Udupi Paryaya: ಉಡುಪಿ ಪರ್ಯಾಯ: ಪುತ್ತಿಗೆ ಯತಿದ್ವಯರ ವೈಭವದ ಪುರಪ್ರವೇಶ, ಹೀಗಿತ್ತು ಮೆರವಣಿಗೆ ಕ್ಷಣ
- ಕೃಷ್ಣ ನಗರಿ ಉಡುಪಿಯಲ್ಲಿ ಈಗ ಪರ್ಯಾಯದ ಸಂಭ್ರಮ. ಮುಂದಿನ ವಾರ ನಡೆಯಲಿರುವ ಪರ್ಯಾಯ ಪೂಜಾನುಷ್ಠಾನಕ್ಕೂ ಮುನ್ನ ಯತಿದ್ವಯರ ಪುರಪ್ರವೇಶ, ಪೌರ ಸನ್ಮಾನ ಕಾರ್ಯಕ್ರಮ ಸೋಮವಾರ ಸಂಜೆ ಉಡುಪಿ ನಗರದಲ್ಲಿ ಕಳೆಗಟ್ಟಿಸಿತ್ತು. ಹೀಗಿತ್ತು ಆ ಕಾರ್ಯಕ್ರಮದ ನೋಟ.. ಚಿತ್ರ- ಮಾಹಿತಿ: ಹರೀಶ್ ಮಾಂಬಾಡಿ ಮಂಗಳೂರು
- ಕೃಷ್ಣ ನಗರಿ ಉಡುಪಿಯಲ್ಲಿ ಈಗ ಪರ್ಯಾಯದ ಸಂಭ್ರಮ. ಮುಂದಿನ ವಾರ ನಡೆಯಲಿರುವ ಪರ್ಯಾಯ ಪೂಜಾನುಷ್ಠಾನಕ್ಕೂ ಮುನ್ನ ಯತಿದ್ವಯರ ಪುರಪ್ರವೇಶ, ಪೌರ ಸನ್ಮಾನ ಕಾರ್ಯಕ್ರಮ ಸೋಮವಾರ ಸಂಜೆ ಉಡುಪಿ ನಗರದಲ್ಲಿ ಕಳೆಗಟ್ಟಿಸಿತ್ತು. ಹೀಗಿತ್ತು ಆ ಕಾರ್ಯಕ್ರಮದ ನೋಟ.. ಚಿತ್ರ- ಮಾಹಿತಿ: ಹರೀಶ್ ಮಾಂಬಾಡಿ ಮಂಗಳೂರು
(1 / 9)
ಉಡುಪಿ ಶ್ರೀಕೃಷ್ಣ ಮಠದಲ್ಲಿ 2024ರ ಜನವರಿ 18ರಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಶ್ರೀಕೃಷ್ಣಪೂಜೆಯ ಪರ್ಯಾಯ ವಹಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ಪುರಪ್ರವೇಶ ಮೆರವಣಿಗೆ ನಡೆಯಿತು.
(2 / 9)
ಯತಿದ್ವಯರ ಮೆರವಣಿಗೆಯಲ್ಲಿ ಪಾಲ್ಗೊಂಡ ಮಹಿಳಾ ಪ್ರತಿನಿಧಿಗಳು.ಸ್ತಬ್ದಚಿತ್ರಗಳು, ಸಮಾಜದ ವಿವಿಧ ಸಮುದಾಯಗಳ ಭಕ್ತರ ತಂಡೋಪತಂಡಗಳು, ವಾದ್ಯಘೋಷಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.
(3 / 9)
ಹುಲಿವೇಷ, ಕೇರಳ ಚೆಂಡಬಳಗ, ಭಜನಾ ತಂಡಗಳು, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್, ನಾಗಸ್ವರ ಮಂಗಳವಾದ್ಯಗಳು, ಕುಣಿತದ ಭಜನೆ, ಹರಿದಾಸರು, ಮರಕಾಲುಗಳು ಗಮನ ಸೆಳೆದವು., ಈ ವೇಳೆ ಪ್ರಧಾನಿ ಮೋದಿ ವೇಷಧಾರಿಯೂ ಆಕರ್ಷಣೆಯಾದರು.
(4 / 9)
ಶ್ರೀಗಳನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಹಿತ ಊರಿನ ಗಣ್ಯರು, ಸ್ವಾಗತ ಸಮಿತಿ ಪದಾಧಿಕಾರಿಗಳು, ಹಿರಿಯರು, ಜೋಡುಕಟ್ಟೆಯಲ್ಲಿ ಸ್ವಾಗತಿಸಿ, ಮೆರವಣಿಗೆಯಲ್ಲಿ ರಥಬೀದಿಗೆ ಕರೆತಂದರು.
