Ugadi 2024: ಯುಗಾದಿ ಎಂದರೆ ಅನ್ನದಾತರ ಉಳುಮೆ, ಪೂಜೆ, ಸಡಗರ, ಹೋಳಿಗೆ ಊಟ, ಹೀಗಿತ್ತು ಕರ್ನಾಟಕದಲ್ಲಿ ಹಬ್ಬ ಖುಷಿ ಕ್ಷಣಗಳು
- ಕರ್ನಾಟಕದಲ್ಲಿ ಯುಗಾದಿ ಹಬ್ಬವನ್ನು ನಾನಾ ರೂಪದಲ್ಲಿ ಆಚರಿಸಲಾಗುತ್ತದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದಲ್ಲಿ ಆಚರಣೆಗಳು ಭಿನ್ನವಾಗಿದೆ. ಆಶಯ ಮಾತ್ರ ಒಂದೇ. ಈ ಬಾರಿ ಯುಗಾದಿಯ ಚಿತ್ರ ನೋಟ ಇಲ್ಲಿದೆ.
- ಕರ್ನಾಟಕದಲ್ಲಿ ಯುಗಾದಿ ಹಬ್ಬವನ್ನು ನಾನಾ ರೂಪದಲ್ಲಿ ಆಚರಿಸಲಾಗುತ್ತದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದಲ್ಲಿ ಆಚರಣೆಗಳು ಭಿನ್ನವಾಗಿದೆ. ಆಶಯ ಮಾತ್ರ ಒಂದೇ. ಈ ಬಾರಿ ಯುಗಾದಿಯ ಚಿತ್ರ ನೋಟ ಇಲ್ಲಿದೆ.
(1 / 8)
ಯುಗಾದಿ ಬಂತೆಂದರೆ ಅನ್ನದಾತರಲ್ಲಿ ಸಂತೋಷ ಮನೆ ಮಾಡುತ್ತದೆ. ಮತ್ತೆ ಬಿತ್ತನೆಗೆ ಅಣಿಯಾಗುವ ಸಮಯ. ಉಳುಮೆ ಮಾಡಿ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವ ಸಂಪ್ರದಾಯ ಹಲವು ಕಡೆಯಿದೆ, ಮಂಡ್ಯ ಭಾಗದಲ್ಲಿ ಉಳುಮೆ ನಿರತ ರೈತರು.
(2 / 8)
ಮೈಸೂರು ಭಾಗದಲ್ಲಿ ಉಳುಮೆಗೆ ಮುನ್ನ ಬೆಳ್ಳಿಯ ತಟ್ಟೆಯಲ್ಲಿ ಮಣ್ಣನ್ನು ಇಟ್ಟು ಭೂಮಿ ತಾಯಿಗೆ ಗೌರವ ಸೂಚಿಸಲಾಗುತ್ತದೆ. ಹುಣಸೂರಿನ ಮಂಜುನಾಥ್ ಅವರ ಕುಟುಂಬದವರು ಯುಗಾದಿ ದಿನ ಉಳುಮೆ ಪೂಜೆ ನೆರವೇರಿಸಿದ್ದು ಹೀಗೆ.
(3 / 8)
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರದಲ್ಲಿ ಮನೆಯ ಮೇಲ್ಭಾಗದಲ್ಲಿ ಹೀಗೆ ಕೋಲಿನಲ್ಲಿ ಮಾವು ಬೇವು ಜೋಡಿ ಮಾಡಿ ಕಟ್ಟಿ ಪೂಜಿಸುವ ಸಂಪ್ರದಾಯವಿದೆ.
(5 / 8)
ಮನೆಗಳಲ್ಲಿ ಮಕ್ಕಳು ಬೇವು, ಬೆಲ್ಲ, ಮಾವಿನ ತಳಿರು ಹಿಡಿದು ಬಂದವರಿಗೆ ಸಿಹಿ- ಕಹಿ ಮಿಶ್ರಣವನ್ನು ನೀಡುವ ಸಂಪ್ರದಾಯವೂ ಹಲವು ಕಡೆ ಇದೆ.
(6 / 8)
ಕೆಲವರು ಪಂಚಾಂಗವನ್ನು ಬಳಸುವ ಸಂಪ್ರದಾಯವೂ ಇದೆ. ಹೊಸದಾಗಿ ಬರುವ ಪಂಚಾಂಗವನ್ನು ದೇವರ ಮುಂದಿಟ್ಟು ಓದುವ ಮೂಲಕ ಯುಗಾದಿ ಆಚರಿಸುವ ಕುಟುಂಬಗಳೂ ಇವೆ.
ಇತರ ಗ್ಯಾಲರಿಗಳು