೃಣ್ಮಯ ಮೂರ್ತಿ: ಶ್ರೀಕೃಷ್ಣನ ಸನ್ನಿಧಿಯಲ್ಲಿ ಮೃಣ್ಮಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಮೂರ್ತಿ ಯನ್ನು ರಥಬೀದಿಗೆ ತಂದು ಚಿನ್ನದ ರಥ ದಲ್ಲಿ ಕೂರಿಸಲಾಯಿತು. ಜತೆಗೆ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರ ಉತ್ಸವ ಮೂರ್ತಿಗಳೂ ಚಿನ್ನ ಮತ್ತು ನವರತ್ನ ರಥದಲ್ಲಿ ಸಾಗಿದವು. ಅಪರಾಹ್ನ 3.30ಕ್ಕೆ ಪರ್ಯಾಯ ಶ್ರೀಪಾದರ ಜತೆಗೆ ಭಂಡಾರಕೇರಿ ಮಠಾಧೀ ಶರಾದ ಶ್ರೀ ವಿದ್ವೇಶತೀರ್ಥ ಶ್ರೀಪಾದರು ರಥ ಎಳೆದು ಉತ್ಸವಕ್ಕೆ ಚಾಲನೆ ನೀಡಿದರು. ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುತ್ತಿದ್ದಂತೆ ಸುರಿದ ಮಳೆ ಉತ್ಸವದ ಸಂಭ್ರಮ ಹೆಚ್ಚಿಸಿತು.
icon

(3 / 10)

ಮುಖ್ಯ ಪ್ರಾಣ ದೇವರಿಗೆ ಉಂಡೆ ಚಕ್ಕುಲಿ ಸಮರ್ಪಣೆಯ ಬಳಿಕ ಪಲ್ಲ ಪೂಜೆಯಾಗಿ ಪ್ರಸಾದವನ್ನುಭಕ್ತರಿಗೆವಿತ ರಿಸಲಾಯಿತು. ಅನ್ನಪ್ರಸಾದ ಸ್ವೀಕಾರಕ್ಕೆ ಭಕ್ತ ಸಮೂಹ ಕಿಕ್ಕಿರಿದು ತುಂಬಿತ್ತು.
icon

(4 / 10)

ಗಮನ ಸೆಳೆದ ಮಲ್ಲಕಂಬ ಪ್ರದರ್ಶನ: ಹುಬ್ಬಳ್ಳಿಯ ವೀರಸಾವರ್ಕರ್ ಬಳಗದ ಸದಸ್ಯರು ರಥಬೀದಿಯ ವೇದಿಕೆಯಲ್ಲಿ ಮಲ್ಲಕಂಬ ವಿಶೇಷ ಪ್ರದರ್ಶನ ನೀಡಿದರು. ಹಲವು ಕಸರತ್ತುಗಳನ್ನು ಶ್ರೀಪಾದರ ಸಮ್ಮುಖದಲ್ಲಿ ನಡೆಸಿ ಮೆಚ್ಚುಗೆ ಗಳಿಸಿದರು. ಸೇರಿದ್ದ ಭಕ್ತರು ಪ್ರದರ್ಶನವನ್ನು ಕಣ್ಣುಂಬಿಕೊಂಡರು.
icon

(5 / 10)

ಮಲ್ಲಕಂಬ ಪ್ರದರ್ಶನ ನೋಡುವುದಕ್ಕೆ ಕಿಕ್ಕಿರಿದು ತುಂಬಿದ್ದ ಜನಸಮೂಹ
icon

(6 / 10)

ಮಲ್ಲಕಂಬ ಪ್ರದರ್ಶನ ನೋಡುವುದಕ್ಕೆ ಕಿಕ್ಕಿರಿದು ತುಂಬಿದ್ದ ಜನಸಮೂಹ

ವೇಷಧಾರಿಗಳ ಸಂಭ್ರಮ: ಹುಲಿ ವೇಷ ಸಹಿತ ಸಣ್ಣಪುಟ್ಟ ವೇಷಗಳು ಅಷ್ಟಮಿ, ವಿಟ್ಲ ಪಿಂಡಿಯ ಪ್ರಧಾನ ಆಕರ್ಷಣೆ. ಮಹಿಳಾ ಹುಲಿಗಳು, ಹುಲಿವೇಷ, ರಕ್ಕಸ ವೇಷ, ಸಾಮಾಜಿಕ ಕಳಕಳಿಯಿಂದ ತೊಟ್ಟ ವಿಶೇಷ ಹಾಲಿವುಡ್‌ ಸಿನೆಮಾದ ಕಾಲ್ಪನಿಕ ಪಾತ್ರದ ವೇಷಗಳು ಗಮನ ಸೆಳೆದವು.
icon

(7 / 10)

ಶ್ರೀಕೃಷ್ಣ ಮಠದ ವೇದಿಕೆಯಲ್ಲಿ ಹುಲಿ ಕುಣಿತ
icon

(8 / 10)

ಶ್ರೀಕೃಷ್ಣ ಮಠದ ವೇದಿಕೆಯಲ್ಲಿ ಹುಲಿ ಕುಣಿತ

ಶ್ರೀಕೃಷ್ಣ ಮಠದ ವೇದಿಕೆಯಲ್ಲಿ ಹುಲಿ ಕುಣಿತದ ಒಂದು ನೋಟ
icon

(9 / 10)

ಶ್ರೀಕೃಷ್ಣ ಮಠದ ವೇದಿಕೆಯಲ್ಲಿ ಹುಲಿ ಕುಣಿತದ ಒಂದು ನೋಟ

ಮೊಸರು ಕುಡಿಕೆ ಉತ್ಸವ ಸಂಭ್ರಮ: ರಥಬೀದಿಯ ಸುತ್ತ ನೆಟ್ಟಿದ್ದ 13 ಗುರ್ಜಿಗಳ ಮಧ್ಯದಲ್ಲಿ ಮೊಸರು ತುಂಬಿದ ಕುಡಿಕೆ ಇರಿಸಲಾಗಿತ್ತು. ಮೊದಲಿಗೆ ಗೋವಳರು ಆಕರ್ಷಕ ವೇಷ ಧರಿಸಿ, ಕೇಕೆ ಹಾಕುತ್ತ ಶ್ರೀಕೃಷ್ಣ ಮಠದ ಎದುರು ನೆಟ್ಟ ಗುರ್ಜಿಯಲ್ಲಿನ ಮೊಸರು ಕುಡಿಕೆಯನ್ನು ಮೊದಲು ಒಡೆದರು. ಬಳಿಕ ಮೊಸರಿನ ಕುಡಿಕೆಗಳನ್ನು ಒಡೆಯಲಾಯಿತು. ಗೋವಳರು ಕೈಯಲ್ಲಿ ಕೋಲು ಹಿಡಿದು ಮೊಸರು ಕುಡಿಕೆಗೆ ಕುಟ್ಟುತ್ತಿದ್ದಂತೆ ಭಕ್ತರ ಸಂಭ್ರಮ ಮುಗಿಲುಮುಟ್ಟಿತು.
icon

(10 / 10)

ಇತರ ಗ್ಯಾಲರಿಗಳು