ಕೇಂದ್ರ ಬಜೆಟ್ 2024: ಡಿಜಿಟಲ್ ಬಹಿಖಾತಾದಿಂದ ಬಜೆಟ್‌ ಬ್ರೀಫ್‌ಕೇಸ್‌ ತನಕ ಬಜೆಟ್ ಬ್ಯಾಗುಗಳ ಇತಿಹಾಸದತ್ತ ಇಣುಕುನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇಂದ್ರ ಬಜೆಟ್ 2024: ಡಿಜಿಟಲ್ ಬಹಿಖಾತಾದಿಂದ ಬಜೆಟ್‌ ಬ್ರೀಫ್‌ಕೇಸ್‌ ತನಕ ಬಜೆಟ್ ಬ್ಯಾಗುಗಳ ಇತಿಹಾಸದತ್ತ ಇಣುಕುನೋಟ

ಕೇಂದ್ರ ಬಜೆಟ್ 2024: ಡಿಜಿಟಲ್ ಬಹಿಖಾತಾದಿಂದ ಬಜೆಟ್‌ ಬ್ರೀಫ್‌ಕೇಸ್‌ ತನಕ ಬಜೆಟ್ ಬ್ಯಾಗುಗಳ ಇತಿಹಾಸದತ್ತ ಇಣುಕುನೋಟ

Union Budget News: ಮುಂದಿನ ವರ್ಷಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಫೆ.1ಕ್ಕೆ ಮಂಡಿಸುವ ಕೇಂದ್ರ ಬಜೆಟ್‌ ಪ್ರತಿವರ್ಷ ಜನರ ಗಮನಸೆಳೆಯುವ ವಿದ್ಯಮಾನ. ಇದರಲ್ಲಿ ಕೆಲವು ಕುತೂಹಲಕಾರಿ ಅಂಶಗಳೂ ಇವೆ. ಸದ್ಯ ಡಿಜಿಟಲ್ ಬಹಿಖಾತಾದಲ್ಲಿ ಕೇಂದ್ರ ಬಜೆಟ್‌ ಪ್ರತಿ  ವಿತ್ತ ಸಚಿವರ ಕೈ ಸೇರುತ್ತದೆ. ಈ ಕೇಂದ್ರ ಬಜೆಟ್‌ ಬ್ಯಾಗುಗಳ ಇತಿಹಾಸದತ್ತ ಒಂದು ಇಣುಕುನೋಟ ಇದು. 

ಡಿಜಿಟಲ್ ಬಹಿಖಾತಾದಿಂದ ಬಜೆಟ್‌ ಬ್ರೀಫ್‌ಕೇಸ್‌ ತನಕ ಬಜೆಟ್ ಬ್ಯಾಗುಗಳ ಇತಿಹಾಸ.
icon

(1 / 7)

ಡಿಜಿಟಲ್ ಬಹಿಖಾತಾದಿಂದ ಬಜೆಟ್‌ ಬ್ರೀಫ್‌ಕೇಸ್‌ ತನಕ ಬಜೆಟ್ ಬ್ಯಾಗುಗಳ ಇತಿಹಾಸ.

ಡಿಜಿಟಲ್ ಇಂಡಿಯಾ ಚಿಂತನೆಗೆ ಪೂರಕವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23 ರಲ್ಲಿ ರಾಷ್ಟ್ರಲಾಂಛನ ಹೊಂದಿರುವ ಕೆಂಪು ವೆಲ್ವೆಟ್‌ ಬ್ಯಾಗ್‌ (ಡಿಜಿಟಲ್ ಬಹಿಖಾತಾ)ನಲ್ಲಿ ಡಿಜಿಟಲ್ ಬಜೆಟ್‌ ಪ್ರತಿ (ಟ್ಯಾಬ್ಲೆಟ್‌)ಯನ್ನು ಹಿಡಿದು ಸಂಸತ್ತು ಪ್ರವೇಶಿಸಿದ್ದರು. ಲೋಕಸಭೆಯಲ್ಲಿ ಮುದ್ರಿತ ಹಣಕಾಸು ಹೇಳಿಕೆಯ ಪುಸ್ತಕ ಹಿಡಿದು ಓದುವ ಬದಲು, ಟ್ಯಾಬ್ಲೆಟ್‌ನಲ್ಲಿದ್ದ ಪಿಡಿಎಫ್‌ ಪ್ರತಿಯನ್ನು ಓದಿದ್ದರು. 
icon

(2 / 7)

ನಿರ್ಮಲಾ ಸೀತಾರಾಮನ್ ಅವರು 2019 ರಲ್ಲಿ, ಬ್ರಿಟಿಷ್ ಕಾಲದ ಸಂಪ್ರದಾಯವಾದ ಬಜೆಟ್ ಬ್ರೀಫ್‌ಕೇಸ್‌ ಬಿಟ್ಟು  ಬಹಿಖಾತಾ ಎಂದು ಕರೆಯಲ್ಪಡುವ ಕೆಂಪು-ವೆಲ್ವೆಟ್ ಬಟ್ಟೆಯಲ್ಲಿ ಮುಚ್ಚಿದ ಕೇಂದ್ರ ಹಣಕಾಸು ಹೇಳಿಕೆಯ ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತಂದಿದ್ದರು.
icon