(5 / 9)
ಆ ಪ್ರಯುಕ್ತ ಸ್ವಾಮೀಜಿಯವರು ಪರ್ಯಾಯ ಪೂರ್ವಭಾವಿಯಾಗಿ ದೇಶ, ವಿದೇಶಗಳಲ್ಲಿ ಸಂಚರಿಸಿ, ಪ್ರಸಿದ್ಧ 48 ತೀರ್ಥಕ್ಷೇತ್ರಗಳ ಮಂಡಲಯಾತ್ರೆ ಪೂರೈಸಿ, ಪಾವನತೀರ್ಥಗಳಲ್ಲಿ ಮಿಂದು, ಶ್ರೀಮಠದ ಅಭಿಮಾನಿಗಳಿಂದಲೂ ಮಧ್ವತತ್ವಗಳನ್ನು ಪಾಲಿಸುವ ಶ್ರೀಕೃಷ್ಣ ಮುಖ್ಯಪ್ರಾಣರ ಆರಾಧಕರಿಂದಲೂ ಸನ್ಮಾನಗೊಂಡ ಶ್ರೀಗಳು, ಮುಂದಿನ ಎರಡು ವರ್ಷಗಳ ಕಾಲ ತಮ್ಮ ಚತುರ್ಥ ಬಾರಿಯ ವಿಶ್ವಪರ್ಯಾಯವನ್ನು ಸಂಭ್ರಮಪೂರ್ವಕವಾಗಿ ಆಚರಿಸಲು ಜನವರಿ 8ರಂದು ಸೋಮವಾರ ರಜತಪೀಠಪುರಂ ಎಂದೇ ಹೇಳಲಾಗುವ ಉಡುಪಿಗೆ ಪುರಪ್ರವೇಶ ಮಾಡಿದರು.
(6 / 9)
ಹಯಗ್ರೀವ ದೇವರು, ಕೃಷ್ಣಸಾರಥಿ, ಪಂಡಾಪುರದ ಪಾಂಡುರಂಗ ದೇವರು, ಚಿನ್ನದ ಪಲ್ಲಕ್ಕಿ, ಗರುಡವಾಹನ ವಿಷ್ಣು ಮತ್ತಿತರ ಸ್ಥಬ್ದಚಿತ್ರಗಳು ಕಳೆನೀಡಿದವು ಮಠದ ಅಭಿಮಾನಿಗಳ ಜಯಘೋಷಗಳ ನಡುವೆ ಹೂವುಗಳಿಂದ ಭವ್ಯವಾಗಿ ಅಲಂಕರಿಸಲಾಗಿದ್ದ ಹಂಸರಥದಲ್ಲಿ ವಿರಾಜಮಾನರಾಗಿ ಅಪರಾಹ್ನ 3.30ಕ್ಕೆ ಉಡುಪಿಯ ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆ ಮೂಲಕ ಶ್ರೀಮಠದ ಸಕಲ ಗೌರವಗಳೊಂದಿಗೆ ಶ್ರೀಪಾದರನ್ನು ಬರಮಾಡಿಕೊಳ್ಳಲಾಯಿತು.
(7 / 9)
ಶ್ರೀಮಠದ ಉಪಾಸ್ಯ ದೇವರಾದ ರುಕ್ಮಿಣೀ, ಸತ್ಯಭಾಮಾ ಸಹಿತ ವಿಠಲ ದೇವರನ್ನು ಮುಂದಿರಿಸಿಕೊಂಡು, ಕ್ಷೇತ್ರದ ಸರ್ವದೇವರ ದರ್ಶನಪೂರ್ವಕ ಪೂಜ್ಯ ಶ್ರೀಪಾದದ್ವಯರು ಸಂಜೆ ಶ್ರೀಮಠ ಪ್ರವೇಶ ಮಾಡಿ ಪೂಜೆ ಸಲ್ಲಿಸಿದರು.
(8 / 9)
ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದು, ಶ್ರೀಮಠ ಪ್ರವೇಶ, ತದನಂತರ ರಥಬೀದಿಯ ವಿಶೇಷ ಆನಂದತೀರ್ಥ ವೇದಿಕೆಯಲ್ಲಿ ಸನ್ಮಾನ, ಅಭಿನಂದನೆ ಮೊದಲಾದ ಕಾರ್ಯಕ್ರಮಗಳು ನಡೆದವು.
ಇತರ ಗ್ಯಾಲರಿಗಳು