(3 / 7)

ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ವಾರ್ಷಿಕ ಹಣಕಾಸು ಹೇಳಿಕೆಗಳನ್ನು “ಬಜೆಟ್‌” ಎಂದು ಗುರುತಿಸಲಾಗುತ್ತಿದೆ. ಬಜೆಟ್ ಎಂಬ ಪದದ ಮೂಲ ಫ್ರೆಂಚ್‌ ಪದವಾದ ಬೌಗೆಟ್‌ (bougette) ಎಂಬುದು. ಚರ್ಮದ ಬ್ರೀಫ್‌ಕೇಸ್‌ ಎಂಬುದು ಇದರ ಅರ್ಥ.
icon

(4 / 7)

ಬಜೆಟ್‌ ಬ್ರೀಫ್‌ಕೇಸ್‌ಗಳ ವಿಚಾರ ಗಮನಿಸಿದರೆ ಹಿಂದಿನ ಕೇಂದ್ರ ವಿತ್ತ ಸಚಿವರು ವಿವಿಧ ಬಣ್ಣಗಳ ಬ್ರೀಫ್‌ಕೇಸ್ ಬಳಸಿದ್ದು ಗಮನಿಸಬಹುದು. ಅದೇ ರೀತಿ ಕೇಂದ್ರ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಹಳೆಯ ಸಂಪ್ರದಾಯವನ್ನು ಮುಂದುವರಿಸಿ, 2019ರಲ್ಲಿ ಕಡುಗೆಂಪು ಕಂದು ವರ್ಣದ ಬ್ರೀಫ್‌ಕೇಸ್‌ನಲ್ಲಿ ಬಜೆಟ್‌ ಪ್ರತಿಯನ್ನು ಸಂಸತ್ತಿಗೆ ತಂದಿದ್ದರು. 
icon

(5 / 7)

ಇನ್ನು 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಅಂದಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ವಿಭಿನ್ನ ಚರ್ಮದ ಬ್ರೀಫ್‌ಕೇಸ್‌ನಲ್ಲಿ ಬಜೆಟ್‌ ಪ್ರತಿಯನ್ನು ಸಂಸತ್ತಿಗೆ ತಂದಿದ್ದರು.
icon

(6 / 7)

ಇನ್ನು 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಅಂದಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ವಿಭಿನ್ನ ಚರ್ಮದ ಬ್ರೀಫ್‌ಕೇಸ್‌ನಲ್ಲಿ ಬಜೆಟ್‌ ಪ್ರತಿಯನ್ನು ಸಂಸತ್ತಿಗೆ ತಂದಿದ್ದರು.(AFP/HT)

1800 ರ ದಶಕದ ಆರಂಭದಲ್ಲಿ 'ಬಜೆಟ್ ಇನ್ ಎ ಬ್ರೀಫ್‌ಕೇಸ್' ಎಂಬ ಇಂಗ್ಲಿಷ್ ಸಂಪ್ರದಾಯವು ಪ್ರಾರಂಭವಾಯಿತು. ವಿಲಿಯಂ ಇವಾರ್ಟ್ ಗ್ಲಾಡ್‌ಸ್ಟೋನ್ ಬಜೆಟ್ ಅನ್ನು ಕೆಂಪು ಬ್ರೀಫ್‌ಕೇಸ್‌ನಲ್ಲಿ ತರುವ ಮೂಲಕ ಶುರುವಾದ ಸಂಪ್ರದಾಯ ಇದು. ಅದೇ ಕೆಂಪು ಗ್ಲಾಡ್‌ಸ್ಟೋನ್ ಬಾಕ್ಸ್ ಅನ್ನು ಕೇಂದ್ರ ಬಜೆಟ್‌ಗಾಗಿ 2010 ರವರೆಗೆ ಬಳಸಲಾಯಿತು.
icon

(7 / 7)

1800 ರ ದಶಕದ ಆರಂಭದಲ್ಲಿ 'ಬಜೆಟ್ ಇನ್ ಎ ಬ್ರೀಫ್‌ಕೇಸ್' ಎಂಬ ಇಂಗ್ಲಿಷ್ ಸಂಪ್ರದಾಯವು ಪ್ರಾರಂಭವಾಯಿತು. ವಿಲಿಯಂ ಇವಾರ್ಟ್ ಗ್ಲಾಡ್‌ಸ್ಟೋನ್ ಬಜೆಟ್ ಅನ್ನು ಕೆಂಪು ಬ್ರೀಫ್‌ಕೇಸ್‌ನಲ್ಲಿ ತರುವ ಮೂಲಕ ಶುರುವಾದ ಸಂಪ್ರದಾಯ ಇದು. ಅದೇ ಕೆಂಪು ಗ್ಲಾಡ್‌ಸ್ಟೋನ್ ಬಾಕ್ಸ್ ಅನ್ನು ಕೇಂದ್ರ ಬಜೆಟ್‌ಗಾಗಿ 2010 ರವರೆಗೆ ಬಳಸಲಾಯಿತು.(National Portrait Gallery)

ಇತರ ಗ್ಯಾಲರಿಗಳು